7

ಜಿ–ಮೇಲ್‌ನಲ್ಲಿ ಇವೆ ಹಲವು ಸೌಲಭ್ಯಗಳು

Published:
Updated:
ಜಿ–ಮೇಲ್‌ನಲ್ಲಿ ಇವೆ ಹಲವು ಸೌಲಭ್ಯಗಳು

ಜಿ–ಮೇಲ್‌ನಲ್ಲಿ ನಿತ್ಯ ಹೊಸ ಸೌಲಭ್ಯಗಳು ಸಿಗುತ್ತಿವೆ. ಕ್ರೋಮ್‌ ಬ್ರೌಸರ್ ಎಕ್ಸ್‌ಟೆನ್ಷನ್‌ಗಳ (extensions) ಮೂಲಕ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇ–ಮೇಲ್ ಜಾಡು ಪತ್ತೆ (ಮೇಲ್ಸ್‌ ಟ್ರ್ಯಾಕಿಂಗ್‌), ಅಕ್ಷರ ದೋಷ ಪತ್ತೆ, ಮೇಲ್‌ಗಳ ವರ್ಗೀಕರಣ ಇತ್ಯಾದಿ ಹೊಸ ಸೌಲಭ್ಯಗಳ ಮೂಲಕ ಸಾಮಾನ್ಯ ಜಿ–ಮೇಲ್‌ ಅನ್ನು ಸೂಪರ್ ಜಿ–ಮೇಲ್‌ ಆಗಿ ಬಳಸಿಕೊಳ್ಳಬಹುದು.

ಹೆಸರು ಬದಲಾಯಿಸಬಹುದು

ಎರಡು ಮೂರು ತಿಂಗಳ ಹಿಂದೆ ನಿಮ್ಮ ಮೇಲ್‌ಗೆ ಬಂದಿರುವ ಪಿಡಿಎಫ್‌ ಇತ್ಯಾದಿ ದಾಖಲೆಗಳು ಈಗ ಸಿಗದಿದ್ದಾಗ, ಮೇಲ್‌ ಸಬ್ಜೆಕ್ಟ್‌ ಗೊತ್ತಿದ್ದರೆ ಸಾಕು ಸುಲಭವಾಗಿ ಪತ್ತೆಹಚ್ಚಬಹುದು.

Re Name e–mail ಎಕ್ಸ್‌ಟೆನ್ಷೆನ್‌ ಅನ್ನು ಕ್ರೋಮ್‌ ಬ್ರೌಸರ್‌ನಲ್ಲಿ ಅಳವಡಿಸಿಕೊಂಡರೆ ಮೇಲ್‌ ಸಬ್ಜೆಕ್ಟ್‌ ಬದಲಿಸಿಕೊಳ್ಳಬಹುದು. ವಿಮಾನ ಟಿಕೆಟ್‌ ಪ್ರಯಾಣದ ದಿನ, ರೈಲು ಸಂಖ್ಯೆ ಇತ್ಯಾದಿ ಸಬ್ಜೆಕ್ಟ್‌ಗಳಂತೆ ಮೇಲ್‌ಗಳನ್ನು ಹುಡುಕಬಹುದು.

ಸರಿ ಮಾಡುತ್ತದೆ

ಒಂದೇ ಮೇಲ್‌ನ ಟೆಕ್ಟ್ಸ್ ಎರಡು ಮೂರು ರೀತಿ ಇದ್ದರೆ ಚೆನ್ನಾಗಿ ಕಾಣಿಸುವುದಿಲ್ಲ. ವೆಬ್‌ಸೈಟ್‌ಗಳಲ್ಲಿ ನಕಲು ಮಾಡಿದ ಟೆಕ್ಟ್ಸ್‌ ಫಾಂಟ್‌ಗಳು ಒಂದೊಂದು ಒಂದೊಂದು ರೀತಿ ಇರುತ್ತವೆ.

email text formater ಮೂಲಕ ಈ ಫಾಂಟ್‌ಗಳನ್ನು ಒಂದೇ ಆಕಾರಕ್ಕೆ ಬದಲಿಸಬಹುದು. ವೆಬ್‌ಸೈಟ್‌ನಿಂದ ನಕಲು ಮಾಡಿದ ಅಕ್ಷರಗಳನ್ನು ಮೇಲ್‌ ಬಾಕ್ಸ್‌ಗೆ ಹಾಕಿದ ನಂತರ ಅಲ್ಲಿ ಕಾಣಿಸುವ ಫಿಕ್ಸ್‌ಫಾಂಟ್‌ ಅನ್ನು ಸೆಲೆಕ್ಟ್‌ ಮಾಡಿದರೆ ಎಲ್ಲ ಅಕ್ಷರಗಳು ಒಂದೇ ಫಾಂಟ್‌ನಲ್ಲಿ ಕಾಣಿಸುತ್ತವೆ.

ಪ್ರಶ್ನೆಗಳು ಇವೆಯೇ?

ಮೇಲಿನ ಅಧಿಕಾರಿಗಳಿಂದ ನಿಮಗೆ ಮೇಲ್‌ ಬರುತ್ತದೆ. ಆದರೆ ಅದರಲ್ಲಿರುವ ವಿಷಯದ ಬಗ್ಗೆ ನಿಮಗೆ ಗೊಂದಲವಿರುತ್ತದೆ. ಕೂಡಲೇ ಆ ಬಗ್ಗೆ ಅಧಿಕಾರಿ ಬಳಿ ಕೇಳೋಣ ಎಂದರೆ, ಅವರು ಬೇರೆ ಕೆಲಸದಲ್ಲಿ ನಿರತರಾಗಿರುತ್ತಾರೆ. ನಂತರ ಕೇಳೋಣ ಎಂದರೆ ನಿಮಗೆ ಮರೆತುಹೋಗಬಹುದು. ಇಂತಹ ಮೇಲ್‌ಗಳಿಗೆ ಒಂದು ಟಿಪ್ಪಣಿ ಬರೆದುಕೊಂಡರೆ ಈ ಸಮಸ್ಯೆ ಇರದು. Simple Gmail notes ಮೂಲಕ ಇದು ಸಾಧ್ಯ. ಇದನ್ನು ಅಳವಡಿಸಿಕೊಂಡ ನಂತರ ನಿಮಗೆ ಬರುವ ಮೇಲ್‌ಗೆ ಒಂದು ಬಾಕ್ಸ್ ಬರುತ್ತದೆ. ಅದರಲ್ಲಿ ಬರೆದಿಟ್ಟುಕೊಳ್ಳಬಹುದು.

ತಪ್ಪುಗಳನ್ನು ತಿಳಿಸುತ್ತದೆ

ಇ–ಮೇಲ್‌ನಲ್ಲಿ ಅಕ್ಷರದೋಷ, ವ್ಯಾಕರಣ ದೋಷಗಳಿದ್ದರೆ ನಿಮ್ಮ ಬರವಣಿಗೆ ಯಾರಿಗೂ ಇಷ್ಟವಾಗುವುದಿಲ್ಲ.

ಈ ಸಮಸ್ಯೆಗೆ ಸುಲಭ ಪರಿಹಾರವೆಂದರೆ DraftMap. ಇದನ್ನು ಕ್ರೋಮ್‌ ಬ್ರೌಸರ್‌ನಲ್ಲಿ ಅಳವಡಿಸಿಕೊಂಡ ನಂತರ ಜಿ–ಮೇಲ್‌ನಲ್ಲಿ ಟೈಪ್‌ ಮಾಡಿದರೆ ವಾಕ್ಯದಲ್ಲಿರುವ ದೋಷ, ಹೆಚ್ಚಾಗಿ ಬಳಸಿದ ಪದಗಳು, ಸರಿಯಾದ ಶೈಲಿಯಲ್ಲಿ ಇರದ ವಾಕ್ಯಗಳು, ಹೀಗೆ ಒಂದೊಂದು ಭಿನ್ನ ಬಣ್ಣಗಳಲ್ಲಿ ಕಾಣಿಸುತ್ತವೆ. ಆಗ ಅಗತ್ಯವಿಲ್ಲದ ಮತ್ತು ತಪ್ಪು ಪದಗಳನ್ನು ಅಳಿಸಿಹಾಕಬಹುದು.

ಹೆಸರು ಹೊಸದಾಗಿ

ಜಿ–ಮೇಲ್‌ ಸೆಟ್ಟಿಂಗ್ಸ್‌ನಲ್ಲಿ ಸಿಗ್ನೇಚರ್ ಎಂಬ ಆಯ್ಕೆ ಇರುತ್ತದೆ. ಇದರಲ್ಲಿ ಹೆಸರು,ವಿವರಗಳನ್ನು ಮೊದಲೇ ಬರೆದಿಟ್ಟರೆ, ಸೆಂಟ್‌ ಮೇಲ್‌ ಕೊನೆಯಲ್ಲಿ ಅವು ಬರುತ್ತವೆ. ಇದಕ್ಕೆ ಭಾವಚಿತ್ರ, ಸೋಷಿಯಲ್‌ ನೆಟ್‌ವರ್ಕಿಂಗ್ ಸೈಟ್‌ನಂತಹ ಇತ್ಯಾದಿ ಸೌಲಭ್ಯಗಳನ್ನು ಜೋಡಿಸಬೇಕೆಂದರೆ Wise stamp email signature for G mail ಎಕ್ಸ್‌ಟೆನ್ಷನ್‌ ಇರಬೇಕು.

ಇದನ್ನು ಕ್ರೋಮ್‌ ಬ್ರೌಸರ್‌ನಲ್ಲಿ ಅಳವಡಿಸಿಕೊಂಡರೆ, ಒಂದು ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಸೋಷಿಯಲ್‌ ನೆಟ್‌ವರ್ಕಿಂಗ್‌ ಐಡಿ ಇತ್ಯಾದಿ ವಿವರ ನೀಡಬೇಕು. ಆಗ ನೀವು ಯಾವಾಗ ಮೇಲ್‌ ಮಾಡಿದರೂ ಭಿನ್ನವಾಗಿ ಹೆಸರು ಮೂಡುತ್ತದೆ.

ನೋಡಿದ್ದಾರೋ ಇಲ್ಲವೋ?

ವಾಟ್ಸ್‌ಆ್ಯಪ್‌ಗೆ ಒಂದು ಸಂದೇಶ ಕಳುಹಿಸಿದರೆ, ನೀವು ಕಳುಹಿಸಿರುವ ವ್ಯಕ್ತಿ ಅದನ್ನು ನೋಡಿದ್ದಾರೋ ಇಲ್ಲವೋ ಎಂಬುದನ್ನು ಕ್ಲಿಕ್‌ ಮಾರ್ಕ್‌ ಮೂಲಕ ತಿಳಿದುಕೊಳ್ಳಬಹುದು.

ಜಿ–ಮೇಲ್‌ನಲ್ಲೂ ಈ ಸೌಲಭ್ಯವಿದೆ. mail track extension ಅನ್ನು ಅಳವಡಿಸಿಕೊಂಡು, ಮೇಲ್‌ ಮಾಡಿದ ನಂತರ ಕೆಳಗೆ ಕಾಣಿಸುವ ಮೇಲ್‌ ಟ್ರ್ಯಾಕ್‌ ಆಯ್ಕೆಯನ್ನು ಸಕ್ರಿಯ ಮಾಡಿ ಸೆಂಡ್‌ ಮಾಡಬೇಕು. ಈ ರೀತಿ ಕಳುಹಿಸಿದ ಮೇಲ್, ಸಂಬಂಧಿಸಿದವರಿಗೆ ಸೇರಿದ ಕೂಡಲೇ ಒಂದು ಗ್ರೀನ್‌ ಕ್ಲಿಕ್‌, ನೋಡಿದರೆ ಎರಡು ಗ್ರೀನ್‌ ಕ್ಲಿಕ್‌ ಮಾರ್ಕ್‌ ಕಾಣಿಸುತ್ತವೆ.

ಬಂದರೆ ಹೇಳುತ್ತದೆ

ನಿಮಗೆ ಮೇಲ್‌ ಬಂದರೆ ಮೊಬೈಲ್‌ನಲ್ಲಿ ನೋಟಿಫಿಕೇಷನ್ ಬರುತ್ತದೆ. ಆದರೆ, ಕಂಪ್ಯೂಟರ್‌ನಲ್ಲಿ ಮೇಲ್‌ ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಲಾಗಿನ್‌ ಆಗಬೇಕು.

ನೀವು checker plus for gmail ಎಕ್ಸ್‌ಟೆನ್ಷನ್‌ ಅಳವಡಿಸಿಕೊಂಡಿದ್ದರೆ, ಕಂಪ್ಯೂಟರ್‌ನಲ್ಲೂ ಸೂಚನೆ ಬರುತ್ತದೆ. ಅಲ್ಲೇ ಅವನ್ನು ಕ್ಲಿಕ್‌ ಮಾಡಿ ನೋಡಬಹುದು, ಡಿಲಿಟ್‌, ಮೂವ್‌, ಫಾರ್ವರ್ಡ್‌ ಆಯ್ಕೆಗಳೂ ಇರುತ್ತವೆ.

ಸುಲಭ ವರ್ಗೀಕರಣಕ್ಕೆ

ವೈಯಕ್ತಿಕ ಮೇಲ್ಸ್‌, ವೃತ್ತಿಗೆ ಸಂಬಂಧಿಸಿದ ಮೇಲ್ಸ್‌, ಬ್ಯಾಂಕ್‌ ಮೇಲ್ಸ್‌, ಹೀಗೆ ಕ್ಷೇತ್ರಕ್ಕೆ ಅನುಸಾರ ಮೇಲ್‌ಗಳನ್ನು ವರ್ಗೀಕರಿಸಿ ಇಡಬಹುದು. sorted ಎಕ್ಸ್‌ಟೆನ್ಷನ್‌ ಮೂಲಕ ಇದು ಸಾಧ್ಯ. ಇದನ್ನು ಜಿ–ಮೇಲ್‌ಗೆ ಜೋಡಿಸಿದ ನಂತರ, ಹೊಸ ವಿಂಡೊ ಓಪನ್ ಆಗುತ್ತದೆ.

ಅದರಲ್ಲಿ ಟು ಡೂ, ಫಾಲೋ ಅಪ್‌, ಲಿಸ್ಟ್‌ ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರ ಟ್ಯಾಬ್ಸ್‌ಗಳಿಗೆ ಮೇಲ್‌ಗಳನ್ನು ಎಳೆದು ಸುಲಭವಾಗಿ ವರ್ಗೀಕರಿಸಬಹುದು.

ಉತ್ತರ ಬರದಿದ್ದರೆ

ಯಾರಿಗಾದರೂ ಮೇಲ್‌ ಮಾಡಿದ್ದರೆ, ಎರಡು ದಿನಗಳಾದರೂ ಅದಕ್ಕೆ ಪ್ರತಿಕ್ರಿಯೆ ಬರದಿದ್ದರೆ, ಪುನಃ ಮೇಲ್ ಮಾಡಬೇಕು, ಈ ರೀತಿ ಪ್ರತಿಕ್ರಿಯೆ ಬರದಿದ್ದಾಗ ಮತ್ತೆ, ಮತ್ತೆ ಮೇಲ್‌ ಮಾಡುವ ಅಗತ್ಯವಿಲ್ಲ.

Notifus ಎಕ್ಸ್‌ಟೆನ್ಷನ್‌ ಮೂಲಕ ಸ್ವಯಂಚಾಲಿತವಾಗಿ ಅವರಿಗೆ ಮೇಲ್‌ ಹೋಗುವಂತೆ ಮಾಡಬಹುದು.

ಇದನ್ನು ಅಳವಡಿಸಿಕೊಂಡ ನಂತರ, ಕಂಪೋಸ್‌ ಮೇಲ್‌ ಐಕಾನ್‌ ಒತ್ತಿದರೆ, ಅದರ ಕೆಳಗೆ, ಸೆಂಡ್, ಸೆಂಡ್‌+1 ಡೇ, +2ಡೇ ಎಂಬ ಆಯ್ಕೆಗಳು ಕಾಣಿಸುತ್ತವೆ. ಅವನ್ನು ಆಯ್ಕೆ ಮಾಡಿಕೊಂಡಿದ್ದರೆ, ಪ್ರತಿಕ್ರಿಯೆ ಬಾರದ ಮೇಲ್‌ಗಳಿಗೆ ಪುನಃ ಮೇಲ್ ಹೋಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry