ಶನಿವಾರ, ಡಿಸೆಂಬರ್ 7, 2019
25 °C

168ನೇ ಸ್ಥಾನಕ್ಕೆ ಏರಿದ ರಾಮಕುಮಾರ್

Published:
Updated:
168ನೇ ಸ್ಥಾನಕ್ಕೆ ಏರಿದ ರಾಮಕುಮಾರ್

ನವದೆಹಲಿ: ಭಾರತದ ಭರವಸೆಯ ಟೆನಿಸ್‌ ಆಟಗಾರ ರಾಮಕುಮಾರ್‌ ರಾಮನಾಥನ್‌ ಅವರು ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 168ನೇ ಸ್ಥಾನಕ್ಕೇರಿದ್ದಾರೆ. ಇದು ಚೆನ್ನೈನ ರಾಮಕುಮಾರ್‌ ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

22 ವರ್ಷದ ರಾಮಕುಮಾರ್‌ ಅವರು ಇತ್ತೀಚೆಗೆ ಅಮೆರಿಕದಲ್ಲಿ ನಡೆದಿದ್ದ  ವಿನ್ನೆಟ್ಕಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಇದರೊಂದಿಗೆ 48 ಪಾಯಿಂಟ್ಸ್‌ ಹೆಕ್ಕಿರುವ ಅವರು ಒಟ್ಟು ಪಾಯಿಂಟ್ಸ್‌ ಅನ್ನು 328ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ 16 ಸ್ಥಾನ ಬಡ್ತಿ ಹೊಂದಿದ್ದಾರೆ.

ರಾಮಕುಮಾರ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಗರಿಷ್ಠ ರ್‍ಯಾಂಕಿಂಗ್‌ ಹೊಂದಿರುವ ಭಾರತದ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ.

ಅನುಭವಿ ಆಟಗಾರ ಯೂಕಿ ಭಾಂಬ್ರಿ 212ನೇ ಸ್ಥಾನದಲ್ಲಿದ್ದಾರೆ. ಪ್ರಜ್ಞೇಶ್‌ ಗುಣೇಶ್ವರನ್‌, ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ಸುಮಿತ್‌ ನಗಾಲ್‌ ಅವರು ಕ್ರಮವಾಗಿ 214, 293 ಮತ್ತು 306ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

227ನೇ ಸ್ಥಾನದಲ್ಲಿ ಅಂಕಿತಾ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಂಕಿತಾ ರೈನಾ ಅವರು ಗರಿಷ್ಠ ರ್‍ಯಾಂಕಿಂಗ್‌ ಹೊಂದಿರುವ ಭಾರತದ ಆಟಗಾರ್ತಿ ಎನಿಸಿದ್ದಾರೆ. ಅವರು 277ನೇ ಸ್ಥಾನದಲ್ಲಿದ್ದಾರೆ. ನೈಮನ್‌ ಐಟಿಎಫ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಕರ್ಮನ್‌ಕೌರ್‌ ಥಂಡಿ  400 ನೇ ಸ್ಥಾನಕ್ಕೇರಿದ್ದಾರೆ.

ಪ್ರತಿಕ್ರಿಯಿಸಿ (+)