ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರ ಸೆಲ್ಫಿಗೂ ಒಂದು ಆ್ಯಪ್‌

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇಂದಿನ ಯುವ ಜನಾಂಗದಲ್ಲಿ ಸೆಲ್ಫೀ ಎಂಬ ಹುಚ್ಚು ಉತ್ತುಂಗದಲ್ಲಿದೆ. ಇದರ ಪರಿಣಾಮವಾಗಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲೂ ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡವರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಕೇಳಿರುತ್ತೇವೆ. ಇದೀಗ ಸೆಲ್ಫೀ ಪ್ರಿಯರ ರಕ್ಷಣೆಗಾಗಿಯೇ ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹೊಸ ಸೆಲ್ಫೀ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಸೆಲ್ಫೀ ತೆಗೆಯುವುದು ಒಂದು ಕಲೆ! ಮೊಬೈಲ್ ಕ್ಯಾಮೆರಾದ ದಿಕ್ಕು, ಬೆಳಕು, ಕ್ಯಾಮೆರಾ ಮೋಡ್ ಹಾಗೂ ಸೆಟ್ಟಿಂಗ್ಸ್ ಸರಿ ಇಲ್ಲದಿದ್ದರೆ ಸೆಲ್ಫೀ ಚೆನ್ನಾಗಿ ಬರುವುದಿಲ್ಲ! ಕೆಲವರಿಗೆ ಈ ಕ್ಯಾಮೆರಾ ಸೆಟ್ಟಿಂಗ್ಸ್ ಬಗ್ಗೆಯೂ ಗೊತ್ತಿರುವುದಿಲ್ಲ! ಇಂತಹವರು ಈ ಹೊಸ ಸೆಲ್ಫೀ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡರೆ ಸಾಕು ಕ್ಯಾಮೆರಾ ಆನ್ ಮಾಡಿದಾಗ ಆಟೋ ಸೆಟ್ಟಿಂಗ್ಸ್ ಮೂಲಕ ಬೆಳಕು, ಕ್ಯಾಮೆರಾದ ದಿಕ್ಕು ಸರಿ ಹೊಂದುತ್ತದೆ ಎಂದು ವಿನ್ಯಾಸಕ ಡ್ಯಾನ್ ವೋಗಲ್ ಹೇಳುತ್ತಾರೆ.

3ಡಿ, 360 ಡಿಗ್ರಿ ಆ್ಯಂಗಲ್‌ನಿಂದಲೂ (ಕೋನ) ಸೆಲ್ಫೀ ಕ್ಲಿಕ್ಕಿಸುವ ವೈಶಿಷ್ಟ್ಯ ಇದರಲ್ಲಿದೆ. ಸುಮಾರು ಹತ್ತು ಅಡಿ ದೂರದವರೆಗಿನ ಜೂಂ ತಂತ್ರಜ್ಞಾನವನ್ನು ಈ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ಉದಾಹರಣೆಗೆ ಕಡಿದಾದ ಕಂದಕದಲ್ಲಿ ಒಂದು ಸೆಲ್ಫೀ ತೆಗೆಯಬೇಕು ಎಂದು ಒಬ್ಬ ಯುವಕ ಬಯಸುತ್ತಾನೆ ಎಂದಿಟ್ಟುಕೊಳ್ಳಿ! ಆತ ಕಂದಕದಿಂದ ಹತ್ತು ಅಡಿ ದೂರದಲ್ಲಿ ನಿಂತು ಜೂಮ್ ಮಾಡಿಕೊಂಡು ಸೆಲ್ಫೀ ತೆಗೆದರೆ ಅದು ಕಂದಕದಲ್ಲಿ ಚಿತ್ರ ತೆಗೆದಂತೆ ಕಾಣುತ್ತದೆ ಎಂಬುದು ಇದರ ಮತ್ತೊಂದು ವಿಶೇಷ.

ವ್ಯಾಯಾಮ ಉತ್ತೇಜಿಸದ ಫಿಟ್‌ಬಿಟ್ಸ್‌

ಫ್ಯಾಷನೆಬಲ್ ಆರೋಗ್ಯ ಫಿಟ್‌ಬಿಟ್ಸ್‌ಗಳು ಯುವಕರಲ್ಲಿನ ವ್ಯಾಯಾಮ ಶಕ್ತಿಯನ್ನು ಕುಂದಿಸುತ್ತವೆ ಎಂದು ಬ್ರಿಟನ್ ದೇಶದ ಬ್ರೂಲೂಯಿ ವಿಶ್ವವಿದ್ಯಾಲಯದ ಸಂಶೋಧನೆಯೊಂದು ತಿಳಿಸಿದೆ. ಈ ಸಂಶೋಧನಾ ವರದಿಯನ್ನು ಅಮೆರಿಕದ ಹೆಲ್ತ್ ಎಜುಕೇಷನ್ ಎಂಬ ಆನ್‌ಲೈನ್‌ ಪತ್ರಿಕೆ ಪ್ರಕಟಿಸಿದೆ.

ಈ ಫಿಟ್‌ಬಿಟ್ಸ್‌ಗಳಲ್ಲಿ ಆರೋಗ್ಯ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದಂತೆ ಹಲವಾರು ಟ್ರ್ಯಾಕ್ ಗಳನ್ನು ಅಳವಡಿಸಿರುತ್ತಾರೆ. ಉದಾಹರಣೆಗೆ ನಾವು ಓಡಿದ ದೂರ, ನಮ್ಮ ಹೃದಯ ಬಡಿತದ ಬೀಟ್ಸ್‌ ಫಿಟ್‌ಬಿಟ್ಸ್‌ಗಳ ಮೂಲಕ ಕಂಡುಕೊಳ್ಳಬಹುದು. ಹೀಗಾಗಿ ಬಹುಪಾಲು ಯುವಕರು ಫಿಟ್‌ಬಿಟ್ಸ್‌ಗಳು ಆರೋಗ್ಯ ವಿಚಾರವನ್ನು ತಿಳಿಸುವುದರಿಂದ ಹೆಚ್ಚಿನ ದೈಹಿಕ ಕಸರತ್ತು ನಡೆಸಲು ಮುಂದಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

12 ರಿಂದ 14 ವರ್ಷದ 1000 ಕ್ಕೂ ಹೆಚ್ಚು ಬಾಲಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರು ಫಿಟ್‌ಬಿಟ್ಸ್‌ಗಳನ್ನು ಧರಿಸುವವರು ಎಂಬುದು ವಿಶೇಷ. ಫಿಟ್‌ಬಿಟ್ಸ್‌ಗಳನ್ನು ಬಳಸದಿರುವಾಗ ಹೆಚ್ಚು ಹೊತ್ತು ದೈಹಿಕ ಕಸರತ್ತು ನಡೆಸುತ್ತಿದ್ದರಂತೆ! ಆದರೆ ಫಿಟ್‌ಬಿಟ್ಸ್‌ಗಳ ಬಳಕೆಯಿಂದಾಗಿ ದೈಹಿಕ ವ್ಯಾಯಾಮ ಕಡಿಮೆ ಮಾಡಿರುವುದಾಗಿ ಆ ಬಾಲಕರು ಹೇಳಿದ್ದಾರೆ ಎಂದು ಸಂಶೋಧನಾ ವರದಿ ತಿಳಿಸಿದೆ.

ಸೈನಿಕರಿಗೆ ‘ಹರ್ಮಾಜ್’ ಆ್ಯಪ್

‌ಭಾರತದ ರಕ್ಷಣಾ ಇಲಾಖೆ ದೇಶದ ಕಾವಲು ಕಾಯುವ ಯೋಧರಿಗಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದಕ್ಕೆ ಹರ್ಮಾಜ್‌ ಆ್ಯಪ್ ಎಂದು ಹೆಸರಿಡಲಾಗಿದೆ. ಯೋಧರು ಈ ಆ್ಯಪ್ ಮೂಲಕ ವೇತನದ ಪ್ರತಿ ಹಾಗೂ ಫಾರಂ 16 ಸೇರಿದಂತೆ ರಜೆಯ ಮಾಹಿತಿಯನ್ನು ಪಡೆಯಬಹುದು.

ಇದನ್ನು ಪ್ರಾಂಪ್ಟ್ ಕಮ್ಯೂನಿಕೇಶನ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಯೋಧರ ರಜೆಗಳು, ದೂರುಗಳು, ಸಮಸ್ಯೆಗಳ ಕುರಿತಂತೆಯೂ ಈ ಆ್ಯಪ್‌ನಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಆ್ಯಪ್ ವಿಂಡೋಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿದೆ.
ಗೂಗಲ್ ಪ್ಲೇಸ್ಟೋರ್: humraaz app

ವೊಡಾಫೋನ್ ಬಳಕೆದಾರರಿಗೆ ಡಿಸ್ಕವರಿ ಚಾನೆಲ್

ಇನ್ನು ಮುಂದೆ ವೊಡಾಫೋನ್ ಬಳಕೆದಾರರು ತಮ್ಮ ಫೋನ್ ಪ್ಲೇ ಆ್ಯಪ್ ಮೂಲಕ ಡಿಸ್ಕವರಿಯ 12 ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದೆ. ಈಗಾಗಲೇ ಈ ಎರಡು ಸಂಸ್ಥೆಗಳು ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಡಿಸ್ಕವರಿ ಚಾನೆಲ್, ಆ್ಯನಿಮಲ್ ಪ್ಲಾನೆಟ್, ಡಿಸ್ಕವರಿ ಎಚ್‌ಡಿ, ಡಿಸ್ಕವರಿ ವರ್ಲ್ಡ್, ಡಿಸ್ಕವರಿ ಟರ್ಬೊ, ಡಿಎಸ್ ಸ್ಪೋರ್ಟ್ಸ್ ಸೇರಿದಂತೆ 12 ಚಾನೆಲ್ ಗಳನ್ನು ನೋಡಬಹುದು.

ಭೂಕಂಪ ಮಾಹಿತಿ ನೀಡುವ ಆ್ಯಪ್‌

ಭಾರತ ಸರ್ಕಾರ ಸಾಗರದಾಳದಲ್ಲಿ ಭೂಕಂಪದ ಮಾಹಿತಿ ತಿಳಿಸುವ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲಕ ಕರಾವಳಿ ಭಾಗದ ಜನರು ಭೂಕಂಪದ ಬಗ್ಗೆ ಮಾಹಿತಿ ಪಡೆಯಬಹುದು. ಭೂಕಂಪನದ ಕೇಂದ್ರ ಬಿಂದು, ರಿಕ್ಟರ್ ಮಾಪಕದಲ್ಲಿನ ಕಂಪನದ ತೀವ್ರತೆಯನ್ನು ತಿಳಿಯಬಹುದು. ಕಂಪನವಾಗಿ ಕೆಲವೇ ನಿಮಿಷಗಳಲ್ಲಿ ಎಸ್ಎಂಎಸ್ ಮಾಹಿತಿಯ ಅಲರ್ಟ್ ನೋಟಿಫೀಕೆಷನ್ ಕೂಡ ಬಳಕೆದಾರರು ಪಡೆಯಬಹುದು.

ಈ ಆ್ಯಪ್ ಗೆ ಇಂಡಿಯಾ ಕ್ವೇಕ್ ಎಂದು ಹೆಸರಿಡಲಾಗಿದೆ. ಇದರ ಜತೆಗೆ ಸಾಗರ ವಾಣಿ ಎಂಬ ಮತ್ತೊಂದು ಆ್ಯಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಸಾಗರ ವಾಣಿ ಆ್ಯಪ್ ಕರಾವಳಿ ಭಾಗದ ರೈತರು ಮತ್ತು ಮೀನುಗಾರರಿಗೆ ಹವಾಮಾನದ ಮಾಹಿತಿ ನೀಡುತ್ತದೆ. ಈ ಎರಡು ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ದೊರೆಯುತ್ತವೆ.
ಗೂಗಲ್ ಪ್ಲೇಸ್ಟೋರ್: india quake app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT