‘ಗೇಮ್ ಆಫ್ ಥ್ರೋನ್ಸ್’ ಸರಣಿ ಧಾರಾವಾಹಿ ಬಗ್ಗೆ ಹಾಲಿವುಡ್‌ನ ಜನಪ್ರಿಯ ನಟ ಜಾನ್ ಬೊಯೆಗಾ ಕಿಡಿಕಾರಿದ್ದಾರೆ. ಸಿನಿಮಾದಲ್ಲಿ ಕಪ್ಪು ಜನಾಂಗದವರಿಗೆ ಪಾತ್ರ ನೀಡದಿರುವುದು ಇವರ ಕೋಪಕ್ಕೆ ಕಾರಣವಾಗಿದೆ.

‘ಸಮಾಜದಲ್ಲಿ ಭಿನ್ನ ಜನಾಂಗದ, ವ್ಯಕ್ತಿತ್ವದ, ಸಂಸ್ಕೃತಿಯ ಜನಗಳನ್ನು ನೋಡುವ ನಾವು, ಸಿನಿಮಾದಲ್ಲಿ ಒಂದೇ ಜನಾಂಗದ ವ್ಯಕ್ತಿಗಳನ್ನು ಏಕೆ ನೋಡಬೇಕು’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಮತ್ತೊಂದು ಹಾಲಿವುಡ್ ಸೂಪರ್ ಹಿಟ್ ಚಿತ್ರ ‘ಲಾರ್ಡ್ ಆಫ್ ರಿಂಗ್ಸ್’ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಅವರು ಅದರಲ್ಲಿಯೂ ಕಪ್ಪು ಬಣ್ಣದ ನಟರಿಗೆ ಅವಕಾಶ ನೀಡದೆ ತಾರತಮ್ಯ ಮಾಡಲಾಗಿದೆ ಎಂದಿದ್ದಾರೆ.

ಕಪ್ಪು ಬಣ್ಣದ ನಟರು ಎರಡನೇ ದರ್ಜೆಯ ನಟರಾಗಿಯಷ್ಟೆ ಹಾಲಿವುಡ್‌ನಲ್ಲಿ ನೋಡುತ್ತದೆ ಎಂಬ ವಾದ ಮುಂಚಿನಿಂದಲೂ ಇದೆ. ಬೊಯೆಗಾ ಅವರ ಈ ಹೇಳಿಕೆ ಹಾಲಿವುಡ್‌ನ ಜನಾಂಗೀಯ ತಾರತಮ್ಯದ ಬಗ್ಗೆ ಮತ್ತೆ ಚರ್ಚೆ ಹುಟ್ಟು ಹಾಕಿದೆ. ‘ಸ್ಟಾರ್ ವಾರ್ಸ್’ ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ ಬೊಯೆಗಾ ಅವರು ಕಪ್ಪು ಜನಾಂಗದವರ ಹಕ್ಕುಗಳ ಬಗ್ಗೆ ಸದಾ ದನಿ ಎತ್ತುವ ನಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.