ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ‘ನಾರಾಯಣ್‌’ ಟ್ರೆಂಡ್‌

Last Updated 19 ಸೆಪ್ಟೆಂಬರ್ 2017, 11:06 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ದೆಹಲಿಯಿಂದ ಮೂಡಿಬರುತ್ತಿರುವ ದೆಹಲಿಯ ಚಿತ್ರ ಎಂದು ವಿವರಣೆ ಬರೆದುಕೊಂಡಿರುವ ನಾರಾಯಣ್‌ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ.

ತನ್ನ ಪ್ರೀತಿ ಪಾತ್ರರನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ 40 ವರ್ಷದ ವ್ಯಕ್ತಿ ಮಾಡುವ ಅಸಾಧಾರಣ ಕಾರ್ಯದ ಕಥೆಯನ್ನು ಒಳಗೊಂಡ ನಾರಾಯಣ್‌ ಚಿತ್ರದ ಟ್ರೇಲರ್‌  ಮಂಗಳವಾರ ಬಿಡುಗಡೆಯಾಗಿದೆ. ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಪಟ್ಟಿದೆ. ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಪ್ರತಿಯೊಬ್ಬ ಮಗನಿಗೆ ತಂದೆ ಹೇಗೆ ನಾರಾಯಣ(ರಕ್ಷಕ)ನಾಗುತ್ತಾನೆ ಎಂಬುದು ಚಿತ್ರದ ಪ್ರಮುಖ ಕಥಾ ಎಳೆಯಾಗಿದೆ. ನವೆಂಬರ್‌ 3ರಂದು ಬಿಡುಗಡೆಯಾಗಲಿರುವ ನಾರಾಯಣ್ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಜೋಗೇಶ್‌ ಸೆಹದೇವ್‌ ನಿರ್ವಹಿಸಿದ್ದಾರೆ.

ರಾಹುಲ್‌ ಆಮಾತ್‌, ಏಕ್ಲೊವೆ ಕಶ್ಯಪ್‌, ನಿರ್ನಯ್ ಸಹದೇವ್‌ ಸೇರಿ ಅನೇಕ ಹೊಸ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಾರ್ಯನಿರ್ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT