5

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

Published:
Updated:
ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಹುಚ್ಚ ವೆಂಕಟ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದರ ಹೆಸರು ‘ದುರಹಂಕಾರಿ ಹುಚ್ಚ ವೆಂಕಟ್’. ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ವೆಂಕಟ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

‘ರಿಕ್ಷಾ ಚಾಲಕ, ಬಸ್ ನಿರ್ವಾಹಕ ಸೇರಿದಂತೆ ಹಲವರು ಖಾಕಿ ಬಟ್ಟೆ ಧರಿಸುತ್ತಾರೆ. ಪೊಲೀಸರಿಗೆ ಕೊಡುತ್ತಿರುವ ಬೆಲೆ ಕಡಿಮೆ ಆಗುತ್ತಿದೆ. ಅವರಿಗೆ ಪುನಃ ಬೆಲೆ ಬರಬೇಕು ಎಂಬ ಉದ್ದೇಶದಿಂದ ನಾನು ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು. ಈ ಸಿನಿಮಾಕ್ಕೆ ನಾಯಕಿಯನ್ನು ಅವರು ಹುಡುಕುತ್ತ ಇದ್ದಾರಂತೆ. ಸಿನಿಮಾವು ಡಿಸೆಂಬರ್ ವೇಳೆಗೆ ತೆರೆಗೆ ಬರಲಿದೆ ಎಂದು ವೆಂಕಟ್ ಹೇಳಿಕೊಂಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ವಿಷಯ ಇಟ್ಟುಕೊಂಡು ತಾವು ಸಿನಿಮಾ ಮಾಡುತ್ತಿರುವುದು ಇದೇ ಮೊದಲು ಎಂದೂ ಅವರು ತಿಳಿಸಿದರು. ಇಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ವೆಂಕಟ್ ಅವರು ತಮ್ಮ ಇನ್ನೊಂದು ಸಿನಿಮಾ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟರು.

ಆ ಇನ್ನೊಂದು ಸಿನಿಮಾ ಪತ್ರಕರ್ತರ ಬಗ್ಗೆ ಮಾತನಾಡಲಿದೆಯಂತೆ. ಅದು ಕೂಡ ಡಿಸೆಂಬರ್ ವೇಳೆಗೆ ತೆರೆಗೆ ಬರಲಿದೆ ಎಂದು ವೆಂಕಟ್ ಹೇಳಿದ್ದಾರೆ. ‘ಪತ್ರಕರ್ತರು ಪಡುವ ಕಷ್ಟಗಳನ್ನು ಇದರಲ್ಲಿ ತೋರಿಸುತ್ತೇನೆ’ ಎಂದರು ವೆಂಕಟ್. ಪತ್ರಿಕಾಗೋಷ್ಠಿಯ ನಂತರ ವೆಂಕಟ್ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.

ಎರಡೂ ಸಿನಿಮಾಗಳನ್ನು ದೊಡ್ಡ ಬಜೆಟ್ ಇಲ್ಲದೆಯೇ ಮಾಡಲಾಗುವುದು, ಎರಡೂ ಸಿನಿಮಾಗಳ ನಿರ್ಮಾಣ ತಮ್ಮ ತಂದೆಯವರದ್ದು ಎಂದು ವೆಂಕಟ್ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry