ನೀರು ಶುದ್ಧೀಕರಣಕ್ಕೆ ತಂತ್ರಜ್ಞಾನ

7

ನೀರು ಶುದ್ಧೀಕರಣಕ್ಕೆ ತಂತ್ರಜ್ಞಾನ

Published:
Updated:
ನೀರು ಶುದ್ಧೀಕರಣಕ್ಕೆ ತಂತ್ರಜ್ಞಾನ

ಬೆಂಗಳೂರಿನ ಹೊರ ವಲಯದ ಬೊಮ್ಮಸಂದ್ರದಲ್ಲಿ  ಇರುವ ಅತ್ಯಾಧುನಿಕ ನೀರು ಸಂಶೋಧನಾ ಕೇಂದ್ರವು  ಹಲವಾರು ಕಾರಣಗಳಿಗೆ ಗಮನ ಸೆಳೆಯುತ್ತದೆ. ಇದು ಏಷ್ಯಾದಲ್ಲಿನ ಏಕೈಕ ಸಂಶೋಧನಾ ಕೇಂದ್ರವಾಗಿದೆ. ನೀರು ಶುದ್ಧೀಕರಣ ಸಾಧನಗಳನ್ನು ತಯಾರಿಸುವ ಯುರೇಕಾ ಫೋರ್ಬ್ಸ್‌ ಸಂಸ್ಥೆಯು ಈ ಕೇಂದ್ರವನ್ನು ನಿರ್ಮಾಣ ಮಾಡಿದೆ. ನೀರಿನ ಗುಣಮಟ್ಟ ಆಧರಿಸಿ ನೀರು ಶುದ್ಧೀಕರಣದ ವಿವಿಧ ಬಗೆಯ ತಂತ್ರಜ್ಞಾನಗಳನ್ನು ಸಂಸ್ಥೆಯು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

‘ಈಗ ಹೊಸದಾಗಿ ಬಯೊಟ್ರಾನ್‌ ತಂತ್ರಜ್ಞಾನವನ್ನೂ ಇಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ’ ಎಂದು ಕೇಂದ್ರದ ಉಪಾಧ್ಯಕ್ಷ ಡಾ. ಅಭಯ್‌ ಕುಮಾರ್  ಹೇಳುತ್ತಾರೆ.

‘ಅಮೆರಿಕದ ನೀರಿನ ಗುಣಮಟ್ಟ ಸಂಘದಿಂದಲೂ ಈ ಸಂಶೋಧನಾ ಕೇಂದ್ರ ಮಾನ್ಯತೆ ಪಡೆದಿದೆ. ಕಡಿಮೆ ವೆಚ್ಚ ಇರುವುದರಿಂದ ಅಮೆರಿಕದಿಂದಲೂ ಇಲ್ಲಿಗೆ ವಿವಿಧ ಬಗೆಯ ನೀರಿನ ಮಾದರಿಗಳನ್ನು ಪರೀಕ್ಷಿಸಿ ವರದಿ ನೀಡಲು ಕೋರಿಕೆಗಳು ಬರುತ್ತವೆ.  ಇಲ್ಲಿ 60ಕ್ಕೂ ಹೆಚ್ಚು ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅವರು  ಹೇಳುತ್ತಾರೆ.

(ಡಾ. ಅಭಯ್‌ ಕುಮಾರ್‌)

ಭೂಮಿಯ ಮೇಲೆ ನೀರಿನ ಲಭ್ಯತೆ ಅಗಾಧ ಪ್ರಮಾಣದಲ್ಲಿ ಇದ್ದರೂ, ಶುದ್ಧ ಕುಡಿಯುವ ನೀರು ದೊರೆಯುವುದು ತುಂಬ ದುರ್ಲಭ. ಜೀವ ಜಲವು ಅನೇಕ ಸಂದರ್ಭಗಳಲ್ಲಿ ಕಾಯಿಲೆ ಕಸಾಲೆಗಳಿಗೂ ಕಾರಣವಾಗುತ್ತದೆ. ಇದೇ ಕಾರಣಕ್ಕೆ ನೀರನ್ನು ಶುದ್ಧೀಕರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತ ಬರಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಲುಷಿತ ನೀರಿನಿಂದಲೇ  ಎಂಟ್ಹತ್ತು ಕಾಯಿಲೆಗಳು ಬರುತ್ತವೆ. ಹೀಗಾಗಿ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಕಾಯಿಲೆಗಳನ್ನು ಬರದಂತೆ ನಿರ್ಬಂಧಿಸುವುದರ ಜತೆಗೆ ಆರ್ಥಿಕತೆಗೆ ಆಗುವ ನಷ್ಟವನ್ನೂ ತಡೆಗಟ್ಟುತ್ತದೆ.

1984ರಿಂದಲೂ ನೀರು ಶುದ್ಧೀಕರಣ ಸಾಧನಗಳನ್ನು ಅಕ್ವಾಗಾರ್ಡ್‌ ಬ್ರ್ಯಾಂಡ್‌ನಡಿ ತಯಾರಿಸಿ ಪೂರೈಸುತ್ತಿರುವ ಯುರೇಕಾ ಫೋರ್ಬ್ಸ್‌, ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಲೇ ಬಂದಿದೆ.

ನದಿ, ಸರೋವರಗಳ ಸಿಹಿ ನೀರನ್ನು ಶುದ್ಧೀಕರಿಸುವುದು ಸುಲಭ. ಆದರೆ,  ಅಂತರ್ಜಲ ಚಲನೆಯಲ್ಲಿ ಇರದ ಕಾರಣಕ್ಕೆ ಬೋರ್‌ವೆಲ್‌ಗಳ ನೀರು ಹೆಚ್ಚು ಗಡುಸಾಗಿರುತ್ತದೆ. ಆರ್‌ಒ, ಯುವಿ ತಂತ್ರಜ್ಞಾನದ ನೆರವಿನಿಂದ ಈ ಗಡುಸು ನೀರನ್ನೇ ಸಿಹಿ ನೀರಿನಂತೆ ಶುದ್ಧೀಕರಿಸುವಲ್ಲಿ ಯುರೇಕಾ ಫೋರ್ಬ್ಸ್‌  ಮುಂಚೂಣಿಯಲ್ಲಿ ಇದೆ.

ಕೊಳವೆ ಮೂಲಕ ಪೂರೈಕೆಯಾಗುವ ನೀರಿನ ಶುದ್ಧೀಕರಣಕ್ಕೆ ಯುವಿ ತಂತ್ರಜ್ಞಾನ, ಬೋರ್‌ವೇಲ್‌ ನೀರನ್ನು ಕುಡಿಯುವುದಕ್ಕೆ ಬಳಸುವುದಾದರೆ ಆರ್‌ಒ ತಂತ್ರಜ್ಞಾನ ಒಳಗೊಂಡಿರುವ ಸಾಧನಗಳನ್ನು ಬಳಸಲಾಗುತ್ತಿದೆ.  ಈ ಎರಡೂ ತಂತ್ರಜ್ಞಾನಗಳನ್ನು ಒಳಗೊಂಡಿರುವ ಶುದ್ಧೀಕರಣಗಳನ್ನೂ ಸಂಸ್ಥೆಯು ಪರಿಚಯಿಸಿದೆ.

ಕುಡಿಯುವ ನೀರಿನ ವಿಷಯದಲ್ಲಿ ರುಚಿಗೆ ಹೆಚ್ಚು ಮಹತ್ವ ಇದೆ. ಜನರು ಮನೆ, ಕಚೇರಿ, ಹೋಟೆಲ್‌ಗಳಲ್ಲಿ ಒಂದೇ ಬಗೆಯ ರುಚಿ ಇರುವ ನೀರು ಕುಡಿಯಲು ಇಚ್ಛಿಸುತ್ತಾರೆ. ನಗರಗಳಲ್ಲಿ ನಲ್ಲಿ ಮೂಲಕ ಪೂರೈಕೆಯಾಗುವ ನೀರಿನ ರುಚಿಯನ್ನೇ ಬೋರ್‌ವೆಲ್‌ ನೀರಿಗೂ ಒದಗಿಸಲು ಅಕ್ವಾಗಾರ್ಡ್‌ನ  ಯುವಿ + ಆರ್‌ಒ   ನೀರು ಶುದ್ಧೀಕರಣ ತಂತ್ರಜ್ಞಾನವು ನೆರವಾಗುತ್ತಿದೆ. ದೇಶದ ಯಾವುದೇ ಭಾಗದಲ್ಲಿನ ನೀರಿನ ರುಚಿ ಒಂದೇ ಬಗೆಯಲ್ಲಿ ಇರುವಂತೆ ನೋಡಿಕೊಳ್ಳುವ ತಂತ್ರಜ್ಞಾನ ಇದಾಗಿದೆ.

‘ನಗರ ಪ್ರದೇಶಗಳಲ್ಲಿ ಮನೆ ಬದಲಿಸಿದಾಗ  ನೀರಿನ ಗುಣಮಟ್ಟ ಬದಲಾಗುತ್ತದೆ. ಅಕ್ವಾಗಾರ್ಡ್‌ನ ನೀರು ಶುದ್ಧೀಕರಣ ಸಾಧನಗಳಿಂದ ಪಡೆಯುವ ನೀರು ಒಂದೇ ರುಚಿ ಕಾಯ್ದುಕೊಳ್ಳುತ್ತದೆ. ಅಕ್ವಾಗಾರ್ಡ್‌ನಲ್ಲಿನ ಕಾರ್ಟಿಡ್ಜ್‌ಗಳು ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಿಕೊಂಡು ನೀರು ಶುದ್ಧೀಕರಣ ಮಾಡುತ್ತವೆ. ಅಕ್ವಾಗಾರ್ಡ್‌ ಮ್ಯಾಗ್ನಾ, ಡಾ. ಅಕ್ವಾಗಾರ್ಡ್‌ ಜೀನಿಯಸ್‌ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ’  ಎಂದು ಅವರು ಹೇಳುತ್ತಾರೆ.

(ನೀರು ಪರೀಕ್ಷೆ ನಡೆಸುತ್ತಿರುವುದು)

‘ಈಗ ಬಯೊಟ್ರಾನ್‌ (Biotron) ತಂತ್ರಜ್ಞಾನ ಪರಿಚಯಿಸಲಾಗಿದೆ. ಈ ಬಯೊಟ್ರಾನ್‌ ಕಾರ್ಟಿಡ್ಜ್‌, ಒಂದಕ್ಕೊಂದು ಅಂಟಿಕೊಂಡಿರುವ ನೀರಿನ ಅಣುಗಳನ್ನು ಬೇರ್ಪಡಿಸಿ (de-clusters water molecules)  ಪೋಷಕಾಂಶ ಹೆಚ್ಚಿಸಿ ಆರೋಗ್ಯಕರ ನೀರು ಒದಗಿಸಲು ನೆರವಾಗಲಿದೆ. ಹೀಗೆ ಶುದ್ಧೀಕರಣಗೊಂಡ ನೀರಿನ ಪ್ರತಿಯೊಂದು ಹನಿ ಹನಿಯೂ ಆರೋಗ್ಯದ ಭರವಸೆ ನೀಡುತ್ತದೆ. ನೀರಿನ ರುಚಿಯನ್ನೂ ವೃದ್ಧಿಸುತ್ತದೆ’ ಎಂದು ಅಭಯ್‌ ಕುಮಾರ್‌ ಹೇಳುತ್ತಾರೆ.

‘ಸಾಧಾರಣ ದರ್ಜೆಯ ನೀರು ಶುದ್ಧೀಕರಣ ಸಾಧನಗಳು ನೀರಿನಲ್ಲಿನ ಪ್ರಮುಖ ಖನಿಜಗಳನ್ನು ಬರಿದು ಮಾಡುತ್ತವೆ. ಆದರೆ, ಬಯೊಟ್ರಾನ್‌ ತಂತ್ರಜ್ಞಾನವು ನೀರಿನಲ್ಲಿನ ಅವಶ್ಯಕ ಖನಿಜಾಂಶಗಳಾದ ಕ್ಯಾಲ್ಸಿಯಂ  ಮತ್ತು ಮ್ಯಾಗ್ನೆಸಿಯಂಗಳನ್ನು  ಹಾಗೆಯೇ ಉಳಿಸಿಕೊಳ್ಳುತ್ತದೆ. ಇದರಿಂದ ಆರೋಗ್ಯಕರ ನೀರು ಪಡೆಯಲು ಸಾಧ್ಯವಾಗಲಿದೆ. ನ್ಯೂಟ್ರಿಟ್ರಾನ್‌ ಕಾರ್ಟಿಡ್ಜ್‌, ನೀರಿನಲ್ಲಿನ ತಾಮ್ರ ಮತ್ತು ಸತು ಖನಿಜಗಳನ್ನು ಇನ್ನಷ್ಟು ಬಲಪಡಿಸುತ್ತದೆ.

ಬಯೊಟ್ರಾನ್‌ ತಂತ್ರಜ್ಞಾನ ಒಳಗೊಂಡಿರುವ ನೀರು ಶುದ್ಧೀಕರಣ ಸಾಧನಗಳು ವಿವಿಧ ಬಗೆಯ ನೀರಿನ ಮಾದರಿಗಳನ್ನು ಒಂದೇ ಬಗೆಯಲ್ಲಿ ಶುದ್ಧೀಕರಿಸಿ ರುಚಿ ಹೆಚ್ಚಿಸಲು ನೆರವಾಗುತ್ತಿವೆ.

ಯುರೇಕಾ ಫೋರ್ಬ್ಸ್‌, ದೇಶದ 18 ಮಹಾ ನಗರಗಳಲ್ಲಿ ಪ್ರಯೋಗಾಲಯಗಳನ್ನು ಹೊಂದಿದೆ. ಈ ಪ್ರಯೋಗಾಲಯಗಳಲ್ಲಿ ಜನರು  ವಿವಿಧ ಬಗೆಯ ನೀರನ್ನು ಪರೀಕ್ಷೆ ನಡೆಸಲು ಕೋರಿಕೆ ಸಲ್ಲಿಸಬಹುದು. ಪ್ರತಿಯೊಂದು  ಪ್ರಯೋಗಾಲವು ಪ್ರತಿ ತಿಂಗಳಿಗೆ ಸರಾಸರಿ 150  ಪರೀಕ್ಷೆಗಳನ್ನು ನಡೆಸುತ್ತದೆ.

ಯುರೇಕಾ ಫೋರ್ಬ್ಸ್‌ನ ವಾಟರ್‌ ವಂಡರ್‌ಫುಲ್‌ ವರ್ಲ್ಡ್‌ಡಾಟ್‌ಆರ್ಗ್ (waterwonderfulworld.org) ಅಂತರ್ಜಾಲ ತಾಣದಲ್ಲಿ ದೇಶದಲ್ಲಿನ 6 ಸಾವಿರ ವಿವಿಧ ಭಾಗದಲ್ಲಿನ ನೀರಿನ ಮಾಹಿತಿ ಲಭ್ಯ ಇದೆ. ಯಾರೇ ಆದರೂ ಈ ತಾಣದಲ್ಲಿ ತಮ್ಮ ಪ್ರದೇಶದಲ್ಲಿ ಲಭ್ಯ ಇರುವ  ನೀರಿನ ಗುಣಮಟ್ಟದ ವಿವರ ಪಡೆಯಬಹುದು.

ನೀರು ಶುದ್ಧೀಕರಣ ಸಾಧನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಯುರೇಕಾ ಫೋರ್ಬ್ಸ್‌, ಸದ್ಯಕ್ಕೆ ದೇಶಿ ಮಾರುಕಟ್ಟೆಯಲ್ಲಿ ಶೇ 67  ರಷ್ಟು ಮತ್ತು ಕರ್ನಾಟಕದಲ್ಲಿ ಶೇ 75ರಷ್ಟು ಪಾಲು ಹೊಂದಿದೆ. ಈ ಮುಂಚೂಣಿ ಸ್ಥಾನ ಕಾಯ್ದುಕೊಳ್ಳಲು ಬಯಸುತ್ತಿದೆ. ದೇಶದಾದ್ಯಂತ 1,800 ಸೇವಾ ಕೇಂದ್ರಗಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry