ಸೋಮವಾರ, ಡಿಸೆಂಬರ್ 16, 2019
23 °C

ರಾಷ್ಟ್ರಪತಿ ಚುನಾವಣೆ ಶೇ 99ರಷ್ಟು ಮತ ಚಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆ ಶೇ 99ರಷ್ಟು ಮತ ಚಲಾವಣೆ

ನವದೆಹಲಿ: ದೇಶದ 14ನೇ ರಾಷ್ಟ್ರಪತಿ ಆಯ್ಕೆಯಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ 99ರಷ್ಟು ಮತ ಚಲಾವಣೆಯಾಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 20ರಂದು ಮತ ಎಣಿಕೆ ನಡೆಯಲಿದೆ.

ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಹಾಗೂ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್‌ ಕಣದಲ್ಲಿದ್ದರು.

ಅರುಣಾಚಲ ಪ್ರದೇಶ, ಚತ್ತೀಸಗಡ, ಅಸ್ಸಾಂ, ಗುಜರಾತ್‌, ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ನಾಗಾಲೆಂಡ್‌, ಉತ್ತರಾಖಂಡ, ಪುದುಚೆರಿಗಳಲ್ಲಿ ಶೇ 100ರಷ್ಟು ಮತ ಚಲಾವಣೆ ಆಗಿವೆ.

ಸಂಸತ್‌ನಲ್ಲಿ ಶೇ 99ರಷ್ಟು ಮತ ಚಲಾವಣೆಯಾಗಿವೆ.

ಪ್ರತಿಕ್ರಿಯಿಸಿ (+)