ಪದ್ಮರಾಜ ದಂಡಾವತಿ, ಪದ್ಮಾ ಶೇಖರ್ ಗೆ ಚಾವುಂಡರಾಯ ಪ್ರಶಸ್ತಿ

7

ಪದ್ಮರಾಜ ದಂಡಾವತಿ, ಪದ್ಮಾ ಶೇಖರ್ ಗೆ ಚಾವುಂಡರಾಯ ಪ್ರಶಸ್ತಿ

Published:
Updated:
ಪದ್ಮರಾಜ ದಂಡಾವತಿ, ಪದ್ಮಾ ಶೇಖರ್ ಗೆ ಚಾವುಂಡರಾಯ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2016ನೇ ಸಾಲಿನ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಭಾಜನರಾಗಿದ್ದಾರೆ.

2017ನೇ ಸಾಲಿನ ಇದೇ ಪ್ರಶಸ್ತಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾ ಶೇಖರ್ ಆಯ್ಕೆಯಾಗಿದ್ದಾರೆ. ತಲಾ ₹30,000 ನಗದು ಪುರಸ್ಕಾರ ಮತ್ತು ಸ್ಮರಣಿಕೆಗಳನ್ನು ಈ ಪ್ರಶಸ್ತಿ ಒಳಗೊಂಡಿದೆ.

ವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ‘ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ’ ಪಲ್ಲವ ಪ್ರಕಾಶನ ಸಂಸ್ಥೆಗೆ ಲಭಿಸಿದೆ. ₹ 35,000 ನಗದು ಪುರಸ್ಕಾರವನ್ನು ಈ ಪ್ರಶಸ್ತಿ ಒಳಗೊಂಡಿದೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry