ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌ ರೆಡ್ಡಿ ದ್ವಿಶತಕದ ಸೊಬಗು

ಅಧ್ಯಕ್ಷರ ಇಲೆವೆನ್‌ ಬೃಹತ್‌ ಮೊತ್ತ; ಮೀರ್‌ ಕೌನೈನ್‌ ಅಬ್ಬಾಸ್‌ ಅರ್ಧಶತಕ
Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಲಗೈ ಬ್ಯಾಟ್ಸ್‌ಮನ್‌ ಅಭಿಷೇಕ್‌ ರೆಡ್ಡಿ (201; 193ಎ, 23ಬೌಂ, 6ಸಿ) ಸೋಮವಾರ ಆರ್‌ಎಸ್‌ಐ ಮೈದಾನದಲ್ಲಿ ರನ್‌ ಮಳೆ ಸುರಿಸಿದರು.

ಅವರ ಅಮೋಘ ದ್ವಿಶತಕದ ಬಲದಿಂದ ಅಧ್ಯಕ್ಷರ ಇಲೆವೆನ್‌ ತಂಡ ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯ ಬೆಂಗ ಳೂರು ವಲಯ ವಿರುದ್ಧದ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆ ಹಾಕಿದೆ.

ಮೊದಲು ಬ್ಯಾಟ್‌ ಮಾಡಿದ್ದ ಬೆಂಗಳೂರು ವಲಯ ತಂಡ 60.1 ಓವರ್‌ಗಳಲ್ಲಿ 233ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಅಧ್ಯಕ್ಷರ ಇಲೆವೆನ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 6 ವಿಕೆಟ್‌ಗೆ 400ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದೆ.

ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಬೆಂಗಳೂರು ವಲಯ ತಂಡ ದಿನದಾಟದ ಅಂತ್ಯಕ್ಕೆ 29.1 ಓವರ್‌ಗಳಲ್ಲಿ 3 ವಿಕೆಟ್‌ಗೆ 131ರನ್‌ ಪೇರಿಸಿದೆ.
ಬ್ಯಾಟಿಂಗ್‌ ಆರಂಭಿಸಿದ ಅಧ್ಯಕ್ಷರ ಇಲೆವೆನ್‌ ತಂಡ ವೇಗದ ಆಟಕ್ಕೆ ಮುಂದಾಯಿತು.  ಈ ತಂಡದ ಅಭಿಷೇಕ್‌ ಅಬ್ಬರದ ಆಟದ ಮೂಲಕ ಗಮನ ಸೆಳೆದರು.

ಹೋದ ವರ್ಷದ ರಣಜಿ ಟ್ರೋಫಿ ವೇಳೆ ಗಾಯಗೊಂಡಿದ್ದ ಅಭಿ ಷೇಕ್‌ ಹತ್ತು ತಿಂಗಳ ಕಾಲ ಅಂಗಳದಿಂದ ದೂರ ಉಳಿದಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ ಈ ಟೂರ್ನಿ ಯಲ್ಲಿ ಆಡುತ್ತಿರುವ ಅವರು ಬೆಂಗಳೂರು ವಲಯ ತಂಡದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಊಟದ ವಿರಾಮಕ್ಕೂ ಮುನ್ನ 20 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸಹಿತ 170 ರನ್‌ ಗಳಿಸಿದ್ದ ಅವರು, ಆ ನಂತರವೂ ಗರ್ಜಿಸಿ ದ್ವಿಶತಕದ ಸಂಭ್ರಮ ಆಚರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 192 ಎಸೆತ. ಅಭಿಷೇಕ್‌ ಅವರಿಗೆ ಮೀರ್‌ ಕೌನೈನ್‌ ಅಬ್ಬಾಸ್‌ (54) ಮತ್ತು ಕೆ.ಸಿ. ಅವಿನಾಶ್‌ (ಔಟಾಗದೆ 26) ಸೂಕ್ತ ಬೆಂಬಲ ನೀಡಿದರು.

ಬೆಂಗಳೂರು ವಲಯ ಪರ  ಅಬ್ರಾರ್‌ ಖಾಜಿ  ಯಶಸ್ವಿ ಬೌಲರ್‌ ಎನಿಸಿದರು. ಅವರು 74ರನ್‌ ನೀಡಿ 3 ವಿಕೆಟ್‌ ಉರುಳಿಸಿದರು.

ದ್ವಿತೀಯ ಇನಿಂಗ್ಸ್‌ ಶುರು ಮಾಡಿರುವ ಬೆಂಗಳೂರು ವಲಯ ತಂಡ ಆರಂಭಿಕ ಸಂಕಷ್ಟ ಅನುಭವಿಸಿತು. ಅಭಿನವ್‌ ಮನೋಹರ್‌ 25ರನ್‌ ಗಳಿಸಿ ಔಟಾದರು. ಆದರೆ ಸಮರ್ಥ್‌ ಊಟಿ ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು. ಅವರು 72ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಡ್ರಾ ಪಂದ್ಯದಲ್ಲಿ ಉಪಾಧ್ಯಕ್ಷರ ಇಲೆವೆನ್‌: ಆಲೂರಿನ ಮೂರನೇ ಮೈದಾನದಲ್ಲಿ ನಡೆದ ಸಂಯುಕ್ತ ಇಲೆವೆನ್‌ ಮತ್ತು ಉಪಾಧ್ಯಕ್ಷರ ಇಲೆವೆನ್‌ ನಡುವಣ ಪಂದ್ಯ ಡ್ರಾ ಆಯಿತು.

ಮೊದಲು ಬ್ಯಾಟ್‌ ಮಾಡಿದ್ದ ಉಪಾಧ್ಯಕ್ಷರ ಇಲೆವೆನ್‌ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 353ರನ್‌ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 55.2 ಓವರ್‌ಗಳಲ್ಲಿ 121ರನ್‌ ಗಳಿಸಿದ್ದ ಸಂಯುಕ್ತ ಇಲೆವೆನ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 1 ವಿಕೆಟ್‌ಗೆ 51ರನ್‌ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ವಲಯ: ಮೊದಲ ಇನಿಂಗ್ಸ್‌: 60.1 ಓವರ್‌ಗಳಲ್ಲಿ 233. ಮತ್ತು 29.1 ಓವರ್‌ಗಳಲ್ಲಿ 3 ವಿಕೆಟ್‌ಗೆ 131 (ಅಭಿನವ್‌ ಮನೋಹರ್‌ 25, ಸಮರ್ಥ್‌ ಊಟಿ 72). ಅಧ್ಯಕ್ಷರ ಇಲೆವೆನ್‌: ಪ್ರಥಮ ಇನಿಂಗ್ಸ್‌: 71 ಓವರ್‌ಗಳಲ್ಲಿ 6 ವಿಕೆಟ್‌ಗೆ 400 ಡಿಕ್ಲೇರ್ಡ್‌ (ಅಭಿಷೇಕ್‌ ರೆಡ್ಡಿ 201, ಮೀರ್‌ ಕೌನೈನ್‌ ಅಬ್ಬಾಸ್‌ 54, ಕೆ.ಸಿ. ಅವಿನಾಶ್‌ ಔಟಾಗದೆ 26; ಅಬ್ರಾರ್‌ ಖಾಜಿ 74ಕ್ಕೆ3).

ಉಪಾಧ್ಯಕ್ಷರ ಇಲೆವೆನ್‌: ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 353. ಸಂಯುಕ್ತ ಇಲೆವೆನ್‌: ಪ್ರಥಮ ಇನಿಂಗ್ಸ್‌: 55.2 ಓವರ್‌ಗಳಲ್ಲಿ 121 (ಅಮನ್‌ ರಾಜ್‌ 32, ರಿತೇಶ್‌ ಭಟ್ಕಳ್‌ 27, ಆರ್‌. ಹರೀಶ್‌ ಕುಮಾರ್‌ 20; ಎಚ್‌.ಎಸ್‌. ಶರತ್‌ 32ಕ್ಕೆ3, ಮಿತ್ರಕಾಂತ್‌ ಸಿಂಗ್‌ ಯಾದವ್‌ 25ಕ್ಕೆ3, ಆದಿತ್ಯ ಸೋಮಣ್ಣ 16ಕ್ಕೆ2). ದ್ವಿತೀಯ ಇನಿಂಗ್ಸ್‌: 15 ಓವರ್‌ಗಳಲ್ಲಿ 1 ವಿಕೆಟ್‌ಗೆ 51 (ದೇವದತ್ತ ಪಡಿಕಲ್‌ ಔಟಾಗದೆ 27). ಫಲಿತಾಂಶ: ಡ್ರಾ.

ಅಭಿಷೇಕ್‌ ಮೂರನೇ ದ್ವಿಶತಕ..
ಶಫಿ ದಾರಾಶಾ ಟೂರ್ನಿಯಲ್ಲಿ ಅಭಿಷೇಕ್‌ ದಾಖಲಿಸಿದ ಒಟ್ಟಾರೆ ಮೂರನೇ ದ್ವಿಶತಕ ಇದಾಗಿದೆ. 2015 ಮತ್ತು 2016ರಲ್ಲೂ ಅವರು ದ್ವಿಶತಕದ ಸಾಧನೆ ಮಾಡಿದ್ದರು.

22 ವರ್ಷದ ಅಭಿಷೇಕ್‌ ಅವರು ಟೂರ್ನಿಯಲ್ಲಿ ಮೂರು ಶತಕಗಳನ್ನೂ ಸಿಡಿಸಿದ್ದಾರೆ. ಅವರು ಒಟ್ಟಾರೆ 135.5ರ ಸರಾಸರಿಯಲ್ಲಿ 1,220ರನ್‌ ದಾಖ ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT