ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌ಗೆ ಆಗಮಿಸಿದ ಜಪಾನ್‌ ಪ್ರಧಾನಿ ಶಿಂಜೊ ಅಬೆ

Last Updated 13 ಸೆಪ್ಟೆಂಬರ್ 2017, 11:52 IST
ಅಕ್ಷರ ಗಾತ್ರ

ಅಹಮದಾಬಾದ್‌: ಎರಡು ದಿನಗಳ ಭಾರತದ ಪ್ರವಾಸಕ್ಕಾಗಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಬುಧವಾರ ಅಹಮದಾಬಾದ್‌ಗೆ  ಆಗಮಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಂಜೊ ಅಬೆ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಶಿಂಜೊ ಅಬೆ ಅವರು ಭಾರತೀಯರ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಮೋದಿ ಅವರೊಂದಿಗೆ ರೋಡ್‌ ಶೋ ನಡೆಸಿದರು.

ಏಷ್ಯಾದ ಎರಡು ಆರ್ಥಿಕ ಬಲಾಡ್ಯ ರಾಷ್ಟ್ರಗಳ ಮಧ್ಯೆ  ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಅಬೆ ಪ್ರವಾಸದ ಉದ್ದೇಶವಾಗಿದೆ.

ನಾಳೆ ಅಬೆ ಮತ್ತು ಮೋದಿ ಐತಿಹಾಸಿಕ ಬುಲೆಟ್ ರೈಲು ಯೋಜನೆಗೆ ಭೂಮಿ ಪೂಜೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT