5

’ಉಪೇಂದ್ರ ಮತ್ತೆ ಬಾ’ ಟ್ರೇಲರ್‌: ಯುಟ್ಯೂಬ್‌ ಟ್ರೆಂಡಿಂಗ್‌ #2

Published:
Updated:
’ಉಪೇಂದ್ರ ಮತ್ತೆ ಬಾ’ ಟ್ರೇಲರ್‌: ಯುಟ್ಯೂಬ್‌ ಟ್ರೆಂಡಿಂಗ್‌ #2

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಜನುಮದಿನದ ವಿಶೇಷವಾಗಿ ‘ಉಪೇಂದ್ರ ಮತ್ತೆ ಬಾ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು. ಇದೀಗ ಯುಟ್ಯೂಬ್‌ನಲ್ಲಿ ಆ ಟ್ರೇಲರ್‌ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅಭಿನಯಿಸಿದ್ದ ’ಸೊಗ್ಗಾಡೆ ಚಿನ್ನಿ ನಾಯನ’ ಚಿತ್ರದ ರಿಮೇಕ್‌ ‘ಉಪೇಂದ್ರ ಮತ್ತೆ ಬಾ’.  ಇಂತಿ ನಿನ್ನ ಪ್ರೇಮ ಟ್ಯಾಗ್‌ಲೈನ್‌ ಹೊಂದಿರುವ ಈ ಚಿತ್ರದಲ್ಲಿ ಪ್ರೇಮ, ಶೃತಿ ಹರಿಹರನ್‌, ಹರ್ಷಿಕಾ ಪೂಣಚ್ಚ ಹಾಗೂ ಎ ಚಿತ್ರ ಖ್ಯಾತಿಯ ಚಾಂದಿನ ಸೇರಿ ಹಲವು ಕಲಾವಿದರ ಅಭಿನಯವಿದೆ.

ಎಚ್‌2ಒ ಚಿತ್ರ ನಿರ್ದೇಶಿಸಿದ್ದ ಅರುಣ್‌ ಲೋಕನಾಥ್‌ ಈ ಚಿತ್ರವನ್ನು ನಿರ್ದೇಶಿಸಿದ್ದು, ಉಪೇಂದ್ರ ಸಂಭಾಷಣೆ ಬರೆದಿದ್ದಾರೆ. ಶ್ರೀಧರ್‌ ವಿ.ಸಂಭ್ರಮ್‌ ಸಂಗೀತವಿದೆ. ಟ್ರೆಂಡಿಂಗ್‌ #2ರಲ್ಲಿರುವ ಟ್ರೇಲರ್‌  ಈವರೆಗೂ 86 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry