ರಾಜ್ಯದ ಖ್ಯಾತಿಗೆ ಚಿನ್ನ

7

ರಾಜ್ಯದ ಖ್ಯಾತಿಗೆ ಚಿನ್ನ

Published:
Updated:

ಗುಂಟೂರು, ಆಂಧ್ರಪ್ರದೇಶ: ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕದ ಖ್ಯಾತಿ ವಖಾರಿಯಾ ಅವರು ಇಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಜ್ಯದ ಜಾಯ್ಲಿನ್‌ ಎಂ. ಲೋಬೊ ಅವರು ಬೆಳ್ಳಿ ಜಯಿಸಿದ್ದಾರೆ.

ಮಹಿಳೆಯರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ರಾಜ್ಯದ ಸವಾಲು ಎತ್ತಿ ಹಿಡಿದಿದ್ದ 27 ವರ್ಷದ ಖ್ಯಾತಿ ಅವರು 3.70 ಮೀಟರ್ಸ್‌ ಸಾಮರ್ಥ್ಯ ತೋರಿ ಚಿನ್ನಕ್ಕೆ ಕೊರಳೊಡ್ಡಿದರು.

ಈ ವಿಭಾಗದ ಬೆಳ್ಳಿ ಮತ್ತು ಕಂಚು ಕ್ರಮವಾಗಿ ಪಂಜಾಬ್‌ನ ಕಿರಣ್‌ಬೀರ್‌ ಕೌರ್‌ (3.40 ಮೀ.) ಮತ್ತು ತಮಿಳುನಾಡಿನ ಮಂಜುಕಾ (3.30 ಮೀ.) ಅವರ ಪಾಲಾದವು.

ಮಹಿಳೆಯರ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಾಯ್ಲಿನ್‌ ಅವರು 12.52 ಮೀಟರ್ಸ್‌ ದೂರ ಜಿಗಿದು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.

ಕೇರಳದ ಎನ್‌.ವಿ. ಶೀನಾ ಅವರು ಈ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು. ಶೀನಾ ಅವರಿಂದ 12.78 ಮೀಟರ್ಸ್‌ ಸಾಮರ್ಥ್ಯ ಮೂಡಿಬಂತು. ಮಹಿಳೆಯರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕಣದಲ್ಲಿದ್ದ ರಾಜ್ಯದ ರಶ್ಮಿ ಶೆಟ್ಟಿ ಅವರು ಕಂಚು ತಮ್ಮದಾಗಿಸಿಕೊಂಡರು.

ರಶ್ಮಿ ಅವರು ಜಾವೆಲಿನ್ ಅನ್ನು 47.76 ಮೀಟರ್ಸ್‌ ದೂರ ಎಸೆದರು. ಈ ವಿಭಾಗದ ಚಿನ್ನ ಅನು ರಾಣಿ ಅವರ ಪಾಲಾಯಿತು. ಅನು ಅವರು ಮೊದಲ ಪ್ರಯತ್ನದಲ್ಲಿ 54.29 ಮೀಟರ್ಸ್‌ ಸಾಮರ್ಥ್ಯ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry