ಬುಧವಾರ, ಡಿಸೆಂಬರ್ 11, 2019
20 °C
ಕನಕಪುರ ರೂರಲ್ ಕಾಲೇಜಿನಲ್ಲಿ ‘ಬಾಲ್ಯ ವಿವಾಹ ತಡೆಗಟ್ಟುವ ಮತ್ತು ಶಾಲೆ ಕಡೆ ನನ್ನ ನಡೆ’ ಕಾರ್ಯಕ್ರಮ

ಬಾಲ್ಯವಿವಾಹ ಸಮಾಜದ ಘೋರ ಅಪರಾಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲ್ಯವಿವಾಹ ಸಮಾಜದ ಘೋರ ಅಪರಾಧ

ಕನಕಪುರ: ಬಾಲ್ಯ ವಿವಾಹ ಮಾಡುವುದು ಕಾನೂನಿನನ್ವಯ ಘೋರ ಅಪರಾಧ, ಅದರಿಂದ ಮಕ್ಕಳು ಉತ್ತಮ ಭವಿಷ್ಯ ವನ್ನು ನೀವೇ ನಾಶ ಮಾಡಿ ದಂತಾಗುತ್ತದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಹಮ್ಮದ್‌ ಮುಜಾಹಿದ್‌ ಉಲ್ಲಾ ಹೇಳಿದರು.

ನಗರದ ರೂರಲ್‌ ಕಾಲೇಜಿನಲ್ಲಿ   ಸೋಮವಾರ ಏರ್ಪಡಿಸಿದ್ದ ‘ಬಾಲ್ಯ ವಿವಾಹ ತಡೆಗಟ್ಟುವ ಮತ್ತು ಶಾಲೆ ಕಡೆ ನನ್ನ ನಡೆ’ ಕಾರ್ಯಕ್ರಮದಲ್ಲಿ ಮಾತ ನಾಡಿದರು. 

ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಬಣ್ಣದ ಕನಸು ಕಟ್ಟಿಕೊಳ್ಳುವ ಪೋಷಕರು ಉತ್ತಮ ವಿದ್ಯಾಭ್ಯಾಸ ಕೊಡಿ ಸುತ್ತಾರೆ. ಅವರಿಗಿಷ್ಟ ಆಗುವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಆದರೆ ಮದುವೆ ವಯಸ್ಸಿಗೂ ಮುನ್ನವೇ ಅವರಿಗೆ ಬಾಲ್ಯವಿವಾಹ ಮಾಡಿ ಅವರ ಭವಿಷ್ಯ ನಾಶ ಪಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಬಾಲ್ಯ ವಿವಾಹ ವಾಗಿರುವವರಲ್ಲಿ ಶೇಕಡ 40 ರಷ್ಟು ಮಂದಿ ಸಾವನಪ್ಪಿದ್ದಾರೆ, ಬಾಲ್ಯ ವಿವಾಹ ಕೇರಳದಲ್ಲಿ ಹೆಚ್ಚಿದೆ, ಹರಿ ಯಾಣದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಮುಂದಾಗಿರುವ ಕಾರಣ ಬಹುಪಾಲು ಕಡಿಮೆಯಾಗಿದೆ, ಎಲ್ಲರೂ ಸೇರಿ ಬಾಲ್ಯವಿವಾಹ ಶೂನ್ಯ ಮಾಡಬೇಕಿದೆ ಎಂದು ತಿಳಿಸಿದರು.

ಹೆಣ್ಣಾಗಲಿ, ಗಂಡಾಗಲಿ ಬಾಲ್ಯವಿವಾಹಕ್ಕೆ ವಿರೋಧ ವ್ಯಕ್ತಪಡಿಸ ಬೇಕೆಂದು ಹೇಳಿದರು.

ಸಮಾಜದಲ್ಲಿ ಇಂದಿಗೂ ಗಂಡಾದರೆ ಒಳ್ಳೆಯದು, ಹೆಣ್ಣಾದರೆ ಕೆಟ್ಟದ್ದು ಎಂಬು ಭಾವನೆಯಿದೆ, ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಸಮಾನರು, ಸಮಾನವಾದ ಅವಕಾಶಗಳಿವೆ, ಗಂಡು ಹೆಣ್ಣು ಎಂಬ ತಾರತಮ್ಯ ಬೇಡವೆಂದು ಹೇಳಿದರು.

