ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಿಯರ ಪಾಂಡಾ ಪ್ರೀತಿ!

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಟೆಡ್ಡಿ ಬೇರ್‌ ಯಾರಿಗೆ ಇಷ್ಟ ಇಲ್ಲ ಹೇಳಿ? ಮುದ್ದಾದ ಈ ಗೊಂಬೆಗಳನ್ನು ತಯಾರಿಸಲು ಸ್ಫೂರ್ತಿ ಸಿಕ್ಕಿದ್ದೇ ಪಾಂಡಗಳಿಂದ. ಈ ಚೀನಿಯರಿಗೆ ಪಾಂಡಾ ಎಂದರೆ ಎಲ್ಲಿಲ್ಲದ ಪ್ರೀತಿ.

ಟೀ–ಶರ್ಟ್, ಕಾರಿನ ಗಾಜಿನ ಮೇಲೆ ಪಾಂಡಾ ಚಿತ್ರಗಳನ್ನು ಬಿಡಿಸಿಕೊಳ್ಳುವುದು ತಮ್ಮ ದಿನ ಬಳಕೆಯ ವಸ್ತುಗಳಲ್ಲಿಯೂ ಪಾಂಡಾ ಚಿತ್ರದ ಪ್ರಭಾವ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಈ ಮುದ್ದು ಪಾಂಡಾ ಸೌರ ವಿದ್ಯುತ್ ಸ್ಥಾವರದ ಕಟ್ಟಡ ವಿನ್ಯಾಸದ ಮೇಲೂ ಕಾಣಸಿಗುತ್ತದೆ. ಚೀನಾದ ಡಾಟೊಂಗ್ ಹಳ್ಳಿಯಲ್ಲಿ ಹೊಸದಾಗಿ ಈ ವಿದ್ಯುತ್ ಘಟಕ ಆರಂಭವಾಗಿದೆ. ಈ ಸ್ಥಾವರದ ವಿನ್ಯಾಸ ಮೇಲೆನಿಂದ ನೋಡಿದರೆ ಪಾಂಡಾದಂತೆಯೇ ಕಾಣುತ್ತದೆ.

ಈ ಸೌರ ವಿದ್ಯುತ್ ಸ್ಥಾವರ 248 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಕಟ್ಟಡ ಕಪ್ಪು ಹಾಗೂ ಬಿಳಿಯ ಬಣ್ಣದ ಪಾಂಡಾ ಮಾದರಿಯಂತೆ ನಿರ್ಮಿಸಲಾಗಿದೆ. ಇದು ಚೀನಾದ ಮೊದಲ ಸೌರ ವಿದ್ಯುತ್‌ ಘಟಕ. ಈ ಕಟ್ಟಡ ವಿನ್ಯಾಸ ಮಾಡಿದವರು ಗ್ರೀನ್ ಎನರ್ಜಿ ಗ್ರೂಪ್.

ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ತಯಾರುಮಾಡುವ ಈ ಘಟಕದಲ್ಲಿ ಒಟ್ಟು 100 ಕಿಲೊ ವ್ಯಾಟ್ ಉತ್ಪಾದನೆ ಮಾಡಬಹುದು. ಈ ಯೋಜನೆಯನ್ನು (ಯುಎನ್‌ಡಿಪಿ) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT