ಮಂಗಳವಾರ, ಸೆಪ್ಟೆಂಬರ್ 28, 2021
22 °C
ಧ್ಯಾನಚಂದ್, ದ್ರೋಣ, ಅರ್ಜುನ ಪ್ರಶಸ್ತಿ ಪಟ್ಟಿ ಪ್ರಕಟ

ದೇವೇಂದ್ರ ಜಜಾರಿಯಾ, ಸರ್ದಾರ್ ಸಿಂಗ್‌ಗೆ ರಾಜೀವ್‌ಗಾಂಧಿ ಖೇಲ್ ರತ್ನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದೇವೇಂದ್ರ ಜಜಾರಿಯಾ, ಸರ್ದಾರ್ ಸಿಂಗ್‌ಗೆ ರಾಜೀವ್‌ಗಾಂಧಿ ಖೇಲ್ ರತ್ನ

ನವದೆಹಲಿ: 2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನಚಂದ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಘೋಷಿಸಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ದೇವೇಂದ್ರ ಜಜಾರಿಯಾ (ಪ್ಯಾರಾ ಅಥ್ಲೇಟ್) ಹಾಗೂ ಸರ್ದಾರ್ ಸಿಂಗ್ (ಹಾಕಿ) ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರಿ ಹಾಗೂ ಮಹಿಳಾ ತಂಡದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಒಟ್ಟು 14 ಮಂದಿ 2017ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ವರ್ಷ ಪಿ.ವಿ ಸಿಂಧು, ಸಾಕ್ಷಿ ಮಲ್ಲಿಕ್, ದೀಪಾ ಕರ್ಮಾಕರ್, ಜಿತು ರಾಯ್ ಖೇಲ್‌ ರತ್ನ ಪಡೆದುಕೊಂಡಿದ್ದರು.

ದ್ರೋಣಾ ಚಾರ್ಯ ಪ್ರಶಸ್ತಿಗೆ ದಿ.ಡಾ.ಆರ್ ಗಾಂಧಿ( ಅಥ್ಲೇಟ್), ಹೀರಾ ನಂದ್ ಕಟಾರಿಯಾ (ಕಬ್ಬಡಿ) ಆಯ್ಕೆಯಾಗಿದ್ದಾರೆ.

ಜಿ.ಎಸ್‌.ಎಸ್‌.ವಿ. ಪ್ರಸಾದ್ (ಬ್ಯಾಡ್ಮಿಂಟನ್ ಜೀವಮಾನ ಸಾಧನೆ), ಬ್ರೀಜ್ ಭೂಷಣ್ ಮಹಂತಿ (ಬಾಕ್ಸಿಂಗ್ – ಜೀವಮಾನ ಸಾಧನೆ), ಪಿ.ಎ. ರಾಫೇಲ್ (ಹಾಕಿ – ಜೀವಮಾನ ಸಾಧನೆ), ಸಂಜಯ್ ಚಕ್ರವರ್ತಿ(ಶೂಟಿಂಗ್ –ಜೀವಮಾನ ಸಾಧನೆ), ರೋಶನ್ ಲಾಲ್ (ಕುಸ್ತಿ–ಜೀವಮಾನ ಸಾಧನೆ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಧ್ಯಾನಚಂದ್ ಪ್ರಶಸ್ತಿಗೆ ಭೂಪೇಂದ್ರ ಸಿಂಗ್ (ಅಥ್ಲೇಟ್), ಸಯ್ಯದ್ ಶಾಹಿದ್ ಹಕಿಮ್ (ಫುಟ್‌ಬಾಲ್), ಸುಮರಾಯ್ ಟೆಟೆ (ಹಾಕಿ) ಆಯ್ಕೆಯಾಗಿದ್ದಾರೆ. 

ಅರ್ಜುನ ಪ್ರಶಸ್ತಿಗೆ ವಿ.ಜೆ. ಸುರೇಖಾ (ಅರ್ಚರಿ), ಕುಶ್ಬೀರ್ ಕೌರ್ (ಅಥ್ಲೇಟ್), ಅರೋಕಿಯಾ ರಾಜೀವ್(ಅಥ್ಲೇಟ್), ಪ್ರಶಾಂತ್ ಸಿಂಗ್(ಬಾಸ್ಕೆಟ್ ಬಾಲ್) ಸೇರಿದಂತೆ ಒಟ್ಟು 14 ಮಂದಿ  ಭಾಜನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.