ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ ಇಬ್ರಾಹಿಂನ ₹ 56 ಸಾವಿರ ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು

Last Updated 13 ಸೆಪ್ಟೆಂಬರ್ 2017, 9:09 IST
ಅಕ್ಷರ ಗಾತ್ರ

ಲಂಡನ್‌:  ಬ್ರಿಟನ್‌ನಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಸೇರಿದ ₹ 56 ಸಾವಿರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬ್ರಿಟನ್‌ ಸರ್ಕಾರ ತಿಳಿಸಿದೆ.

ಇದು ಬ್ರಿಟನ್‌ ಸರ್ಕಾರದ ದಿಟ್ಟ ಕ್ರಮ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮುಂಬೈ ಸರಣಿ ಬಾಂಬ್‌ ಸ್ಫೋಟದ  ಪ್ರಮುಖ ಆರೋಪಿಯಾಗಿರುವ ದಾವೂದ್‌ ಇಬ್ರಾಹಿಂ 1993 ರಿಂದ ತಲೆಮರೆಸಿಕೊಂಡಿದ್ದಾನೆ. 

ದಾವೂದ್‌ ಇಬ್ರಾಹಿಂ ಬ್ರಿಟನ್‌ನಲ್ಲಿ ಹೊಂದಿರುವ ಆಸ್ತಿಗಳ ಪಟ್ಟಿಯ ಕಡತವನ್ನು ಬ್ರಿಟನ್‌ ಸರ್ಕಾರಕ್ಕೆ ಭಾರತ ನೀಡಿತ್ತು. ಇದರ ಅನ್ವಯ ದಾವೊದ್‌ ಹೊಂದಿರುವ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬ್ರಿಟನ್‌ ಸರ್ಕಾರ ತಿಳಿಸಿದೆ.

2015ರಲ್ಲಿ ಫೋರ್ಬ್ಸ್‌ ನಿಯತಕಾಲಿಕೆ ದಾವೂದ್‌ ಇಬ್ರಾಹಿಂ ಸುಮಾರು 56 ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಆಂದಾಜು ಮಾಡಿತ್ತು.

ದಾವೂದ್‌  ಹೋಟೆಲ್‌, ಅಪಾರ್ಟ್‌ಮೆಂಟ್‌ಗಳು ಮತ್ತು ಐಷರಾಮಿ ಬಂಗಲೆಗಳನ್ನು ಹೊಂದಿದ್ದಾನೆ ಎನ್ನಲಾಗಿದೆ.  61 ವರ್ಷದ ದಾವೂದ್‌ ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT