ಅಸೀಮಾ ಚಟರ್ಜಿ ಜನ್ಮಶತಮಾನೋತ್ಸಕ್ಕೆ ಗೂಗಲ್‌ ಡೂಡಲ್‌ ಗೌರವ

7

ಅಸೀಮಾ ಚಟರ್ಜಿ ಜನ್ಮಶತಮಾನೋತ್ಸಕ್ಕೆ ಗೂಗಲ್‌ ಡೂಡಲ್‌ ಗೌರವ

Published:
Updated:
ಅಸೀಮಾ ಚಟರ್ಜಿ ಜನ್ಮಶತಮಾನೋತ್ಸಕ್ಕೆ ಗೂಗಲ್‌ ಡೂಡಲ್‌ ಗೌರವ

ಬೆಂಗಳೂರು: ಭಾರತದ ಮಹಿಳಾ ವಿಜ್ಞಾನಿ ಅಸೀಮಾ ಚಟರ್ಜಿ ಅವರ ಜನ್ಮಶತಮಾನೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.
ಸಸ್ಯ ಮೂಲ ಔಷಧಗಳ ಕುರಿತಂತೆ ಅಸೀಮಾ ಅವರು ನಡೆಸಿದ ಸಂಶೋಧನೆ ಮಹತ್ವದ್ದಾಗಿದೆ. ಭಾರತದ ವಿಶ್ವವಿದ್ಯಾಲಯವೊಂದರಿಂದ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಅಸೀಮಾ.

ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದ ಅಸೀಮಾ ಅವರು ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.

ಅಸೀಮಾ ಅವರು 1917ರ ಸೆಪ್ಟೆಂಬರ್‌ 23ರಂದು ಕೋಲ್ಕತ್ತಾದಲ್ಲಿ ಜನಿಸಿದರು. 1935ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry