ಗುರುವಾರ , ಡಿಸೆಂಬರ್ 12, 2019
17 °C

ದಲಿತರ ಪರ ಮಾತನಾಡಲು ಅವಕಾಶ ನಿರಾಕರಣೆ: ರಾಜ್ಯಸಭೆಗೆ ಮಾಯಾವತಿ ರಾಜಿನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದಲಿತರ ಪರ ಮಾತನಾಡಲು ಅವಕಾಶ ನಿರಾಕರಣೆ: ರಾಜ್ಯಸಭೆಗೆ ಮಾಯಾವತಿ ರಾಜಿನಾಮೆ

ನವದೆಹಲಿ:  ರಾಜ್ಯ ಸಭೆಯಲ್ಲಿ ದಲಿತರ ಪರವಾಗಿ ಮಾತನಾಡಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ  ಮಾಯಾವತಿ ಮಂಗಳವಾರ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸಂಸತ್ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ರಾಜ್ಯಸಭಾ ಕಲಾಪದಲ್ಲಿ ಪಾಲ್ಗೊಂಡಿದ್ದ ಮಾಯಾವತಿ ಅವರು ದಲಿತರ ಮೇಲಿನ ದೌರ್ಜನ್ಯದ ಬಗ್ಗೆ  ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲವುಂಟಾಗಿದೆ.

ಈ ವೇಳೆ ಕೋಪಗೊಂಡ ಮಾಯಾವತಿ, ಸದನದಲ್ಲಿ ಮಾತನಾಡಲು ಅವಕಾಶ ನೀಡದೇ ಇದ್ದರೆ ನಾನು ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ಸದನದಿಂದ  ಹೊರ ನಡೆದಿದ್ದರು.

ಕೊನೆಗೂ ಮಾತನಾಡಲು ಅವಕಾಶ ನೀಡದಿದ್ದರಿಂದ ಕೋಪಗೊಂಡ ಮಾಯಾವತಿ ನುಡಿದಂತೆ ರಾಜ್ಯಸಭೆಗೆ ರಾಜಿನಾಮೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)