ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರ ವೇಳೆಗೆ ನಗರ ತೊರೆಯಲಿದ್ದಾರೆ ಜನ! : ವಿಶ್ವ ಸಂಪನ್ಮೂಲ ಸಂಸ್ಥೆ ಎಚ್ಚರಿಕೆ

Last Updated 17 ಜುಲೈ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘2025ನೇ ಇಸವಿ ವೇಳೆಗೆ ಉಂಟಾಗುವ ತೀವ್ರ ನೀರಿನ ಅಭಾವ ಮತ್ತು ತಾಪಮಾನ ಏರಿಕೆಯಿಂದಾಗಿ ಜನ ಬೆಂಗಳೂರನ್ನು ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ವಿಶ್ವ ಸಂಪನ್ಮೂಲ ಸಂಸ್ಥೆಯ (ಡಬ್ಲ್ಯುಆರ್‌ಐ) ಅಧ್ಯಯನ ಹೇಳಿದೆ.

ನಗರವು ನೀರಿನ ಬವಣೆ ಎದುರಿಸುವುದನ್ನು ತಪ್ಪಿಸಲು ಡಬ್ಲ್ಯುಆರ್‌ಐ, ರಾಜ್ಯ ಸರ್ಕಾರದೊಂದಿಗೆ ಸೇರಿ ಯೋಜನೆಗಳನ್ನು ರೂಪಿಸಲು ಮುಂದಾಗಿದೆ.
‘1990ರಿಂದ 2015ರವರೆಗೆ ನಗರ ಶೇ 80ರಷ್ಟು ಮೇಲ್ಮೈ ನೀರನ್ನು ಕಳೆದುಕೊಂಡಿದೆ. ನಗರೀಕರಣ ಹೀಗೆ ಮುಂದುವರಿದರೆ ಶೀಘ್ರ ಇದೊಂದು ಮರುಭೂಮಿ ಆಗಲಿದೆ’ ಎಂದು ಅಧ್ಯಯನ ವರದಿಯಲ್ಲಿ  ಹೇಳಲಾಗಿದೆ.

‘ಈಗಲೂ ನಾವು ಮನಸ್ಸು ಮಾಡಿದರೆ ನಗರವನ್ನು ಉಳಿಸಬಹುದು. ಆದರೆ, ಅದಕ್ಕೆ ಸಂಯೋಜಿತ ಪ್ರಯತ್ನ ಅಗತ್ಯ. ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಕೆರೆ ಸಂರಕ್ಷಣಾ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಡಬ್ಲ್ಯುಆರ್‌ಐನ ಸುಸ್ಥಿರ ನಗರ ವಿಭಾಗದ ನಿರ್ದೇಶಕಿ ಜಯಾ ಡಿಂಡೊ ತಿಳಿಸಿದರು.

‘ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿರುವ ನಗರಕ್ಕೆ ಕಾವೇರಿ ನೀರನ್ನು ಪೂರೈಸುವುದು ದುಬಾರಿ. ಆದರೂ, ಶೇ 49.25 ರಷ್ಟು ನೀರು ಲೆಕ್ಕಕ್ಕೆ ಸಿಗದೆ ಪೋಲಾಗುತ್ತಿದೆ. ಅದನ್ನು ತಡೆಯುವ ಪ್ರಯತ್ನ ಆಗಬೇಕು’ ಎಂದು ತಿಳಿಸಿದರು.

‘ನಗರದ ಹೊರಭಾಗದಲ್ಲಿ ನೆಲೆಸಿರುವ ಸುಮಾರು 22 ಲಕ್ಷ (ಶೇ 25ರಷ್ಟು) ಜನರಿಗೆ ಕಾವೇರಿ ನೀರು ಪೂರೈಕೆ ಸೌಲಭ್ಯವಿಲ್ಲ. ಇದರ ಪರಿಣಾಮ , ಜನಸಂಖ್ಯೆ ಹೆಚ್ಚಿದಂತೆ ಅಂತರ್ಜಲ ಮಟ್ಟ ಕುಗ್ಗುತ್ತಾ ಹೋಗುತ್ತದೆ’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT