7

ಆಹಾ ಮೀನಿನ ಘಮಲು...

Published:
Updated:
ಆಹಾ ಮೀನಿನ ಘಮಲು...

ಊಟದ ಮೆನುವಿನಲ್ಲಿ ಸದಾ ಹೊಸತನ ಇರುವಂತೆ ನೋಡಿಕೊಳ್ಳುವ ನಗರದ ಕೆಲವು ಹೋಟೆಲ್‌ಗಳಲ್ಲಿ ಐಟಿಸಿ ಫಾರ್ಚೂನ್‌ನ ‘ಮೈ ಕೆಫೆ ರೆಸ್ಟೊರೆಂಟ್’ ಈ ಬಾರಿ ‘ಫಿಶಿಂಗ್ ಪ್ಲೋಟ್ಸ್‌’ ಎಂಬ ಮೀನು, ಸಿಗಡಿ ಆಹಾರ ಉತ್ಸವ ಆಯೋಜಿಸಿದೆ.

ಚೈನೀಸ್ ಶೈಲಿಯ ಮೀನಿನ ಆಹಾರ, ಥಾಯ್ ಶೈಲಿಯ ಮೀನು ಮತ್ತು ಸಿಗಡಿ ಆಹಾರದ ಜೊತೆಗೆ ಭಾರತಿಯ ಶೈಲಿಯ ಮೀನಿನ ಖಾದ್ಯಗಳನ್ನು ಬಾಣಸಿಗರು ಆಹಾರ ಉತ್ಸವಕ್ಕಾಗಿ ತಯಾರಿಸಿದ್ದಾರೆ.

ಪ್ರಾನ್ ಸಟಾಯ್, ಕ್ರಿಸ್ಪಿ ಫಿಶ್,  ಚಿಲ್ಲಿ ಫಿಶ್ ಸ್ಕೀವರ್, ಗ್ರಿಲ್ಡ್‌ ಪ್ರಾನ್, ಪ್ರಾನ್ ಕರಿ, ಪಾಂಪ್ಲೆಟ್ ಮೀನಿನಿಂದ ಮಾಡಿದ ಕಾಂಪ್ರೆಟ್ ಪಾಂಪ್ರೆಟ್ ಹೀಗೆ ಥಾಯ್ ಹಾಗೂ ಚೈನೀಸ್ ಶೈಲಿಯ ಮೀನು ಮತ್ತು ಸಿಗಡಿ ಬಳಸಿ ಮಾಡಿದ ಖಾದ್ಯಗಳ ಪಟ್ಟಿ ಬೆಳೆಯುತ್ತದೆ. ಸ್ಟಾರ್ಟರ್‌ ಮತ್ತು ಮೇನ್ ಕೋರ್ಸ್ ಎಂಬ ವಿಭಾಗಗಳು ಇಲ್ಲಿಲ್ಲ.

ದಕ್ಷಿಣ ಭಾರತದಲ್ಲಿ ಮೀನು ಖಾದ್ಯ ಜನಪ್ರಿಯ. ಹಾಗಾಗಿ ಎಲ್ಲೆಡೆ ದೊರಕುವ ಸಾಮಾನ್ಯ ಮೀನು ಮತ್ತು ಸಿಗಡಿ ಖಾದ್ಯಗಳಿಗಿಂತ ಭಿನ್ನವಾದುದನ್ನೇ ನೀಡಬೇಕೆಂಬ ಕಾರಣದಿಂದಾಗಿ ಹಲವು ಹೊಸ ರೀತಿಯ ಪ್ರಯೋಗಗಳನ್ನೂ ಮಾಡಿದ್ದಾರೆ.

‘ಥಾಯ್ ಶೈಲಿಯ ಚಿಕನ್‌ ಕರ್ರಿಗಳು ಬಹಳ ಜನಪ್ರಿಯ. ನಾವು ಇಲ್ಲಿ ಅದನ್ನೇ  ಮೀನು ಬಳಸಿ ಮಾಡಿದ್ದೇವೆ’ ಎಂದು ಹೊಸ ಪಾಕ ಪ್ರಯೋಗದ ಬಗ್ಗೆ ಹೇಳುತ್ತಾರೆ ಅನುಭವಿ ಬಾಣಸಿಗ ಸಚಿನ್ ತಲ್ವಾರ್. ಅಷ್ಟೆ ಅಲ್ಲ, ಪೈನಾಪಲ್ ಸೇರಿದಂತೆ ಇನ್ನೂ ಹಲವು ಹಣ್ಣು ಮತ್ತು ಕೆಲವು ತರಕಾರಿಗಳನ್ನು ಬಳಸಿ ಖಾದ್ಯಗಳಿಗೆ ವಿಶೇಷ ರುಚಿ ನೀಡುವ ಪ್ರಯತ್ನವೂ ಮಾಡಿದ್ದಾರೆ ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನೂ ಪಡೆದಿದ್ದಾರೆ.

ತಯಾರಿಸುವ ವಿಧಾನದಲ್ಲೂ ಭಿನ್ನತೆಯನ್ನು ಪ್ರಯೋಗಿಸಿದ್ದಾರೆ. ಗ್ರಿಲ್ಡ್, ಪ್ರೈ, ಸ್ಟೀಮ್, ರೋಸ್ಟ್‌ ಹೀಗೆ ವಿವಿಧ ಬಗೆಯಲ್ಲಿ ತಯಾರಿಸಿದ ಮೀನು ಖಾದ್ಯಗಳು ಉತ್ಸವದಲ್ಲಿ ದೊರೆಯುತ್ತವೆ. ನೇರವಾಗಿ ಬೆಂಕಿ ತಾಕಿಸಿ ಬೇಯಿಸುವ ಕ್ಯಾಂಟನೀಸ್ ಸ್ಟೈಲ್, ಥಾಯ್‌ನ ಗ್ಲೇಪಾಟ್ ಶೈಲಿ ಹೀಗೆ ಬೇರೆ ಬೇರೆ ಪ್ರದೇಶದ ಅಡುಗೆ ತಯಾರಿಕಾ ಶೈಲಿಯನ್ನು ಬಾಣಸಿಗರು ಬಳಸಿ ಅಡುಗೆ ಮಾಡಿದ್ದಾರೆ.

ರುಚಿಕರ ಮೀನುಗಳೆಂದು ಖ್ಯಾತವಾದ ಸೋಲೊ, ಬಾಸಾ, ಪಾಂಪ್ಲೆಟ್ ಇನ್ನೂ ಹಲವು ಬಗೆಯ ವಿಶೇಷ ಮೀನುಗಳನ್ನು ಬಳಸಲಾಗಿದೆ. ಸೀಗಡಿಯಲ್ಲೂ ಅಷ್ಟೆ. ಭಾರಿ ಗಾತ್ರದ, ಹೆಚ್ಚಿನ ರುಚಿಯ ಟೈಗರ್ ಪ್ರಾನ್‌ ಅನ್ನು ಅಡುಗೆಗೆ ಬಳಸಿದ್ದಾರೆ‌. ಮೀನು ಪ್ರಿಯರ ನಾಲಗೆ ನೀರೂರುವಂತೆ ಮಾಡಬಲ್ಲ ಖಾದ್ಯಗಳು ಮೈ ಪಾರ್ಚೂನ್‌ ನ ಮೈ ಕೆಫೆ ಬಾಣಸಿಗರು ಸಿದ್ದಪಡಿಸಿದ್ದಾರೆ.

***

ರೆಸ್ಟೊರೆಂಟ್: ಐಟಿಸಿ ಮೈ ಪಾರ್ಚೂನ್‌ನ ಮೈ ಕೆಫೆ

ವಿಶೇಷ– ಮೀನು ಮತ್ತು ಸಿಗಡಿ ಹಾರ ಉತ್ಸವ ‘ಫಿಶಿಂಗ್ ಪ್ಲೋಟ್ಸ್‌’

ಸಮಯ– 11 ರಿಂದ 3 ಮತ್ತು 7 ರಿಂದ 11.30

ಸ್ಥಳ– ಮೈ ಪಾರ್ಚೂನ್‌, ರಿಚ್‌ಮಂಡ್ ರಸ್ತೆ.

ಕೊನೆಯ ದಿನಾಂಕ– 13 ಆಗಸ್ಟ್‌

ಟೇಬಲ್ ಕಾಯ್ದಿರಿಸಲು: 080- 25001700

***

ದಕ್ಷಿಣ ಭಾರತದ ಆಹಾರದಲ್ಲಿ ಮೀನಿಗೆ ಪ್ರಮುಖ ಸ್ಥಾನ. ಈಗಾಗಲೇ ನಾವು ಸವಿದಿರುವ ಮೀನಿನ ರುಚಿಯ ಹೊರತಾಗಿ ಬೇರೆ ರುಚಿಯನ್ನು ನೀಡುವ ಪ್ರಯತ್ನ ಮಾಡಿದ್ದೇವೆ

ಸಚಿನ್ ತಲ್ವಾರ್, ಬಾಣಸಿಗ, ಐಟಿಸಿ ಫಾರ್ಚೂನ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry