ಗುರುವಾರ , ಡಿಸೆಂಬರ್ 12, 2019
17 °C

ಪೊಲೀಸ್‌ ಪಾತ್ರಕ್ಕೆ ಮಂದಿರಾ ತಯಾರಿ

Published:
Updated:
ಪೊಲೀಸ್‌ ಪಾತ್ರಕ್ಕೆ ಮಂದಿರಾ ತಯಾರಿ

ಮಂದಿರಾ ಬೇಡಿ ಈಗ ತಮಿಳು ಕಲಿಯುತ್ತಿದ್ದಾರೆ. ಜತೆಗೆ ಪೊಲೀಸ್‌ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದಾರಂತೆ. ಅಲ್ಲದೆ ವಾಸ್ತವದ ಪೊಲೀಸರ ಹಾವಭಾವಗಳನ್ನು ಹತ್ತಿರದಿಂದ ಗಮನಿಸುತ್ತಿದ್ದಾರಂತೆ.

ಮಂದಿರಾ ಏಕೆ ಪೊಲೀಸರನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ ಅಂತೀರಾ? ತಮಿಳಿನ ಚಿತ್ರ ‘ಆದಂಗಾಥೆಯಲ್ಲಿ ಮಂದಿರಾ ಪೊಲೀಸ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅದಕ್ಕಾಗಿ ಇಷ್ಟೆಲ್ಲ ತಯಾರಿ!

ಅನಿಲ್‌ ಕಪೂರ್ ಅವರೊಂದಿಗೆ ಕಿರುತೆರೆಯಲ್ಲಿ ‍ಪೊಲೀಸ್‌ ಪಾತ್ರ ಮಾಡಿದ್ದ ಮಂದಿರಾ, ತಮಿಳು ಸಿನಿಮಾದಲ್ಲಿ ಮತ್ತೆ ಪೊಲೀಸ್‌ ಸಮವಸ್ತ್ರ ಧರಿಸಲಿದ್ದಾರೆ. ’ನಾನು ಮಾಡುವ ಪೊಲೀಸ್‌ ಪಾತ್ರಕ್ಕೆ ನ್ಯಾಯ ಸಿಗಬೇಕು. ಮಾಡುವ ಕೆಲಸ ಪಕ್ಕಾ ಇರಬೇಕು. ಅದಕ್ಕಾಗಿ ಇಷ್ಟೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಹಾಗೂ ಸಮಯ ಮೀಸಲಿಟ್ಟಿದ್ದೇನೆ’ ಎನ್ನುತ್ತಾರೆ ನಟಿ ಮಂದಿರಾ.

ಪ್ರತಿಕ್ರಿಯಿಸಿ (+)