ಸೋಮವಾರ, ಡಿಸೆಂಬರ್ 9, 2019
25 °C

ಐಟಿಸಿ ಷೇರುಗಳಲ್ಲಿ ಕುಸಿತ; ಎಲ್‍ಐಸಿಗೆ ಒಂದು ದಿನದಲ್ಲಿ ನಷ್ಟವಾಗಿದ್ದು ₹8,150 ಕೋಟಿ!

Published:
Updated:
ಐಟಿಸಿ ಷೇರುಗಳಲ್ಲಿ ಕುಸಿತ; ಎಲ್‍ಐಸಿಗೆ ಒಂದು ದಿನದಲ್ಲಿ ನಷ್ಟವಾಗಿದ್ದು ₹8,150 ಕೋಟಿ!

ಮುಂಬೈ: ಸಿಗರೇಟ್ ನಿರ್ಮಾಣ ಕಂಪನಿ ಐಟಿಸಿಯ ಷೇರುಗಳಲ್ಲಿ ಶೇಕಡಾ 13ರಷ್ಟು ಕುಸಿತವುಂಟಾದ ಪರಿಣಾಮ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಗೆ ಒಂದು ದಿನದಲ್ಲಿ ನಷ್ಟವಾಗಿದ್ದು ₹8,150 ಕೋಟಿ!

2017 ಜೂನ್ 30ರ ಲೆಕ್ಕ ಪ್ರಕಾರ ಐಟಿಸಿಯ 16.29 ಶೇಕಡಾ ಷೇರುಗಳನ್ನು ಎಲ್‍ಐಸಿ ಹೊಂದಿದೆ.

ಮಂಗಳವಾರ ಬೆಳಗ್ಗಿನ ವಹಿವಾಟಿನಲ್ಲಿ ಐಟಿಸಿಯ ಷೇರುಗಳಲ್ಲಿ ಶೇ.15ರಷ್ಟು ಕುಸಿತ ಕಂಡು ಬಂದಿತ್ತು. ಹಾಗಾಗಿ ದಿನದ ವಹಿವಾಟು ಆರಂಭವಾದ ಅರ್ಧಗಂಟೆಯಲ್ಲಿಯೇ ಎಲ್‍ಐಸಿಗೆ ₹7000 ಕೋಟಿ ನಷ್ಟವುಂಟಾಯಿತು.

ಸೇವಾ ಮತ್ತು ಸರಕುಗಳ ತೆರಿಗೆ (ಜಿಎಸ್‍ಟಿ)ಯಲ್ಲಿ ಸಿಗರೇಟ್ ಮೇಲೆ ಅಧಿಕ ತೆರಿಗೆ ಹೇರಿರುವುದೇ ಐಟಿಸಿಗೆ ನಷ್ಟವುಂಟಾಗಲು ಕಾರಣವಾಗಿದೆ.

ಸೋಮವಾರದ ವರೆಗೆ ಶೇ.28ರಷ್ಟು ತೆರಿಗೆ ಅದರ ಮೇಲೆ ಶೇ.5ರಷ್ಟು ಪ್ರತ್ಯೇಕ ಸೆಸ್ ಮತ್ತು 1000 ಸಿಗರೇಟ್‍ಗಳಿಗೆ ನಿಗದಿತ ಸೆಸ್‍ ಎಂಬುದಿತ್ತು. ಸಿಗರೇಟಿನ ಉದ್ದಕ್ಕೆ ಅನುಗುಣವಾಗಿ ನಿಗದಿತ ಸೆಸ್ ₹2126 ಇಂದ  ₹4170 ವರೆಗೆ ಇತ್ತು. ಇದರಲ್ಲಿ ₹ 485 ಇಂದ ₹792ವರೆಗೆ ಏರಿಕೆ ಮಾಡಿ ಹೊಸ ದರ ಪ್ರಕಟಿಸಲಾಗಿತ್ತು.

ಐಟಿಸಿ ಷೇರುಗಳ ಬೆಲೆ ಕುಸಿತವಾದ ಪರಿಣಾಮ ಎಲ್‍ಐಸಿ ಸೇರಿದಂತೆ ಇತರ ವಿಮೆ ಕಂಪನಿಗಳಿಗುಂಟಾಗಿರುವ ನಷ್ಟದ ಮೊತ್ತ ₹10,000 ಕೋಟಿಗಿಂತಲೂ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರತಿಕ್ರಿಯಿಸಿ (+)