7

ಪ್ರಜಾವಾಣಿ ಕ್ವಿಜ್‌

Published:
Updated:

1) ಈ ಕೆಳಕಂಡ ಯಾವ ದೇಶಗಳ ಮೂಲಕ ಭೂಮಧ್ಯರೇಖೆ ಹಾದು ಹೋಗಿದೆ?

a) ಇಂಡೋನೇಷ್ಯಾ

b) ಕೊಲಂಬಿಯಾ

c) ಕೀನ್ಯಾ

d) ಮೇಲಿನ ಎಲ್ಲವೂ

2) ಮ್ಯಾನ್ಮಾರ್‌ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದೇಶಗಳನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?

a) ಥಾಯ್ಲೆಂ‌ಡ್‌

b) ವಿಯೆಟ್ನಾಂ

c) ಬಾಂಗ್ಲಾದೇಶ

d) ಮೇಲಿನ ಎಲ್ಲವೂ

3) ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದಲ್ಲಿದ್ದರೆ, ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ?

a) ತಮಿಳುನಾಡು

b) ತೆಲಂಗಾಣ 

c) ಉತ್ತರಾಂಚಲ

d) ಕೇರಳ

4) ವಿದ್ಯುತ್‌ ಪರಿವರ್ತಕಗಳಲ್ಲಿ ಬಳಸುವ ಫ್ಯೂಸ್‌ ತಂತಿಯನ್ನು ಯಾವ ಎರಡು ಲೋಹಗಳಿಂದ ತಯಾರಿಸಲಾಗಿರುತ್ತದೆ?

a) ತಾಮ್ರ ಮತ್ತು ಸತು

b) ಅಭ್ರಕ ಮತ್ತು ಅಲ್ಯೂಮಿನಿಯಂ 

c) ಸೀಸ ಮತ್ತ ತವರ

d) ಸತು ಮತ್ತು ಹಿತ್ತಾಳೆ

5) ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಬಿಂದುಸಾರನನ್ನು ’ಅಮಿತ್ರೋಖೇಟ್ಸ್‌’ ಎಂದು ಕರೆದಿದ್ದ ದೇಶ ಯಾವುದು? 

a) ಪರ್ಷಿಯನ್‌

b) ಗ್ರೀಕ್‌

c) ಮೆಸಪಟೋಮಿಯಾ

d) ಇಂಗ್ಲೆಂಡ್‌

6) ವೇಸರ ಶೈಲಿಯ ವಾಸ್ತುಶಿಲ್ಪವನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ರಾಜವಂಶ ಯಾವುದು?

a) ಕದಂಬರು

b) ಬಾದಾಮಿ ಚಾಲುಕ್ಯರು

c) ರಾಷ್ಟ್ರಕೂಟರು

d) ವಿಜಯನಗರದ ಅರಸರು

7) ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದರೆ, ಮತ್ತೊಬ್ಬ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಜನ್ಮದಿನ ಯಾವುದು? 

a) ಜನವರಿ 29

b) ಫೆಬ್ರುವರಿ 29

c) ಮಾರ್ಚ್‌ 29

d) ಏಪ್ರಿಲ್‌ 29

8) ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಆಧರಿಸಿ ರಚನೆ ಮಾಡಿದ ಮೊಟ್ಟಮೊದಲ ರಾಜ್ಯ ಯಾವುದು?

a) ಆಂಧ್ರಪ್ರದೇಶ

b) ತಮಿಳುನಾಡು

c) ಉತ್ತರಪ್ರದೇಶ

d) ಅಸ್ಸಾಂ

9) ಅರಿಶಿಣಸಸ್ಯದ ಯಾವ ಭಾಗದಿಂದ 'ಅರಿಶಿಣ'ವನ್ನು ಪಡೆಯಲಾಗುತ್ತದೆ?

a) ಕಾಂಡ

b) ಬೇರು

c) ಎಲೆ

d) ಹೂವು

10) ಜಾತಿಪದ್ಧತಿ ವಿರುದ್ಧ ಹೋರಾಟ ನಡೆಸಿದ್ದ ಪೆರಿಯಾರ್‌ ರಾಮಸ್ವಾಮಿ ತಮಿಳುನಾಡಿನಲ್ಲಿ ಜನಿಸಿದರು. ಆದರೆ ಪೆರಿಯಾರ್‌ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? 

a) ತಮಿಳುನಾಡು

b) ಕೇರಳ

c) ಪುದುಚೇರಿ

d) ಆಂಧ್ರಪ್ರದೇಶ

ಉತ್ತರಗಳು 1-d, 2-d, 3- c, 4-c, 5-b, 6-b, 7-b, 8-a, 9-a, 10-b.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry