ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರಕ್ಕೆ ಪಂದ್ಯಗಳು ಸ್ಥಳಾಂತರ

ಕ್ರೀಡಾ ಇಲಾಖೆಯಿಂದ ಸಿಗದ ಅನುಮತಿ
Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ಪಂದ್ಯಗಳನ್ನು ನಾಗ್ಪುರದ ಮಣಕಪುರ್‌ ಒಳಾಂಗಣ ಕ್ರೀಡಾಂಗಣದಲ್ಲಿ ಆಡಲಿದೆ.

ಈ ವಿಷಯವನ್ನು ಬೆಂಗಳೂರು ಬುಲ್ಸ್‌ ಫ್ರಾಂಚೈಸ್‌ ಮಂಗಳವಾರ ಪ್ರಕಟಿಸಿದೆ. ಬುಲ್ಸ್‌ ತಂಡದ ಹಿಂದಿನ ನಾಲ್ಕು ಆವೃತ್ತಿಗಳ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಬಾರಿಯೂ ಕಂಠೀರವದಲ್ಲೇ ಪಂದ್ಯಗಳನ್ನು ನಡೆಸಲು ನಿಶ್ಚಯಿಸಲಾಗಿತ್ತು.  ಈ ಸಂಬಂಧ ಫ್ರಾಂಚೈಸ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ  ಅನುಮತಿ ಕೋರಿ ಬಹಳ ಹಿಂದೆಯೇ ಪತ್ರ ಬರೆದಿತ್ತು. ಆದರೆ ಇದುವರೆಗೂ ಡಿವೈಇಎಸ್‌ನಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಅನಿವಾರ್ಯವಾಗಿ ಪಂದ್ಯಗಳನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ. ಕಬಡ್ಡಿ ಲೀಗ್‌ನ ಐದನೇ ಆವೃತ್ತಿಗೆ ಜುಲೈ 28ರಂದು ಚಾಲನೆ ಸಿಗಲಿದ್ದು ಬೆಂಗಳೂರು ತಂಡದ ತವರಿನ ಪಂದ್ಯಗಳು ಆಗಸ್ಟ್‌ 4 ರಿಂದ 10ರವರೆಗೆ ನಿಗದಿಯಾಗಿವೆ.

‘ಈ ಬಾರಿ ಬೆಂಗಳೂರು ಬುಲ್ಸ್‌ ತಂಡ ಕಂಠೀರವ ಕ್ರೀಡಾಂಗಣದಲ್ಲಿ  ಪಂದ್ಯ ಗಳನ್ನು ಆಡುವುದಿಲ್ಲ. ಈ ವಿಷಯವನ್ನು ತಿಳಿಸಲು ತುಂಬಾ ಬೇಸರವಾಗುತ್ತಿದೆ.  ಉದ್ಯಾನನಗರಿಯಲ್ಲಿ ಪಂದ್ಯಗಳನ್ನು ನಡೆಸಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆಯಿಂದ ಅನುಮತಿ ಸಿಗಲಿಲ್ಲ. ಈ ಕಾರಣದಿಂದಾಗಿ  ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ಡಬ್ಲ್ಯುಎಲ್‌ ಸ್ಪೋರ್ಟ್ಸ್‌ ಲೀಗ್‌ನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಉದಯ್‌ ಸಿನ್ಹಾ ವಾಲಾ ತಿಳಿಸಿದ್ದಾರೆ.

‘ಮುಂದಿನ ವರ್ಷ ಬೆಂಗಳೂರಿನಲ್ಲೇ ಪಂದ್ಯಗಳು ನಡೆಯುತ್ತವೆ ಎಂಬ ನಂಬಿಕೆ ಇದೆ. ಈ ಬಾರಿ ತವರಿನಲ್ಲಿ ಪಂದ್ಯಗಳು ನಡೆಯದಿದ್ದರೂ ಅಭಿಮಾನಿಗಳ ಪ್ರೀತಿ ಮಾತ್ರ ಕಡಿಮೆಯಾಗುವುದಿಲ್ಲ ಎಂಬ ಭರವಸೆಯೂ ಇದೆ. ಎಲ್ಲರ ಬೆಂಬಲ ಇದ್ದರೆ ನಾವು ಈ ಬಾರಿ ಖಂಡಿತ ವಾಗಿಯೂ ಪ್ರಶಸ್ತಿ ಎತ್ತಿ ಹಿಡಿಯುತ್ತೇವೆ’ ಎಂದು ಉದಯ್‌ ಹೇಳಿದ್ದಾರೆ.

ಮುಖ್ಯಾಂಶಗಳು

* ಈಗಾಗಲೇ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದ ಬುಲ್ಸ್‌
* ಆಗಸ್ಟ್‌ 4ರಿಂದ 10ರವರೆಗೆ ಕಂಠೀರವದಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದವು.
* ಜುಲೈ 28ಕ್ಕೆ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT