ಭಾನುವಾರ, ಡಿಸೆಂಬರ್ 8, 2019
25 °C

ಮಹಿಳಾ ಕ್ರಿಕೆಟ್‌ ವಿಶ್ವಕಪ್‌: ಇಂಗ್ಲೆಂಡ್‌ಗೆ 219ರನ್‌ ಗುರಿ ನೀಡಿದ ದಕ್ಷಿಣ ಆಫ್ರಿಕಾ

Published:
Updated:
ಮಹಿಳಾ ಕ್ರಿಕೆಟ್‌ ವಿಶ್ವಕಪ್‌: ಇಂಗ್ಲೆಂಡ್‌ಗೆ 219ರನ್‌ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಬ್ರಿಸ್ಟಲ್‌: ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್‌ ಗೆ 219ರನ್‌ಗಳ ಸಾಧಾರಣ ಗುರಿ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಫ್ರಿಕಾ ನಾಡಿನ ತಂಡ ನಿಗದಿತ 50ಓವರ್‌ ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 218ರನ್‌ ಕಲೆಹಾಕಿದ್ದಾರೆ.

ಆರಂಭಿಕ ಆಟಗಾರ್ತಿ ಲೌರಾ ವೋಲ್ವಾರ್ಡ್ತ್‌(66) ಹಾಗೂ ಮಿಗಾನ್‌ ಪ್ರೀಜ್‌(76) ಗಳಿಸಿದ ಅರ್ಧಶತಕಗಳು ಆಫ್ರಿಕಾ ಇನಿಂಗ್ಸ್‌ಗೆ ಬಲ ನೀಡಿದವು.

ಇಂಗ್ಲೆಂಡ್‌ ಪರ ಅನ್ಯಾ ಶ್ರುಬ್ಸೋಲೆ, ನಟಾಲಿಯಾ ಸ್ಕೀವರ್‌, ಜೆನ್ನಿ ಗನ್‌ ಹಾಗೂ ಹೀಥರ್‌ ನೈಟ್‌ ತಲಾ ಒಂದು ವಿಕೆಟ್‌ ಪಡೆದು ತಮ್ಮ ತಂಡಕ್ಕೆ ನೆರವಾದರು.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಜುಲೈ 20ರಂದು ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡದ ಎದುರು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.

ಲೀಗ್ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಇಂಗ್ಲೆಂಡ್‌ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದು, ಆಸ್ಟ್ರೇಲಿಯಾ ತಂಡವನ್ನು ಬಿಟ್ಟರೆ ವಿಶ್ವಕಪ್‌ನಲ್ಲಿ ಆಧಿಪತ್ಯ ಸಾಧಿಸಿರುವ ಎರಡನೇ ತಂಡ ಎನಿಸಿದೆ. ಈ ತಂಡ ಈಗಾಗಲೇ ಮೂರು ಬಾರಿ ಚಾಂಪಿಯನ್‌ ಪಟ್ಟಕ್ಕೇರಿದ್ದು, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಆದರೆ ಡೇನ್‌ ವಾನ್‌ ನೀಕರ್ಕ್ ಮುಂದಾಳತ್ವದ ದಕ್ಷಿಣ ಆಫ್ರಿಕಾ ಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿ ಕಣಕ್ಕಿಳಿದಿದೆ.ಈ ತಂಡ ಇದುವರೆಗೆ ಒಮ್ಮೆಯೂ ಫೈನಲ್ ತಲುಪಿಲ್ಲ. ಎರಡನೇ ಬಾರಿ ಸೆಮಿಫೈನಲ್‌ ತಲುಪಿರುವುದೇ ಈ ತಂಡದ ಉತ್ತಮ ಸಾಧನೆ. 

ಪ್ರತಿಕ್ರಿಯಿಸಿ (+)