ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡುವುದು ಹೇಗೆ?

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರ್ಜಾಲ ಬಳಕೆ ಹೆಚ್ಚಾದಂತೆ ದಿನಕ್ಕೆ ಹಲವು ಜಾಲತಾಣಗಳಿಗೆ ಭೇಟಿ ನೀಡುವುದು ಹಲವರ ಸಾಮಾನ್ಯ ಅಭ್ಯಾಸ. ಸುದ್ದಿಗಾಗಿಯೋ, ಲೇಖನವೊಂದರ ಓದಿಗಾಗಿಯೋ ಹಲವು ಜಾಲತಾಣಗಳಿಗೆ ಆಗಾಗ ಭೇಟಿ ನೀಡುವುದು ಇದ್ದೇ ಇರುತ್ತದೆ. ಹೀಗೆ ಹಲವು ಜಾಲತಾಣಗಳ ಪೈಕಿ ಕೆಲವೊಂದು ನಿರ್ದಿಷ್ಟ ಜಾಲತಾಣಗಳಿಗೆ ಪ್ರತಿದಿನ ಅಥವಾ ದಿನದಲ್ಲಿ ಹೆಚ್ಚು ಬಾರಿ ಭೇಟಿ ನೀಡುವ ಸಂದರ್ಭದಲ್ಲಿ ಪ್ರತಿಬಾರಿಯೂ ಆ ಜಾಲತಾಣದ ಯುಆರ್‌ಎಲ್‌ ಲಿಂಕ್‌ ಅನ್ನು ಬ್ರೌಸರ್‌ನಲ್ಲಿ ಟೈಪಿಸುವ ಬದಲು ಆ ವೆಬ್‌ಸೈಟ್‌ನ ಪೇಜ್‌ ಅನ್ನು ಬುಕ್‌ಮಾರ್ಕ್‌ ಮಾಡಿಕೊಳ್ಳಬಹುದು.

ಉದಾಹರಣೆಗೆ ನೀವು ನಿತ್ಯ ‘ಪ್ರಜಾವಾಣಿ’ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದರೆ ನೀವು ಪ್ರತಿ ಬಾರಿ ಬ್ರೌಸರ್‌ ತೆರೆದು prajavani.net ಎಂದು ಟೈಪಿಸುವ ಅಗತ್ಯವಿಲ್ಲ. prajavani.net ವೆಬ್‌ಪೇಜ್‌ ಅನ್ನು ಬುಕ್‌ಮಾರ್ಕ್‌ ಮಾಡಿಕೊಂಡರೆ ನೀವು ಬ್ರೌಸರ್‌ ತೆರೆದಾಕ್ಷಣ ಬುಕ್‌ಮಾರ್ಕ್ಸ್‌ ಬಾರ್‌ನಲ್ಲಿ ಕಾಣುವ ಲಿಂಕ್‌ ಕ್ಲಿಕ್‌ ಮಾಡಿದರೆ ಸಾಕು, ‘ಪ್ರಜಾವಾಣಿ’ ವೆಬ್‌ಪೇಜ್‌ ತೆರೆದುಕೊಳ್ಳುತ್ತದೆ.

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಯಾವ ವೆಬ್‌ಪೇಜ್‌ ಹೆಚ್ಚು ತೆರೆಯುತ್ತೀರೋ ಆ ಪೇಜ್‌ ಅನ್ನು ಬುಕ್‌ಮಾರ್ಕ್‌ ಮಾಡಿಕೊಳ್ಳಿ. ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ನೋಡೋಣ. ಮೊದಲು ಬ್ರೌಸರ್‌ ತೆರೆಯಿರಿ. ನೀವು ಬುಕ್‌ಮಾರ್ಕ್‌ ಮಾಡಬೇಕಿರುವ ವೆಬ್‌ಸೈಟ್‌ನ ಯುಆರ್‌ಎಲ್‌ ಅನ್ನು ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ ಕ್ಲಿಕ್‌ ಮಾಡಿ. ವೆಬ್‌ಸೈಟ್‌ನ ಪೇಜ್‌ ತೆರೆದುಕೊಂಡ ಬಳಿಕ ಬ್ರೌಸರ್‌ನ ಅಡ್ರೆಸ್‌ಬಾರ್‌ನ ಬಲಕ್ಕೆ ಕಾಣುವ ಮೂರು ಚುಕ್ಕೆಯ ಸೆಟ್ಟಿಂಗ್ಸ್‌ ಮೆನು ಮೇಲೆ ಕ್ಲಿಕ್‌ ಮಾಡಿ.

ಮೆನುವಿನಲ್ಲಿ ಕಾಣುವ Bookmarks ಮೇಲೆ ಕ್ಲಿಕ್‌ ಮಾಡಿ. ಬಳಿಕ Bookmark this page ಕ್ಲಿಕ್ಕಿಸಿ. ಈಗ ನೀವು ಭೇಟಿ ನೀಡಿರುವ ವೆಬ್‌ಸೈಟ್‌ ಪೇಜ್‌ ಬುಕ್‌ಮಾರ್ಕ್‌ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಬ್ರೌಸರ್‌ ಕ್ಲೋಸ್‌ ಮಾಡಿ ಮತ್ತೊಮ್ಮೆ ಅದೇ ಪುಟಕ್ಕೆ ಭೇಟಿ ನೀಡಬೇಕಿದ್ದರೆ ಈ ಬುಕ್‌ಮಾರ್ಕ್‌ ಲಿಂಕ್‌ ಮೇಲೆ ಕ್ಲಿಕ್ಕಿಸಿದರೆ ಆಯಿತು, ಆ ಪೇಜ್‌ ತೆರೆದುಕೊಳ್ಳುತ್ತದೆ.

ಬುಕ್‌ಮಾರ್ಕ್‌ ಮಾಡಿರುವ ವೆಬ್‌ಪೇಜ್‌ ಅನ್ನು ತೆಗೆದು ಹಾಕಬೇಕಿದ್ದರೆ ಬುಕ್‌ಮಾರ್ಕ್‌ ಬಾರ್‌ನಲ್ಲಿ ಕಾಣುವ ಆಯಾ ವೆಬ್‌ಪೇಜ್‌ ಲಿಂಕ್‌ನ ಮೇಲೆ ರೈಟ್‌ ಕ್ಲಿಕ್‌ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Delete ಮೇಲೆ ಕ್ಲಿಕ್‌ ಮಾಡಿದರೆ ನೀವು ಬುಕ್‌ಮಾರ್ಕ್‌ ಮಾಡಿದ್ದ ಪೇಜ್‌ನ ಲಿಂಕ್‌ ಅಲ್ಲಿಂದ ಹೊರಟುಹೋಗುತ್ತದೆ.

ಬುಕ್‌ಮಾರ್ಕ್‌ ಬಾರ್‌ ಅನ್ನೂ ನೀವು ನಿಮಗೆ ಬೇಕಾದಂತೆ ಕಸ್ಟಮೈಸ್‌ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಬುಕ್‌ಮಾರ್ಕ್‌ ಬಾರ್‌ ಬ್ರೌಸರ್‌ನ ಅಡ್ರೆಸ್‌ಬಾರ್‌ ಕೆಳಗೆ ಕಾಣಿಸಿಕೊಳ್ಳುತ್ತದೆ. ಹೀಗೆ ಬುಕ್‌ಮಾರ್ಕ್‌ ಬಾರ್‌ ಕಾಣಿಸಿಕೊಳ್ಳುವುದು ಬೇಡ ಎಂದರೆ ಬುಕ್‌ಮಾರ್ಕ್‌ ಮೆನುವಿಗೆ ಹೋಗಿ ಅಲ್ಲಿ ಕಾಣುವ Show bookmarks bar ಆಯ್ಕೆಯನ್ನು ಅನ್‌ಚೆಕ್‌ ಮಾಡಿದರೆ ನಿಮ್ಮ ಬುಕ್‌ಮಾರ್ಕ್‌ ಬಾರ್‌ಹೈಡ್‌ ಆಗುತ್ತದೆ.

ಮತ್ತೆ ಬುಕ್‌ಮಾರ್ಕ್‌ ಬಾರ್‌ ಬೇಕೆಂದರೆ ಹಿಂದಿನ ಆಯ್ಕೆಗೆ ಹೋಗಿ Show bookmarks bar ಅನ್ನು ಚೆಕ್‌ ಮಾಡಿ. ಈಗ ಬುಕ್‌ಮಾರ್ಕ್‌ ಬಾರ್‌ ಕಾಣಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT