ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

7

ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

Published:
Updated:
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ !  ಮಾಮೂಲಿ ಅಕ್ಕಿ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿರುವ ರವೆ ಇಡ್ಲಿ ಮಾಡುವುದು ತುಂಬಾ ಸರಳ. ರವೆ ಇಡ್ಲಿ ಮಾಡುವ ವಿಧಾನಕ್ಕೆ ಈ ಕೆಳಗಿನ ವಿಡಿಯೊ ಮತ್ತು ಮಾಹಿತಿ ನೋಡಿ.

ಸಾಮಗ್ರಿಗಳು
ಲೋಕಲ್ ರವೆ -                     1 ಕಪ್
ಮೊಸರು -                            1 ಕಪ್
ಈರುಳ್ಳಿ -                              ಸ್ವಲ್ಪ
ಶುಂಠಿ -                               ಒಂದು ಇಂಚು
ಗೋಡಂಬಿ -                          6
ಕ್ಯಾರೇಟ್ ತುರಿದದ್ದು -              ಸ್ವಲ್ಪ
ತೆಂಗಿನ ತುರಿ -                       ಸ್ವಲ್ಪ
ಕರಿಬೇವು -                           ಸ್ವಲ್ಪ
ಕೊತ್ತಂಬರಿ ಸೊಪ್ಪು -                ಸ್ವಲ್ಪ
ಟೊಮ್ಯಾಟೊ –                      1
ಕಡಲೆ ಬೇಳೆ -                        ಸ್ವಲ್ಪ
ಉದ್ದಿನ ಬೇಳೆ -                      ಸ್ವಲ್ಪ
ಉಪ್ಪು -                               ಸ್ವಲ್ಪ
ಎಣ್ಣೆ -                                 2 ಸ್ಪೂನ್
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನ ಬೇಳೆ, ಶುಂಠಿ, ಕರಿಬೇವು, ಕತ್ತರಿಸಿದ ಈರುಳ್ಳಿ, ಸೇರಿಸಿ ಸ್ವಲ್ಪ ಬಾಡಿಸಿ. ಇದಕ್ಕೆ ರವೆ ಸೇರಿಸಿ 2 ನಿಮಿಷ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಸೋಡಾ ಹಾಕಿ ಮಿಕ್ಸ್ ಮಾಡಿ. ಇದು ತಣ್ಣಗಾದ ಮೇಲೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿಡಿ. ಈ ಹಿಟ್ಟು ಇಡ್ಲಿ ಹಿಟ್ಟಿನ ಹದವಿರಬೇಕು. ಇಪ್ಪತ್ತು ನಿಮಿಷಗಳ ನಂತರ ಇಡ್ಲಿ ತಟ್ಟೆಯಲ್ಲಿ ಟೋಮ್ಯಾಟೋ ಸ್ಲೈಸ್ ಕೊತ್ತಂಬರಿ ಸೊಪ್ಪು, ತೆಂಗಿನ ತುರಿಯನ್ನು ಹಾಕಿ, ಅದರ ಮೇಲೆ ಇಡ್ಲಿ ಹಿಟ್ಟನ್ನೂ ಸುರಿದು ಹಬೆಯಲ್ಲಿ ಬೇಯಿಸಿ.

 

Tags: 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry