ಗುರುವಾರ , ಡಿಸೆಂಬರ್ 12, 2019
17 °C

ಪ್ರೊ.ಸಿಎನ್ಆರ್ ರಾವ್ 'ವಿಶ್ವ ಕನ್ನಡ ಸಮ್ಮೇಳನ' ಉದ್ಘಾಟಿಸಲಿ: ಸಾಹಿತಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೊ.ಸಿಎನ್ಆರ್ ರಾವ್ 'ವಿಶ್ವ ಕನ್ನಡ ಸಮ್ಮೇಳನ' ಉದ್ಘಾಟಿಸಲಿ: ಸಾಹಿತಿಗಳ ಆಗ್ರಹ

ಬೆಂಗಳೂರು: ಸಾಹಿತಿಗಳು ಹಾಗೂ ಚಿಂತಕರೊಂದಿಗೆ ನಡೆದ ಸಭೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಒಪ್ಪಿಗೆ ದೊರೆತಿದ್ದು,  ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಸಲು ಸಿಎಂ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ  ‘ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿ. ಉದ್ಘಾಟನೆಗೆ ಪ್ರೊ.ಸಿಎನ್ಆರ್ ರಾವ್ ಅವರನ್ನು ಆಹ್ವಾನಿಸಿ’ ಎಂದು ಸಾಹಿತಿಗಳು ಸಲಹೆ ನೀಡಿದ್ದಾರೆ.

'ಮೊದಲ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾತನಾಡಿದ್ದ ಕುವೆಂಪು ಅವರು ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ಣಗೊಳ್ಳುವವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತೆ ಕರೆ ನೀಡಿದ್ದರು. ಎರಡನೇ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವಂತೆ ಕರೆನೀಡಿದ್ದರು. ನಾರಾಯಣಮೂರ್ತಿಯಂತಹ ಕನ್ನಡ ದ್ರೋಹಿಗಳನ್ನು, ಕನ್ನಡ ಶಬ್ದ ಉಚ್ಚರಿಸದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಅಂತಹವರನ್ನೂ ಕರೆಯುವುದು ಬೇಡ' ಎಂದು ಸಭೆಯಲ್ಲಿ ಪ್ರೊ. ಚಂದ್ರಶೇಖರ್‌ ಪಾಟೀಲ, ಕುಂ.ವೀರಭದ್ರಪ್ಪ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)