ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಮೂಲಕ ಎಲ್ಲ ಬಗೆಯ ಫೈಲ್‌ಗಳ ವಿನಿಮಯ

Last Updated 9 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶವಾಹಕ ಕಿರುತಂತ್ರಾಂಶ (ಆ್ಯಪ್‌) ಆಗಿರುವ ವಾಟ್ಸ್‌ಆ್ಯಪ್‌ ಮೂಲಕ ಟೆಕ್ಸ್ಟ್‌, ವಿಡಿಯೊ, ಫೋಟೊಗಳ ವಿನಿಮಯ ನಡೆಯುವುದೇ ಹೆಚ್ಚು. ಆದರೆ, ವಾಟ್ಸ್‌ಆ್ಯಪ್‌ನ ಸುಧಾರಿತ (ಅಪ್‌ಡೇಟೆಡ್‌) ವರ್ಷನ್‌ ನಲ್ಲಿ ಎಲ್ಲ ಬಗೆಯ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಪಿಡಿಎಫ್‌, ಎಂಪಿ3, ಎಪಿಕೆ, ಟಿಎಸ್‌ ಫಾರ್ಮಾಟ್‌ನ ಫೈಲ್‌ಗಳ ಜತೆಗೆ ವರ್ಡ್‌ ಡಾಕ್ಯುಮೆಂಟ್‌ ಫೈಲ್‌ಗಳನ್ನೂ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಳ್ಳಬಹುದು. ಈ ಮೂಲಕ ವಾಟ್ಸ್‌ಆ್ಯಪ್‌ನಿಂದ ಹಂಚಿಕೊಳ್ಳುವ ಫೈಲ್‌ ಫಾರ್ಮಾಟ್‌ಗಳ ಮಿತಿ ಆದಷ್ಟೂ ಕಡಿಮೆಯಾಗುತ್ತಿದೆ.

ವಾಟ್ಸ್‌ಆ್ಯಪ್‌ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳುವುದು ಕೂಡ ಸುಲಭ. ವಾಟ್ಸ್‌ಆ್ಯಪ್‌ ತೆರೆದ ಮೇಲೆ ನೀವು ಯಾರಿಗೆ ಫೈಲ್‌ ಕಳಿಸಬೇಕೋ ಅವರ ಕಾಂಟಾಕ್ಟ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕೆಳಗಿನ ಅಟ್ಯಾಚ್‌ ಮೆಂಟ್‌ ಸಂಕೇತದ ಮೇಲೆ ಕ್ಲಿಕ್ಕಿಸಿ. ಈಗ ತೆರೆದುಕೊಳ್ಳುವ ಆಯ್ಕೆಗಳಲ್ಲಿ ನೀವು ಕಳಿಸಬೇಕೆಂದಿರುವ ಫೈಲ್‌ ಇರುವ ಫೋಲ್ಡರ್‌ ತೆರೆಯಿರಿ. ನಿಮ್ಮ ಫೈಲ್‌ ಸೆಲೆಕ್ಟ್‌ ಮಾಡಿ ಓಕೆ ಒತ್ತಿದರೆ ಆಯಿತು. ನಿಮ್ಮ ಡೇಟಾ ವೇಗಕ್ಕೆ ಅನುಗುಣವಾಗಿ ನಿಮ್ಮ ಫೈಲ್‌ ಅವರಿಗೆ ತಲುಪುತ್ತದೆ.

ಫೈಲ್‌ಗಳನ್ನು ಮಾತ್ರವಲ್ಲ ವಾಟ್ಸ್‌ಆ್ಯಪ್‌ ಮೂಲಕ ನೀವಿರುವ ಸ್ಥಳದ ಮಾಹಿತಿಯನ್ನೂ ಹಂಚಿಕೊಳ್ಳಬಹುದು. ಯಾರಾದರೂ ನೀವಿರುವ ಜಾಗವನ್ನು ಹುಡುಕುತ್ತಿದ್ದರೆ ಈ ಆಯ್ಕೆಯ ಮೂಲಕ ಅವರ ಹುಡುಕಾಟವನ್ನು ಸುಲಭಗೊಳಿಸಬಹುದು. ಹೀಗೆ ಲೊಕೇಷನ್‌ ಹಂಚಿಕೊಳ್ಳಲು ಅಟ್ಯಾಚ್‌ಮೆಂಟ್‌ ಸಂಕೇತದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕಾಣುವ ಆಯ್ಕೆಗಳಲ್ಲಿ ಲೊಕೇಷನ್‌ ಎಂಬಲ್ಲಿ ಕ್ಲಿಕ್ಕಿಸಿ. ನಿಮ್ಮ ಸದ್ಯದ ಲೊಕೇಷನ್‌ ಸೆಲೆಕ್ಟ್‌ ಮಾಡಿ ಓಕೆ ಕೊಟ್ಟರೆ ನೀವು ಎಲ್ಲಿರುವಿರೋ ಆ ಲೊಕೇಷನ್‌ ಅವರಿಗೆ ಗೂಗಲ್‌ ಮ್ಯಾಪ್‌ ಮೂಲಕ ಗೋಚರಿಸುತ್ತದೆ.

ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಆಗುತ್ತಾ ಬಂದಂತೆ ಇಮೇಲ್‌ ಬಳಕೆ ತಕ್ಕಮಟ್ಟಿಗೆ ಕಡಿಮೆಯಾಗುತ್ತಿದೆ. ಇಮೇಲ್‌ನಂತೆ ಎಲ್ಲ ಬಗೆಯ ಫೈಲ್‌ ಗಳನ್ನು ಸಾಗಿಸುವ ಮಟ್ಟಕ್ಕೆ ಬಂದು ನಿಂತಿರುವ, ಇಮೇಲ್‌ ಬಳಕೆಗಿಂತಲೂ ಸುಲಭವಾಗಿರುವ ವಾಟ್ಸ್‌ಆ್ಯಪ್‌ ಮುಂದೊಂದು ದಿನ ಇಮೇಲ್‌ ವ್ಯವಸ್ಥೆಯನ್ನು ಹಿಂದಿಕ್ಕಿದರೆ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT