ಭಾನುವಾರ, ಡಿಸೆಂಬರ್ 15, 2019
18 °C

ಭಾರತದ 158 ಸೈನಿಕರ ಸಾವು ಎಂದು ವರದಿ ಮಾಡಿದ್ದ ಪಾಕಿಸ್ತಾನ ಮಾಧ್ಯಮಗಳು: ಕಿಡಿ ಕಾರಿದ ರಕ್ಷಣಾ ಸಚಿವಾಲಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರತದ 158 ಸೈನಿಕರ ಸಾವು ಎಂದು ವರದಿ ಮಾಡಿದ್ದ ಪಾಕಿಸ್ತಾನ ಮಾಧ್ಯಮಗಳು: ಕಿಡಿ ಕಾರಿದ ರಕ್ಷಣಾ ಸಚಿವಾಲಯ

ನವದೆಹಲಿ: ಪಾಕಿಸ್ತಾನ ಮಾಧ್ಯಮಗಳು, ಭಾರತದ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಪ್ರಕಟಿಸಿದ್ದ ವರದಿಯ ಕುರಿತು ರಕ್ಷಣಾ ಸಚಿವಾಲಯ ಕಿಡಿ ಕಾರಿದೆ.

ಇದೊಂದು ಬೇಜವ್ದಾರಿಯಿಂದ ಕೂಡಿದ ವರದಿ ಎಂದಿರುವ ಸಚಿವಾಲಯದ ವಕ್ತಾರ ಗೋಪಾಲ್‌ ಬಾಗ್ಲೆ ಅವರು, ‘ಇದಕ್ಕೆ ಯಾವುದೇ ಆಧಾರವಿಲ್ಲ. ಇದು ದುರುದ್ದೇಶ ಹಾಗೂ ಕುಚೇಷ್ಟೆಯಿಂದ ಕೂಡಿದ ವರದಿಯಾಗಿದೆ’ ಎಂದು ದೂರಿದ್ದಾರೆ.

ಪಾಕಿಸ್ತಾನ ಮಾಧ್ಯಮಗಳು, ಸಿಕ್ಕಿಂ ಗಡಿ ಪ್ರದೇಶದಲ್ಲಿ  ಚೀನಾ ಸೇನೆ ನಡೆದಿ ಕಾರ್ಯಾಚರಣೆಯಲ್ಲಿ ಭಾರತದ 158 ಸೈನಿಕರು ಹತ್ಯೆಯಾಗಿದ್ದಾರೆ ಎಂದು ವರದಿ ಮಾಡಿದ್ದವು.

ಪ್ರತಿಕ್ರಿಯಿಸಿ (+)