‘ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡು ವೃತ್ತಿ ಜೀವನದಲ್ಲಿ ಹೊಸ ಸವಾಲು ಎದುರಿಸಲು ಸಜ್ಜಾಗಿದ್ದೇನೆ. ಇದು ಅತ್ಯಂತ ರೋಮಾಂಚಕ ಕ್ಷಣ. ಬೆಂಗಳೂರು ಎಫ್‌ಸಿಯಲ್ಲಿ ಆಡಲು ಅವಕಾಶ ಲಭಿಸಿರುವುದು ಮಹತ್ವದ ವಿಷಯ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಮುಂದೆ ಸಾಗಬೇಕಿದೆ. ಆದ್ದರಿಂದ ಶೀಘ್ರದಲ್ಲೇ ತರಬೇತಿಗೆ ಹಾಜರಾಗುತ್ತೇನೆ’ ಎಂದು ಆ್ಯಂಟೊನಿಯೊ ಹೇಳಿದ್ದಾರೆ.