ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1) ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಬಳಿಕ ದೇಶದ ಪೂರ್ಣಾವಧಿ ರಕ್ಷಣಾ ಖಾತೆ ಸಚಿವೆಯಾಗಿ ಇತ್ತೀಚೆಗೆ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
a) ನಿರ್ಮಲ ಸೀತಾರಾಮನ್‌ b) ಸುಷ್ಮಾ ಸ್ವರಾಜ್‌ c) ಸ್ಮೃತಿ ಇರಾನಿ d) ಸುಮಿತ್ರಾ ಮಹಾಜನ್‌

2) ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಆರ್ಥಿಕ ತಜ್ಞ ರಾಜೀವ್‌ ಕುಮಾರ್‌ ಅವರು 2016ರಲ್ಲಿ ಪ್ರಕಟಿಸಿದ ಪುಸ್ತಕದ ಹೆಸರು ಏನು?a) Many Futures of India b) Modi and His Challenges
c) India 2015: Towards Economic Transformation d) Resurgent India: Ideas and Priorities

3) ಇತ್ತೀಚೆಗೆ ನೂತನ ಸಿಎಜಿ ಹಾಗೂ ನೂತನ ಚುನಾವಣಾ ಆಯುಕ್ತರಾಗಿ ನೇಮಕಗೊಂಡವರನ್ನು ಈ ಕೆಳಕಂಡವರಲ್ಲಿ ಗುರುತಿಸಿ?
a) ಶಶಿಕಾಂತ್ ಶರ್ಮಾ–ನಿಸಾಮ್ ಝೈದಿ
b) ನವೀನ್ ಕುಮಾರ್ ಜೈನ್‌– ನರೇಶ್‌ ಚಂದ್ರ ಮಿಶ್ರಾ
c) ರಾಜೀವ್ ಮಹರ್ಷಿ– ಸುನೀಲ್ ಅರೋರಾ
d) ರಮಾಕಾಂತ್ ಅತುಳೆ– ಇಂದಿರಾ ಭಟ್ಟಚಾರ್ಯ

4) ಸೆಪ್ಟೆಂಬರ್‌ 6ರಂದು ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ‘ಪಗೋಡ’ ಪುನಶ್ಚೇತನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಪಗೋಡ ಎಂದರೆ....?
a) ಧಾರ್ಮಿಕ ವಿಶ್ವವಿದ್ಯಾಲಯ b) ಜೈನ ಬಸಿದಿ c) ಹಿಂದೂ ದೇವಾಲಯ d) ಬೌದ್ಧ ಸ್ತೂಪ ಅಥವಾ ಬೌದ್ಧ ದೇವಾಲಯ

5) ಕೊಂಕಣಿ ಲೇಖಕ ಮಹಾಬಲೇಶ್ವರ ಸೈಲ್‌ ಅವರಿಗೆ ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಘೋಷಿಸಲಾಗಿದೆ. ಅವರ ಜನಪ್ರಿಯ ಕಾದಂಬರಿಯನ್ನು ಗುರುತಿಸಿ?
a) ಹೌಥನ್ b) ಅದೃಷ್ಟ್ c) ಕಾಳಿ ಗಂಗಾ d) ಮೇಲಿನ ಎಲ್ಲವು

6) ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ)ಯು ವಿಶ್ವದ ಮೊಟ್ಟ ಮೊದಲ ಯುರೇನಿಯಂ ಬ್ಯಾಂಕ್‌ ಅನ್ನು ಯಾವ ದೇಶದಲ್ಲಿ ಸ್ಥಾಪನೆ ಮಾಡಿದೆ?
a) ಉಜ್ಬೇಕಿಸ್ತಾನ  b) ತಜಕಿಸ್ತಾನ
c) ಕಿರ್ಜಿಸ್ತಾನ     d) ಕಜಕಿಸ್ತಾನ

7) 2017 ರ ಆನೆ ಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು ಎಷ್ಟು ಆನೆಗಳಿವೆ ಎಂದು ಗುರುತಿಸಲಾಗಿದೆ ?
a) 5,719 ಆನೆಗಳು b) 6,049 ಆನೆಗಳು
c) 3,054 ಆನೆಗಳು d) 3,054 ಆನೆಗಳು

8) ‘ನಾಟ್ ಎ ಟಾರ್ಗೆಟ್’ ಎಂಬ ಧ್ಯೇಯವಾಕ್ಯದ ಮೂಲಕ ವಿಶ್ವ ಮಾನವೀಯ ದಿನವನ್ನು ಈ ಕೆಳಕಂಡ ಯಾವ ದಿನದಂದು ಆಚರಿಸಲಾಗುತ್ತದೆ?
a) ಆಗಸ್ಟ್‌ 21 b) ಆಗಸ್ಟ್‌ 25
c) ಆಗಸ್ಟ್‌ 28 d) ಆಗಸ್ಟ್‌ 31

9) ಕೇಂದ್ರ ಸರ್ಕಾರದ ನಮಾಮಿ ಗಂಗಾ ಯೋಜನೆಯ ಮುಖ್ಯ ಉದ್ದೇಶ ಏನು?
a) ನಗರ ಪ್ರದೇಶಗಳಿಗೆ ನೀರು ಪೂರೈಕೆ b) ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ
c) ಗಂಗಾ ನದಿ ಪುನರುಜ್ಜೀವನ d) ಮಹಿಳೆಯರಿಗೆ ಪಿಂಚಣಿ ನೀಡುವುದು

10) ಭಾರತೀಯ ಮೂಲದ ಪದ್ಮಾ ವಿಶ್ವನಾಥನ್‌ ಅವರು ಅಮೆರಿಕದ ಫಂಡ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ?a) ದ ಟಾಸ್ ಆಫ್ ಎ ಲೆಮನ್ b) ದ ಎವರ್ ಆಫ್ಟರ್ ಆಫ್ ಅಶ್ವಿನ್ ರಾವ
c)ಮೈ ಇಂಡಿಯನ್‌ ಜರ್ನಿ d) ಎ ಪೋಯಮ್‌

ಉತ್ತರಗಳು 1-a, 2-b, 3- c, 4-d, 5-d, 6-d, 7-b, 8-a, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT