ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ ಅಗತ್ಯ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಜ್ಞಾತವಾಗಿದ್ದುಕೊಂಡೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಂದಿರುವ Sarahah ಎಂಬ ಆ್ಯಪ್‌ನಲ್ಲಿ ವ್ಯಕ್ತವಾದ ಸಂದೇಶಗಳನ್ನು ಜನರು ಫೇಸ್‌ಬುಕ್‌ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇಂಥ ಅನಾಮಧೇಯ ಸಂದೇಶಗಳು ತಕ್ಷಣಕ್ಕಂತೂ ರೋಚಕವಾಗಿ ಕಾಣಿಸುತ್ತಿವೆ. ಆದರೆ ಇವುಗಳ ಒಳಿತು-ಕೆಡಕು, ಪರಿಣಾಮಗಳೇನು ಎಂಬುದನ್ನು ಕಾದು ನೋಡಬೇಕು.

ಅನಾಮಧೇಯ ಪತ್ರಗಳ ಬಳಕೆ ಹೊಸದೇನಲ್ಲ. ಸಾಮಾನ್ಯವಾಗಿ ಇನ್ನೊಬ್ಬರ ಕೆಡುಕಿಗಾಗಿ ಇವು ಬಳಕೆಯಾಗಿದ್ದು ಬಹಳ. ಮದುವೆ ಸಂಬಂಧ ಮುರಿಯೋದಕ್ಕೆ, ದಾಯಾದಿಗಳಲ್ಲಿ ವೈಷಮ್ಯ ಬಿತ್ತಲು, ತನಿಖಾಧಿಕಾರಿಗಳ ಗಮನಕ್ಕೆ ತರಲು- ದಿಕ್ಕು ತಪ್ಪಿಸಲು... ಹೀಗೆ ಹತ್ತಾರು ಉದ್ದೇಶ.

ಈ ರೀತಿ ಅಜ್ಞಾತರಾಗಿ ಉಳಿಯಲು ಬಯಸುವ ಮನಸ್ಥಿತಿ ಎಂತಹುದು? ಹೆದರಿಕೆಯಿಂದಲೋ? ಸ್ವೀಕರಿಸುವ ವ್ಯಕ್ತಿ ಕೆಟ್ಟದ್ದು ಮಾಡಬಹುದು ಎಂದೋ ಅಥವಾ ತಾನು ಹೇಳುವ ಸುಳ್ಳಿಗೆ ಪರದೆಯೋ? ಕೌತುಕದ ವಿಷಯ ಎಂದರೆ Sarahah ಅರೇಬಿ ಭಾಷೆಯ ಪದ- ಅದರ ಅರ್ಥ ಪ್ರಾಮಾಣಿಕತೆ!  ಇದೊಂದು ವಿಪರ್ಯಾಸ. ಪ್ರಾಮಾಣಿಕತೆಗೆ ಪಾರದರ್ಶಕತೆ ಅಗತ್ಯ. ಇಲ್ಲಿ ಅದೇ ಇಲ್ಲ. ಸತ್ಯವನ್ನೇ ಹೇಳುವುದಾದರೆ ಭಯ ಏಕೆ? ಸುಪ್ತ ಮನಸ್ಸಿನ ಹುಚ್ಚು ಆಶಯಗಳನ್ನು ಕದ್ದು ಮುಚ್ಚಿ ಸುಲಭವಾಗಿ ರವಾನಿಸಲು ಇದೊಂದು ಸುಲಭ ಸಾಧನವಾಗಿದೆ.

ಕಾನೂನಿನ ಕೈಯಿಂದ ದೂರವಿರುವ ಹಾಗೂ ಧಿಡೀರನೆ ಪ್ರಚಲಿತಗೊಳ್ಳುವ ಇಂತಹ ಆ್ಯಪ್‌ಗಳ ಬಗ್ಗೆ ಎಚ್ಚರ ಅಗತ್ಯ.
–ಮುಕುಂದಾ ಗಂಗೂರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT