ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬ್ರಿ ಮಸೀದಿ ವಿವಾದ: ಐತಿಹಾಸಿಕ ದಾಖಲೆಗಳ ತರ್ಜುಮೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

Last Updated 11 ಆಗಸ್ಟ್ 2017, 12:56 IST
ಅಕ್ಷರ ಗಾತ್ರ

ನವದೆಹಲಿ: ಹಲವು ದಶಕಗಳ ಹಿಂದಿನ ರಾಮಜನ್ಮ ಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ದಾಖಲೆಗಳನ್ನು ಮೂರು ತಿಂಗಳ ಒಳಗೆ ಭಾಷಾಂತರಿಸಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಅಲ್ಲದೇ ಈ ವಿವಾದಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ನಡೆಸಲು ನಿಗದಿ ಪಡಿಸಿರುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. 

ಐತಿಹಾಸಿಕ ದಾಖಲೆಗಳ ಭಾಷಾಂತರ ಇನ್ನು ಪೂರ್ತಿಗೊಂಡಿಲ್ಲ ಎಂದು ಸುನ್ನಿ ವಕ್ಫ್ ಸಮಿತಿಯು ಕೋರ್ಟ್‌ಗೆ ತಿಳಿಸಿದೆ. ಈ ಮಾಹಿತಿ ಪಡೆದ ಬಳಿಕ ಸುಪ್ರೀಂ ಕೋರ್ಟ್‌ ಐತಿಹಾಸಿಕ ದಾಖಲೆಗಳ ತರ್ಜುಮೆಗೆ 3 ತಿಂಗಳ ಕಾಲ ಗಡುವು ನೀಡಿದೆ.

ಮುಖ್ಯ ನ್ಯಾಯಾಮೂರ್ತಿ ಜೆ.ಎಸ್‌. ಖೇಹರ್ ಅವರು ನ್ಯಾಯಾಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಹಾಗೂ ಎಸ್‌.ಎ ನಜೀರ್‌ ಒಳಗೊಂಡ ತ್ರಿಸದಸ್ಯ ಪೀಠ ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT