ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಏರಿದ ಸಿಂಧು

7

ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಏರಿದ ಸಿಂಧು

Published:
Updated:
ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಏರಿದ ಸಿಂಧು

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಗುರುವಾರ ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಗಳಿಸಿದ್ದಾರೆ.

ಐದನೇ ಸ್ಥಾನದಲ್ಲಿ ಇದ್ದ ಸಿಂಧು ಒಂದು ಸ್ಥಾನದಲ್ಲಿ ಏರಿಕೆ ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಎರಡು ಸ್ಥಾನ ಕಳೆದುಕೊಂಡಿದ್ದಾರೆ. ಶ್ರೀಕಾಂತ್‌ 10ನೇ ಸ್ಥಾನದಲ್ಲಿ ಇದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಒಂದು ಸ್ಥಾನಕ್ಕೆ ಮೇಲೇರಿ 24ನೇ ಸ್ಥಾನದಲ್ಲಿದೆ. ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿ 20ನೇ ಸ್ಥಾನದಲ್ಲಿ ಮುಂದುವರಿದಿದೆ.

ಸೈನಾ ನೆಹ್ವಾಲ್‌ 16ನೇ ಸ್ಥಾನಕ್ಕೆ ಕುಸಿದಿದ್ದರೆ, ಬಿ ಸಾಯಿಪ್ರಣೀತ್‌ 19 ಹಾಗೂ ಎಚ್‌.ಎಸ್‌. ಪ್ರಣಯ್‌ 15ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್‌ ಜಯರಾಮ್‌ 17ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪುರುಷರ ಡಬಲ್ಸ್‌ ವಿಭಾಗದಲ್ಲಿ ಯಾವುದೇ ಜೋಡಿ 25ರ ಒಳಗಿನ ಸ್ಥಾನ ಹೊಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry