ಮಂಗಳವಾರ, ಡಿಸೆಂಬರ್ 10, 2019
18 °C

ವಿಷ ಉಣಿಸಿ ಪತ್ನಿ ಕೊಂದ ಕಾನ್‌ಸ್ಟೆಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷ ಉಣಿಸಿ ಪತ್ನಿ ಕೊಂದ ಕಾನ್‌ಸ್ಟೆಬಲ್

ಯಾದಗಿರಿ: ಪೊಲೀಸ್ ಕಾನ್‌ಸ್ಟೆಬಲ್ ಪತ್ನಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ನಗರಠಾಣೆಯ ಕಾನ್‌ಸ್ಟೆಬಲ್ ಮಹೇಂದ್ರ ಈ ಕೃತ್ಯವೆಸನಿದ್ದಾನೆ. ಹಣಮಂತಿ (26) ಕೊಲೆಯಾದ  ಮಹಿಳೆ.

ನಗರದ ಪೊಲೀಸ್ ವಸತಿ ಗೃಹದಲ್ಲಿ  ಭಾನುವಾರ ಮಧ್ಯರಾತ್ರಿ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ  ತಂದೆ ಈರಪ್ಪ ದೂರು ನೀಡಿದ್ದಾರೆ.

ಆರೋಪಿ ತಲೆಮರೆಸಿಕೊಂಡಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳುವುದಾಗಿ ನಗರಠಾಣೆ ಪಿಎಸ್ಐ ಮಹಾಂತೇಶ್ ಸಜ್ಜನ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)