ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಫ್‌ಎಫ್ಎಂ: ಕರಣ್‌, ಸುಶಾಂತ್‌, ಕೊಂಕಣಾಗೆ ಪ್ರಶಸ್ತಿ

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಬಾಲಿವುಡ್‌ ಚಿತ್ರನಿರ್ದೇಶಕ ಕರಣ್‌ ಜೋಹರ್‌ ಅವರು ಮೆಲ್ಬರ್ನ್‌ ಭಾರತೀಯ ಚಲನ ಚಿತ್ರೋತ್ಸವದಲ್ಲಿ (ಐಎಫ್‌ಎಫ್ಎಂ) ಸಿನಿಮಾ ಕ್ಷೇತ್ರದ ನಾಯಕತ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌  ಅವರು ಅತ್ಯತ್ತಮ ನಟ ಹಾಗೂ ಕೊಂಕಣಾ ಸೇನ್‌ ಶರ್ಮಾ ಅವರು ಅತ್ಯತ್ತಮ ನಟಿ ಪ್ರಶಸ್ತಿಗೆ ಪ್ರಾತ್ರರಾಗಿದ್ದಾರೆ.

’ಎಂ.ಎಸ್‌. ದೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ನಟನೆಗಾಗಿ ಸುಶಾಂತ್‌ ಸಿಂಗ್‌ ಅವರನ್ನು ಹಾಗೂ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಚಿತ್ರದ ನಟನೆಗಾಗಿ ಕೊಂಕಣಾ ಸೇನ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಐಶ್ವರ್ಯಾ ರೈ ಬಚ್ಚನ್‌ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ದಂಗಲ್‌’ ನಿನಿಮಾದ ನಿರ್ದೇಶಕ ನಿತೀಶ್‌ ತಿವಾರಿ ಅವರು ಅತ್ತುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಮಿತಾಭ್‌ ಬಚ್ಚನ್‌ ನಟನೆಯ ’ಪಿಂಕ್‌’ ಹಾಗೂ ರಾಹುಲ್‌ ಬೋಸ್‌ ನಿರ್ದೇಶನದ ’ಪೂರ್ಣಾ’ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿವೆ.

ಆಗಸ್ಟ್‌ 11ರಂದು ಆರಂಭಗೊಂಡಿರುವ ಚಲನಚಿತ್ರೊತ್ಸವ 22 ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT