7

ಬಗೆ ಬಗೆ ಬರ್ಗರ್‌ ದರ್ಬಾರ್‌!

Published:
Updated:
ಬಗೆ ಬಗೆ ಬರ್ಗರ್‌ ದರ್ಬಾರ್‌!

ದೊಡ್ಡ ಮಾಲ್‌ನ ಮೂಲೆಯಲ್ಲೊಂದು ರೆಸ್ಟೊರೆಂಟ್‌. ಮುಖ್ಯದ್ವಾರದ ಮುಂದೆ ಇಟ್ಟಿದ್ದ ಬರ್ಗರ್‌ ಚಿತ್ರಗಳಿರುವ ಪೋಸ್ಟರ್‌ ನೋಡಿ ಗ್ರಾಹಕರು ರೆಸ್ಟೊರೆಂಟ್‌ ಒಳಗೆ ಹೋಗುತ್ತಿದ್ದರು. ಬಾಗಿಲ ಬಳಿಯಿದ್ದ ಸಿಬ್ಬಂದಿ ಸ್ವಾಗತ ಕೋರಿದರೆ ಒಳಗಿದ್ದ ಸಿಬ್ಬಂದಿಯೆಲ್ಲ ‘ವೆಲ್‌ಕಮ್‌’ ಎಂದು ಹೇಳುತ್ತಾ ಸ್ವಾಗತಿಸುತ್ತಿದ್ದರು.

ವೈಟ್‌ಫೀಲ್ಡ್‌ನ ವರ್ಜೀನಿಯಾ ಮಾಲ್‌ನಲ್ಲಿ ತಿಂಗಳ ಹಿಂದಷ್ಟೇ ಆರಂಭವಾಗಿರುವ ಜಾನಿ ರಾಕೆಟ್ಸ್‌ ರೆಸ್ಟೊರೆಂಟ್‌ಗೆ ಬರುವ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ‘ಎಕೊ ವೆಲ್‌ಕಂ’ ಹೇಳುವ ರೀತಿಯಿದು. ಹಾಗೆಯೇ ಇಲ್ಲಿನ ಆಹಾರ ಸೇವಿಸಿ ಹೊರಗೆ ಹೋಗುವಾಗಲೂ ಎಲ್ಲಾ ಸಿಬ್ಬಂದಿ ಒಟ್ಟಾಗಿ ‘ಬಾಯ್‌’ ಹೇಳುತ್ತಾರೆ.

ಜಾನಿ ರಾಕೆಟ್ಸ್‌ ಅಮೆರಿಕಾ ಮೂಲದ ರೆಸ್ಟೊರೆಂಟ್‌. ಇದು ಬಗೆಬಗೆ ಬರ್ಗರ್‌ಗಳಿಗೆ ಹೆಸರುವಾಸಿ. ದಕ್ಷಿಣ ಭಾರತದಲ್ಲಿ ಆರಂಭಿಸಿದ ಮೊದಲ ಶಾಖೆ ಇದಾಗಿದೆ. ಇಲ್ಲಿ ‘ಅನ್‌ಲಿಮಿಟೆಡ್‌ ಮೀಲ್‌’ ಹಾಗೂ ಅಲಕಾಟ್‌ ಮೆನು ವ್ಯವಸ್ಥೆಯಿದೆ. ಆರಂಭದಲ್ಲಿ ಕೊಡುವ ಮಿಲ್ಕ್‌ ಶೇಕ್‌ (ಹ್ಯಾಂಡ್‌ ಸ್ಪೂನ್‌ ಶೇಕ್‌) ಕುಡಿದರೆ ಐಸ್‌ಕ್ರೀಂ ತಿಂದಂಥ ಅನುಭವವಾಗುತ್ತದೆ. ಆದರೆ ಈ ಮಿಲ್ಕ್‌ ಶೇಕ್‌ಗೆ ಹಾಲನ್ನು ಹಾಕುವುದಿಲ್ಲ, ಬದಲಾಗಿ ಡೈರಿ ಉತ್ಪನ್ನ ಹಾಗೂ ಹಣ್ಣನ್ನು ಬಳಸಿ ಮಾಡಿರುತ್ತಾರೆ. 11 ರೀತಿಯ ಮಿಲ್ಕ್‌ ಶೇಕ್‌ಗಳಿವೆ.

ಇಲ್ಲಿನ ಮತ್ತೊಂದು ಸಿಗ್ನೇಚರ್‌ ತಿನಿಸು ‘ನಂ 12’ ಬರ್ಗರ್‌. ಈ ಬರ್ಗರ್‌ಗೆ ನಂ 12 ಎಂದು ಹೆಸರಿಡಲು ಕಾರಣವಿದೆ, ಅದೇನೆಂದರೆ ಅಮೆರಿಕಾದಲ್ಲಿನ ಜಾನಿ ರಾಕೆಟ್ಸ್‌ಗೆ ಬರುವ ಗ್ರಾಹಕರು ಬರ್ಗರ್‌ ತಿಂದು ಕೊನೆಗೆ ಅಂಕಗಳನ್ನು ಕೊಡುತ್ತಿದ್ದರಂತೆ. ಬಹಳಷ್ಟು ಮಂದಿ 10ಕ್ಕೆ 12 ಅಂಕ ಕೊಡುತ್ತಿದ್ದರಿಂದ ‘ನಂ 12’ ಬರ್ಗರ್‌ ಎಂಬ ಹೆಸರು ಬಂದಿರುವುದಾಗಿ ಹೇಳುತ್ತಾರೆ ರೆಸ್ಟೊರೆಂಟ್‌ನ ವ್ಯವಸ್ಥಾಪಕ ಜತೀಂದರ್‌ ಪರಮರ್‌.

‘ನಂ 12’ ಬರ್ಗರ್‌ ಸ್ವಲ್ಪ ಸ್ಪೆಸಿಯಾಗಿಯೂ ಇರುತ್ತದೆ. ಉಪ್ಪಿನಕಾಯಿ, ಮೆಯೊನಿಸ್‌, ಸಾಸ್‌, ತರಕಾರಿ ಹಾಗೂ ಪ್ಯಾಟಿ (ಬ್ರೆಡ್‌ನ ಮಧ್ಯೆ ಇಡುವ ಕಟ್ಲೆಟ್‌) ಇಟ್ಟು ಸಿದ್ಧಪಡಿಸಿರುತ್ತಾರೆ. ಫ್ರೆಂಚ್‌ ಫ್ರೈಸ್‌ ಹಾಗೂ ಸಾಸ್‌ನೊಂದಿಗೆ ನೆಂಜಿಕೊಂಡು ತಿನ್ನಲು ಕೊಡುತ್ತಾರೆ.

‘ನಮ್ಮಲ್ಲಿ ಬರ್ಗರ್‌ಗೆ ಗೋಧಿ ಹಿಟ್ಟಿನ ಅಥವಾ ಯೆಲ್ಲೊ ಪೊಟ್ಯಾಟೊ ಬನ್‌ ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೇ ಬಿಟ್ಟಿದ್ದೇವೆ. ಮೈದಾಹಿಟ್ಟಿನ ಬನ್‌ಗಳನ್ನು ಬಳಸುವುದಿಲ್ಲ. ಗ್ರಾಹಕರೇ ರೆಸಿಪಿ ಹೇಳಿ ಬರ್ಗರ್‌ ಮಾಡಿಸಿಕೊಳ್ಳುವ ಅವಕಾಶವಿದೆ. ಖಾರ ಬೇಕೆನ್ನುವವರಿಗೂ ಆಯ್ಕೆಗಳಿವೆ. ಒಟ್ಟು 35 ಸ್ವಾದದ ಬರ್ಗರ್‌ಗಳನ್ನು ಮಾಡುತ್ತೇವೆ’ ಎಂದರು ಜತೀಂದರ್‌.

ಇಲ್ಲಿನ ಬೇಕನ್‌ ಚಡ್ಡರ್‌, ಹೌಸ್ಟನ್‌, ದಿ ಓರಿಜಿನಲ್‌, ರಾಕೆಟ್‌, ರೂಟ್‌ 66, ಸ್ಮೋಕ್‌ ಹೌಸ್‌ ಹೆಸರಿನ ಬರ್ಗರ್‌ಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ರುಚಿಕಾರಕ ತಿನಿಸುಗಳಾದ ಅಮೆರಿಕನ್‌ ಫ್ರೈಸ್‌, ಆನಿಯನ್‌ ರಿಂಗ್ಸ್‌, ಟೊಟ್ಸ್‌, ಚಿಕನ್‌ ಸ್ಟ್ರಿಪ್ಸ್‌, ರಾಕೆಟ್‌ ವಿಂಗ್ಸ್‌ ಬರ್ಗರ್‌ನೊಂದಿಗೆ ಕಾಂಬಿನೇಷನ್‌ ಆಗಿವೆ. ಮಕ್ಕಳಿಗಾಗಿ ಮಿನಿ ಬರ್ಗರ್‌ಗಳನ್ನೂ ಮಾಡಿಕೊಡುತ್ತಾರೆ.

ಸಸ್ಯಾಹಾರಿಯಲ್ಲಿ 6 ಹಾಗೂ ಮಾಂಸಾಹಾರಿಯಲ್ಲಿ ಮೂರು ವಿಧದ ಸ್ಟಾರ್ಟರ್‌ಗಳಿವೆ. ಅಮೆರಿಕನ್‌ ಫ್ರೈಸ್‌ ಗರಿಗರಿಯಾಗಿರುವ ಜೊತೆಗೆ ಸ್ಪೈಸಿಯಾಗಿರುತ್ತದೆ. ಚೀಸ್‌ನೊಂದಿಗೆ ಇಷ್ಟಪಡುವವರಿಗೆ ಚೀಸ್‌ ಫ್ರೈಸ್‌ ಕೊಡುತ್ತಾರೆ. ಮಾಂಸ ಬಳಸಿ ಮಾಡಿದ ಫ್ರೈಸ್ ಕೂಡ ಇಲ್ಲಿದೆ.

ಬನ್‌ ಇಲ್ಲದ ಬರ್ಗರ್‌: ‘ಕೆಲ ಗ್ರಾಹಕರು ಬರ್ಗರ್‌ ಇಷ್ಟವಿದ್ದರೂ ಬನ್‌ ತಿನ್ನಲು ಇಷ್ಟಪಡುವುದಿಲ್ಲ, ಅಂಥವರಿಗಾಗಿ ಸ್ಕಿನ್ನಿ ಬರ್ಗರ್‌ ಮಾಡಿಕೊಡುತ್ತೇವೆ. ಬರ್ಗರ್‌ ನೋಡಿದ ತಕ್ಷಣ ಅದರಲ್ಲಿ ಏನೇನಿದೆ ಎಂಬುದು ಗೊತ್ತಾಗಬೇಕು. ಅದು ನಿಜವಾದ ಬರ್ಗರ್‌ ಎನಿಸಿಕೊಳ್ಳುತ್ತದೆ’ ಎಂದರು ಜತೀಂದರ್‌.

ಗ್ರಾಹಕರು ರೆಸ್ಟೊರೆಂಟ್‌ ಒಳಗೆ ತೆಗೆಸಿಕೊಂಡ ಫೋಟೊವನ್ನು ರೆಸ್ಟೊರೆಂಟ್‌ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ, 100 ಲೈಕ್‌ ಪಡೆದರೆ ₹500 ಬೆಲೆಯ ತಿನಿಸುಗಳನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದ್ದಾರೆ.

***

ರೆಸ್ಟೊರೆಂಟ್‌: ಜಾನಿ ರಾಕೆಟ್ಸ್‌

ವಿಶೇಷ: ಬರ್ಗರ್‌, ಮಿಲ್ಕ್‌ಶೇಕ್‌

ಒಬ್ಬರಿಗೆ: ಅನ್‌ಲಿಮಿಟೆಡ್‌ ಮೀಲ್‌ ₹549 (ಸಸ್ಯಾಹಾರಿ), ₹619(ಮಾಂಸಾಹಾರಿ).

ಸ್ಥಳ: ನೆಲಮಹಡಿ, ವರ್ಜೀನಿಯಾ ಮಾಲ್‌, ವರ್ತೂರು ಕೋಡಿ, ವೈಟ್‌ಫೀಲ್ಡ್‌

ಸಮಯ: ಬೆಳಿಗ್ಗೆ 11ರಿಂದ ರಾತ್ರಿ11

ಟೇಬಲ್‌ ಕಾಯ್ದಿರಿಸಲು: ಮೊಬೈಲ್– 96329 75506

***

ಅಪ್ಪನೊಂದಿಗೆ ಅಮೆರಿಕಕ್ಕೆ ಹೋದಾಗ ಜಾನಿ ರಾಕೆಟ್ಸ್‌ನಲ್ಲಿ ಬರ್ಗರ್‌ ತಿಂದಿದ್ದೆ, ಬೆಂಗಳೂರಿನಲ್ಲೂ ಶಾಖೆ ಆರಂಭವಾಗಿರುವುದಕ್ಕೆ ಖುಷಿಯಾಗಿದೆ. ಇಲ್ಲಿನ ಅನ್‌ಲಿಮಿಟೆಡ್‌ ಮೀಲ್‌ ತುಂಬಾ ಇಷ್ಟ, ಅದರಲ್ಲೂ ‘ರೂಟ್‌ 66’, ಮಿಲ್ಕ್‌ ಶೇಕ್‌  ರುಚಿ ಅದ್ಭುತ.

–ಸಾಹಿಲ್‌, ಬ್ರೂಕ್‌ಫೀಲ್ಡ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry