ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಭಾರತದ ಮೇಲೆ ಆರೋಪ ಹೊರಿಸಿದ ಪಾಕ್‍ಗೆ ಮಾತಿನ ಛಡಿಯೇಟು ನೀಡಿದ ದಿಟ್ಟೆ ಈನಮ್ ಗಂಭೀರ್

Last Updated 22 ಸೆಪ್ಟೆಂಬರ್ 2017, 14:21 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ. ಪಾಕ್‍ನಲ್ಲಿ ಉಗ್ರರ ಅಡಗುತಾಣಗಳಿಲ್ಲ. ಗಡಿಯ ಅಶಾಂತಿಗೆ ನಾವು ಕಾರಣರಲ್ಲ. ಜನವರಿಯಿಂದ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದರೂ ನಾವು ಸುಮ್ಮನಿದ್ದೇವೆ. ಭಾರತದ ಪ್ರಚೋದನೆಗೆ ನಮ್ಮ ಸೇನೆ ದಿಟ್ಟ ಉತ್ತರ ನೀಡಲಿದೆ ಎಂದು ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ ಹೇಳಿದ್ದರು.

ಅಬ್ಬಾಸಿಯವರ ಈ ಆರೋಪಕ್ಕೆ ದಿಟ್ಟ ಉತ್ತರ ನೀಡಿದ್ದು ವಿಶ್ವಸಂಸ್ಥೆಯಲ್ಲಿನ ಭಾರತದ ಮೊದಲ ಕಾರ್ಯದರ್ಶಿ ಈನಮ್ ಗಂಭೀರ್.ಶುಕ್ರವಾರ ಅಬ್ಬಾಸಿ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಈನಮ್  ಪಾಕಿಸ್ತಾನ ಈಗ ಭಯೋತ್ಪಾದಕ ರಾಷ್ಟ್ರವಾಗಿದೆ. ಪಾಕ್ ಎಂದರೆ ಉರ್ದು ಭಾಷೆಯಲ್ಲಿ ಶುದ್ಧ ಎಂದರ್ಥ. ಇಂದು ಪಾಕಿಸ್ತಾನ ಟೆರರಿಸ್ತಾನ್ ಆಗಿ ಮಾರ್ಪಟ್ಟಿದೆ. ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮಾನಾರ್ಥಕ ಪದವಾಗಿ ಗುರುತಿಸಿಕೊಂಡಿದೆ. ಆದರೆ ಇದೀಗ ಉಗ್ರ ರಾಷ್ಟ್ರವಾಗಿದೆ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT