ಶುಕ್ರವಾರ, ಡಿಸೆಂಬರ್ 13, 2019
20 °C

ಉತ್ತರಪ್ರದೇಶ ವಿಧಾನಸಭೆಯಲ್ಲಿ ಪತ್ತೆಯಾದ ಬಿಳಿ ಪುಡಿ ಸ್ಫೋಟಕ ವಸ್ತು ಆಗಿತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ ವಿಧಾನಸಭೆಯಲ್ಲಿ ಪತ್ತೆಯಾದ ಬಿಳಿ ಪುಡಿ ಸ್ಫೋಟಕ ವಸ್ತು ಆಗಿತ್ತೇ?

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಳೆದ ವಾರ ಬಿಳಿ ಪುಡಿ ಪತ್ತೆಯಾಗಿದ್ದು, ಆ ಪುಡಿ ಏನೆಂದು ಪರೀಕ್ಷೆ ನಡೆಸುವುದಕ್ಕಾಗಿ ಅದರ ಮಾದರಿಯನ್ನು ಆಗ್ರಾದ ಎಫ್ಎಸ್‍ಎಲ್ ಲ್ಯಾಬ್‍ಗೆ ಕಳಿಸಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ವಿಧಾನಸಭೆಯಲ್ಲಿ ಪತ್ತೆಯಾದ ಬಿಳಿ ಬಣ್ಣದ ಪೌಡರ್ ಸ್ಫೋಟಕ ವಸ್ತು ಎಂದು ಹೇಳಲಾಗಿತ್ತು. ಆದರೆ ಆಗ್ರಾದ ಲ್ಯಾಬ್ ಆ ಪೌಡರ್‍ನಲ್ಲಿ ಯಾವುದೇ ಸ್ಫೋಟಕ ವಸ್ತುವಿನ ಅಂಶ ಪತ್ತೆಯಾಗಿಲ್ಲ ಎಂದು ಹೇಳಿದೆ.

ಆದಾಗ್ಯೂ, ಜುಲೈ 12ರಂದು ವಿಧಾನಸಭೆಯಲ್ಲಿ  ಪತ್ತೆಯಾದ ಆ ಪೌಡರ್ ಪ್ಲಾಸ್ಟಿಕ್ ಸ್ಫೋಟಕ ವಸ್ತು  Pentaerythritol tetranitrate (PETN) ಒಳಗೊಂಡಿದೆ ಎಂದು  ಲಖನೌ‍ದ ಎಸ್‍ಎಫ್‍ಎಸ್‍ಎಲ್ ಹೇಳಿರುವುದಾಗಿ ನಾಲ್ಕು ದಿನಗಳ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಹೇಳಿದ್ದರು.

ಆದರೆ ಎಫ್‍ಎಸ್‍ಎಲ್ ಲ್ಯಾಬ್ ವಿಧಾನಸಭೆಯಲ್ಲಿ ಪತ್ತೆಯಾದ ಪೌಡರ್‍ PETN ಅಲ್ಲ. ಎಫ್‍ಎಸ್‍ಎಲ್ ಆಗ್ರಾದಲ್ಲಿ ಇದನ್ನು ಪತ್ತೆ ಮಾಡುವ ಯಾವುದೇ ಯಂತ್ರಗಳು ಇಲ್ಲ. ಹಾಗಾಗಿ ಅಲ್ಲಿಗೆ ಪೌಡರ್ ಮಾದರಿಯನ್ನು ಕಳುಹಿಸಿಲ್ಲ ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ.

ಉತ್ತರ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡುವ ಏಕೈಕ ಲ್ಯಾಬ್ ನಮ್ಮದು ಎಂದು ಎಫ್‍ಎಸ್‍ಎಲ್ ಹೇಳಿಕೊಂಡಿತ್ತು.

ಬಿಳಿ ಪೌಡರ್‍ PETN ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಲಖನೌ‍ದಿಂದ ನಮಗೆ ಯಾವುದೇ ಪೌಡರ್  ಮಾದರಿಯನ್ನು ಕಳುಹಿಸಿಕೊಟ್ಟಿಲ್ಲ. ವಿಧಾನಸಭೆಯಲ್ಲಿ ಜುಲೈ 12ರಂದು ಪತ್ತೆಯಾದ ಬಿಳಿ ಪೌಡರ್‍‍ನ್ನು ಜುಲೈ 14ರಂದು PETN ಎಂದು ಹೇಳಲಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಆಗ್ರಾದಲ್ಲಿ ಮಾತ್ರ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡುವ ಲ್ಯಾಬ್ ಇದೆ ಎಂದು ಆಗ್ರಾ ಲ್ಯಾಬ್‍ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಾಸಕರ ಆಸನದಲ್ಲಿ ಪತ್ತೆಯಾದ ಆ ಬಿಳಿ ಪೌಡರ್ ಏನೆಂದು ಪತ್ತೆ ಹಚ್ಚಲು ಇನ್ನೆರಡು ಪರೀಕ್ಷೆಗಳನ್ನು ನಡೆಸಲಾಗುವುದು. ಗುರುವಾರ ಈ ಪರೀಕ್ಷೆಯ ವರದಿ ಲಭ್ಯವಾಗಲಿದೆ ಎಂದು ಲ್ಯಾಬ್ ಅಧಿಕಾರಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಿಳಿ ಪೌಡರ್ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಯಿಸಿದ್ದ ಆದಿತ್ಯನಾಥ ಇದು 'ಭಯೋತ್ಪಾದನಾ ಸಂಚು' ಎಂದು ಹೇಳಿದ್ದರು.

ಪ್ರತಿಕ್ರಿಯಿಸಿ (+)