ಶನಿವಾರ, ಡಿಸೆಂಬರ್ 7, 2019
25 °C

ಅಂದ ಚೆಂದದ ಕುರಿತು ಗಮನ ಹರಿಸಿಲ್ಲ: ನವಾಜುದ್ದಿನ್ ಸಿದ್ದಿಕಿ

Published:
Updated:
ಅಂದ ಚೆಂದದ ಕುರಿತು ಗಮನ ಹರಿಸಿಲ್ಲ: ನವಾಜುದ್ದಿನ್ ಸಿದ್ದಿಕಿ

ಮುಂಬೈ: ಬಾಲಿವುಡ್ ಪ್ರತಿಭಾವಂತ ನಟ ನವಾಜುದ್ದಿನ್ ಸಿದ್ದಿಕಿ ಅನುಭವಕ್ಕೆ ಬಂದ ವರ್ಣಬೇಧದ  ಕುರಿತು  ಟ್ವಿಟರ್‌ ಮೂಲಕ ಬೇಸರ ಹೊರಹಾಕಿದ್ದಾರೆ.

‘ಸ್ಫುರದ್ರೂಪಿ ಕಲಾವಿದರೊಂದಿಗೆ ನಟಿಸಲು ನಾನು ಅರ್ಹನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ನೋಡಲು ಸುಂದರನಲ್ಲ, ಗಾಢ ಬಣ್ಣ ಹೊಂದಿರುವವನು. ಆದರೆ, ನಾನೆಂದಿಗೂ ಅದರ ಕಡೆಗೆ ಗಮನಕೊಟ್ಟವನಲ್ಲ’ ಎಂದು ನವಾಜುದ್ದಿನ್ ಸಿದ್ದಿಕಿ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಚೆಂದಕ್ಕಿಂತ ಪ್ರತಿಭೆಗೆ ಹೆಚ್ಚು ಬೆಲೆಯಿದೆ ಎಂದು ತಮ್ಮ ಹಿಂದಿನ ಸಂದರ್ಶನದಲ್ಲಿ ಸಿದ್ದಿಕಿ ಹೇಳಿಕೊಂಡಿದ್ದರು.

ಪ್ರಸ್ತುತ ವರ್ಣಬೇಧದ ಕುರಿತು ಮಾಡಿರುವ ಟ್ವೀಟ್‌ನ ಹಿನ್ನೆಲೆ ಏನು, ಯಾವ ಘಟನೆ ಕಾರಣ ಎನ್ನುವುದರ ಕುರಿತು ನವಾಜುದ್ದಿನ್ ಸಿದ್ದಿಕಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಪ್ರತಿಕ್ರಿಯಿಸಿ (+)