ಭಾನುವಾರ, ಡಿಸೆಂಬರ್ 8, 2019
21 °C

₹ 999ಕ್ಕೆ ನೋಕಿಯಾ ಫೋನ್‌

Published:
Updated:
₹ 999ಕ್ಕೆ ನೋಕಿಯಾ ಫೋನ್‌

ನವದೆಹಲಿ: ನೋಕಿಯಾದ ಫೀಚರ್‌ ಮತ್ತು ಡ್ಯೂಯಲ್ ಸಿಮ್‌ ಫೋನ್‌ಗಳು ಬುಧವಾರ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

‘ನೋಕಿಯಾ 105’ ಬೆಲೆ   ₹999 ರಷ್ಟಿದೆ.  ಡ್ಯುಯಲ್‌ ಸಿಮ್‌ ಬೆಲೆ ₹1,149ರಷ್ಟಿದೆ. (ತೆರಿಗೆ ಮತ್ತು ಸಬ್ಸಿಡಿ ಹೊರತುಪಡಿಸಿ). ಎರಡೂ ಫೋನ್‌ಗಳು 1.8 ಇಂಚ್ ಕಲರ್‌ ಸ್ಕ್ರೀನ್‌ ಮತ್ತು ಎಲ್‌ಇಡಿ ಟಾರ್ಚ್‌ ಹೊಂದಿವೆ. 

ನೋಕಿಯಾ ಬ್ರ್ಯಾಂಡ್‌ನ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡುವ ಎಚ್‌ಎಂಡಿ ಗ್ಲೋಬಲ್‌ ಕಂಪೆನಿಯು ಈ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.

ಸೆಪ್ಟೆಂಬರ್‌ನಲ್ಲಿ ‘ನೋಕಿಯಾ 130’ ಫೀಚರ್ ಫೋನ್ ಸಹ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದ್ದು, ಬೆಲೆ ₹1,500  ರಷ್ಟಿರಲಿದೆ ಎಂದು ಕಂಪೆನಿ ತಿಳಿಸಿದೆ.

‘ಜಾಗತಿಕ ಮಟ್ಟದಲ್ಲಿ  ಗರಿಷ್ಠ ಸಂಖ್ಯೆಯ ಜನರು  ಧ್ವನಿ ಆಧಾರಿತ ಕರೆ ಮತ್ತು ಟೆಕ್ಸ್ಟ್‌ ಮೆಸೇಜ್‌ ಸೌಲಭ್ಯ ಮೂಲಕ ಪರಸ್ಪರ ಸಂಪರ್ಕದಲ್ಲಿ ಇದ್ದಾರೆ. ಹೀಗಾಗಿ ಫೀಚರ್ ಫೋನ್‌ಗಳನ್ನು ನಾವು ಕಡೆಗಣಿಸಲು ಆಗುವುದಿಲ್ಲ’ ಎಂದು ಎಚ್‌ಎಂಡಿ ಗ್ಲೋಬಲ್‌ ಸಿಇಒ ಅರ್ಟೊ ನುಮೆಲ್ಲಾ ಹೇಳಿದ್ದಾರೆ.

ಸದ್ಯ, ಸ್ಯಾಮ್ಸಂಗ್‌, ಆ್ಯಪಲ್‌ ಮತ್ತು ಹುವಾವೆ ಕಂಪೆನಿಗಳು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿವೆ.  ಫೀಚರ್‌ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕ ಮೊಬೈಲ್‌ ಮಾರುಕಟ್ಟೆಯಲ್ಲಿ ಮತ್ತೆ ನೋಕಿಯಾ ಸ್ಥಾನವನ್ನು ಮರಳಿ ಸ್ಥಾಪಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಪ್ರತಿಕ್ರಿಯಿಸಿ (+)