ಬುಧವಾರ, ಡಿಸೆಂಬರ್ 11, 2019
20 °C

ಟ್ರೋಲ್ ಸೋನಾಕ್ಷಿ ಉಡುಗೆ

Published:
Updated:
ಟ್ರೋಲ್ ಸೋನಾಕ್ಷಿ ಉಡುಗೆ

ನಟೀಮಣಿಯರು ತೊಡುವ ಉಡುಪುಗಳು ವಿವಾದಕ್ಕೊಳಗಾಗುವುದು ಹೊಸದೇನಲ್ಲ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆಯ ನಂತರದ ಸರದಿ ಈಗ ಸೋನಾಕ್ಷಿಯದ್ದು.

ಈ ಬಾರಿಯ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಸೋನಾಕ್ಷಿ ಸಿನ್ಹಾ ತೊಟ್ಟಿದ್ದ ದಿರಿಸಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲ ಸೋನಾಕ್ಷಿ ದಿರಿಸು ಮತ್ತು ಮೇಕ್ ಓವರ್ ಅನ್ನೇ ವಿಷಯವಾಗಿಟ್ಟುಕೊಂಡು ಟ್ರೋಲ್‌ಗಳು ಹರಿದಾಡುತ್ತಿವೆ.

ಅಂದ ಹಾಗೆ ಮೊನ್ನೆ ನಡೆದ ಐಫಾ ಸಮಾರಂಭದಲ್ಲಿ ಸೋನಾಕ್ಷಿ ಚಿನ್ನದ ಅಂಚಿನ ಬಿಳಿ ಲಂಗ ತೊಟ್ಟು ಅದಕ್ಕೆ ತೋಳಿಲ್ಲದ ರವಿಕೆ ಉಟ್ಟು, ಎದೆ ಮೇಲೆ ಬಣ್ಣಬಣ್ಣದ ದುಪಟ್ಟಾ ಧರಿಸಿದ್ದರು. ಟ್ರೋಲ್‌ಗಳಿಗೆ ವಸ್ತುವಾಗಿರುವುದು ಅವರ ಈ ಉಡುಗೆಯಲ್ಲ. 

ಅವರು ತಮ್ಮ ಕಪ್ಪು ಕೂದಲನ್ನು ಬಂಗಾರದ ಬಣ್ಣ ಮಾಡಿಸಿಕೊಂಡು, ಹಣೆಗೆ ದೊಡ್ಡ ಬಿಂದಿ ಇಟ್ಟು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೆಲ್ಲಾ ಗಮನಿಸಿರುವ ಅಭಿಮಾನಿಗಳು ‘ಸೋನಾಕ್ಷಿಗೆ ಉಡುಗೆ ತೊಡುಗೆ ಬಗ್ಗೆ ಸಂವೇದನೆಗಳೇ ಇಲ್ಲ. ಐಫಾದಂಥ ಸಮಾರಂಭಕ್ಕೆ ಗ್ಲಾಮರ್ ಆಗಿ ಬರಬೇಕಿತ್ತು’ ಎಂದು ಟೀಕಿಸಿದ್ದಾರೆ.

ಕೆಲವರು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಸೋನಾಕ್ಷಿ ಫೋಟೊವನ್ನು ಅಕ್ಕಪಕ್ಕ ಇಟ್ಟು, ಸಿಸ್ಟರ್ಸ್‌ ಆಫ್ ರಮೇಶ್ ಅಂಡ್ ಸುರೇಶ್ ಎಂದು ಗೇಲಿ ಮಾಡಿದ್ದಾರೆ.

ಸೋನಾಕ್ಷಿ ಅರ್ಧಂಬರ್ಧ ಸೀರೆ ಉಟ್ಟಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಕೆಂಪು, ಹಳದಿ, ಹಸಿರು ಬಣ್ಣದ ಗಿಳಿಯೊಂದರ ಚಿತ್ರವನ್ನು ಅಪ್‌ಲೋಡ್ ಮಾಡಿ, ಸೋನಾಕ್ಷಿ ಈ ಥರ ಡ್ರೆಸ್ ಮಾಡಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಸೋನಾಕ್ಷಿ ಜತೆಗೆ ನಟಿಯರಾದ ಬಿಪಾಶಾ ಬಸು, ನರ್ಗೀಸ್ ಫಕ್ರಿ ಕೂಡಾ ಕೆಟ್ಟದಾಗಿ ಉಡುಗೆ ತೊಟ್ಟಿದ್ದರು ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಆದರೆ, ಸೋನಾಕ್ಷಿ  ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದಾರೆ.

ಪ್ರತಿಕ್ರಿಯಿಸಿ (+)