ಮಕ್ಕಳು ಮನೆಯಲ್ಲಿ ಕಾಲ ಕಳೆಯುವುದಕ್ಕಿಂತ ಶಾಲೆಗಳಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ, ಮಕ್ಕಳನ್ನು ತಿದ್ದುವ ಸರಿದಾರಿಗೆ ತರುವ ಅವಕಾಶ ಶಾಲೆಗಳಲ್ಲಿ ಹೆಚ್ಚಿರುತ್ತದೆ ಎಂದರು.

ಶಿಕ್ಷಕರು, ಪ್ರಾಧ್ಯಾಪಕರು ಸ್ವಲ್ಪ ತಾಳ್ಮೆ ಮತ್ತು ಸಹನೆಯಿಂದ ವರ್ತಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸ ಬಹುದು. ಶಾಲೆಗಳಲ್ಲಿ ದೊರೆತ ಸಂಸ್ಕಾರ ಮತ್ತು ಉತ್ತಮ ವಿಚಾರಗಳು ಮುಂದೆ ಮಕ್ಕಳನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸಲಿದೆ ಎಂದರು.

ವಕೀಲ ಬಿ.ಶಿವರುದ್ರಯ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.  ವಕೀಲರ ಸಂಘದ ಅಧ್ಯಕ್ಷ ಕೆ.ನಂಜೇಗೌಡ ಬಾಲ್ಯ ವಿವಾಹದಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌  ಇಲಾಖೆ ಹಾಗೂ ಗ್ರಾಮಾ ಂತರ ವಿದ್ಯಾ ಪ್ರಚಾರಕ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.

ನ್ಯಾಯಾಧೀಶರಾದ ಡಿ. ವೇಣುಗೋಪಾಲ್‌, ಗೀತಾಮಣಿ, ನಾಗಮ್ಮ ಮಹದೇವಪ್ಪ ಇಚ್ಚಂಗಿ, ಡಿ.ಹೇಮಾಶ್ರೀ, ವಕೀಲರ ಸಂಘದ ಉಪಾಧ್ಯಕ್ಷ ಸಿ.ಎಂ.ಜಗದೀಶ್‌, ಕಾರ್ಯ ದರ್ಶಿ ದೇವುರಾವ್‌ಜಾದವ್‌, ಸರ್ಕಾರಿ ಅಭಿಯೋಜಕ ಬಿ.ನಾರಾಯಣ ಸ್ವಾಮಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಕೆ.ಕಾವೇರಿ, ಸಮಾಜ ಕಲ್ಯಾಣಾ ಧಿಕಾರಿ ಎನ್. ನರಸಿಂಹ, ವಕೀಲರಾದ  ಆರ್.ರಾಮಚಂದ್ರು,  ಮುತ್ತೇಗೌಡ,  ಪ್ರಮೀಳ, ಕೆ. ಮುನಿರಾಜು, ಗೋಪಾಲ್ ಗೌಡ, ಮಾದೇಗೌಡ, ಅನಿತಾ ಇದ್ದರು.

**

ಕಾನೂನು ಉಲ್ಲಂಘಿಸಿದರೆ ಶಿಕ್ಷೆ

ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ವಯಸ್ಸಾಗುವ ತನಕ ಮದುವೆ ಮಾಡಬಾರದೆಂದು ಕಾನೂನು ರೂಪಿಸಲಾಗಿದೆ, ಅದನ್ನು ಉಲ್ಲಂಘಿಸಿದವರಿಗೆ ಕಾನೂನಿನಡಿ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ನ್ಯಾಯಾಧೀಶ ಮಹಮ್ಮದ್ ಮುಜಾಹಿದ್‌ ಉಲ್ಲಾ ತಿಳಿಸಿದರು.

ವಯೋಮಿತಿಗಿಂತ ಕಿರಿಯ ವಯಸ್ಸಿನಲ್ಲಿ ವಿವಾಹವಾದರೆ ಅವರು ಇನ್ನೂ ಮಕ್ಕಳಾಗಿ ಇರುತ್ತಾರೆ, ಅವರಿಗೆ ಮಕ್ಕಳಾದರೆ ಮುಂದಿನ ಜೀವನ ಹಾಗೂ ಭವಿಷ್ಯ ಕರಾಳವಾಗುತ್ತದೆ ಎಂದರು.

ಪ್ರತಿಕ್ರಿಯಿಸಿ (+)