ಬುಧವಾರ, ಡಿಸೆಂಬರ್ 11, 2019
25 °C

ಬಾಲ ಗಂಗಾಧರ್ ತಿಲಕ್ ಅವರ ಮರಿ ಮೊಮ್ಮಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲ ಗಂಗಾಧರ್ ತಿಲಕ್ ಅವರ ಮರಿ ಮೊಮ್ಮಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪುಣೆ: ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ್ ತಿಲಕ್ ಅವರ ಮರಿ ಮೊಮ್ಮಗ ಕಾಂಗ್ರೆಸ್ ನೇತಾರ ರೋಹಿತ್ ತಿಲಕ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ರೋಹಿತ್ ತಿಲಕ್ ಒತ್ತಾಯಿಸುತ್ತಿದ್ದರು ಎಂದು ಮಹಿಳೆ ದೂರಿರುವುದಾಗಿ ಪೊಲೀಸರು ಹೇಳಿದ್ದಾರೆ. ಕಳೆದ ರಾತ್ರಿ ರೋಹಿತ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬಾಲಗಂಗಾಧರ್ ತಿಲಕ್ ಅವರ ಮರಿ ಮೊಮ್ಮಗ, ಕಾಂಗ್ರೆಸ್‍ನ  ಹಿರಿಯ ನಾಯಕ ಮತ್ತು ಸಂಸದರಾಗಿದ್ದ ದಿವಂಗತ ಜಯಂತ್ ರಾವ್ ಅವರ ಮೊಮ್ಮಗ ಈ  ರೋಹಿತ್ ತಿಲಕ್.

ದೂರು ನೀಡಿರುವ 40ರ ಹರೆಯದ ಮಹಿಳೆ ಮತ್ತು ರೋಹಿತ್ ಕೆಲವು ವರ್ಷಗಳಿಂದ ಪರಿಚಿತರಾಗಿದ್ದಾರೆ. ಮದುವೆಯಾಗುವುದಾಗಿ ಮಾತು ಕೊಟ್ಟು ರೋಹಿತ್ ಆಕೆಯ ಜತೆ ಪದೇ ಪದೇ ಸೆಕ್ಸ್ ಮಾಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.

2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೋಹಿತ್ ಬಿಜೆಪಿಯ ಗಿರೀಶ್ ಬಾಪತ್ ವಿರುದ್ಧ ಪರಾಭವಗೊಂಡಿದ್ದರು.

ಪ್ರತಿಕ್ರಿಯಿಸಿ (+)