5

ದೇಶದ ಅಭಿವೃದ್ಧಿ ನಮ್ಮ ಆದ್ಯತೆ; ಮತ ಗಳಿಕೆ ಅಲ್ಲ: ಪ್ರಧಾನಿ ಮೋದಿ

Published:
Updated:
ದೇಶದ ಅಭಿವೃದ್ಧಿ ನಮ್ಮ ಆದ್ಯತೆ; ಮತ ಗಳಿಕೆ ಅಲ್ಲ: ಪ್ರಧಾನಿ ಮೋದಿ

ಷಹನ್‌ಷಾಪುರ್: ದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಬಿಜೆಪಿಗೆ ರಾಜಕೀಯ ಕೇವಲ ಮತ ಪಡೆಯುವುದಕ್ಕಾಗಿ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಅವರು ಶನಿವಾರ ಪಶು ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ಕೃಷಿ ಆಧಾರಿತ ಚಟುವಟಿಕೆಗಳಿಂದ ಆದಾಯ ಗಳಿಕೆ ದುಪ್ಪಟುಗೊಳಿಸುವುದು ಹಾಗೂ 2022ರ ವೇಳೆಗೆ ಮನೆ ಇರದ ಎಲ್ಲರಿಗೂ ವಸತಿ ಒದಗಿಸುವುದಾಗಿ ಹೇಳಿದರು.

‘ಮತಗಳಿಸಿ ಕೊಡುವ ಕಾರ್ಯಗಳನ್ನಷ್ಟೇ ಅನೇಕ ರಾಜಕಾರಣಿಗಳು ಮಾಡುತ್ತಾರೆ. ಆದರೆ, ನಮ್ಮ ಸಂಸ್ಕೃತಿಯೇ ಬೇರೆ. ನಮಗೆ ದೇಶದ ಉನ್ನತಿಯೇ ಮೊದಲು, ಕೇವಲ ಮತ ಗಳಿಕೆಗಾಗಿ ನಮ್ಮ ಕಾರ್ಯವಲ್ಲ’ ಎಂದರು.

1800 ಎಕರೆ ಪ್ರದೇಶದಲ್ಲಿ ಮೊದಲ ಬಾರಿಗೆ ಪಶು ಮೇಳ ಆಯೋಜನೆ ಕುರಿತು ಮಾತನಾಡಿದ ಅವರು, ‘ಈ ಪ್ರಾಣಿಗಳು ಮತ ಚಲಾವಣೆಗಾಗಿ ತೆರಳುವುದಿಲ್ಲ. ಇವು ಯಾರ ಮತಗಳೂ ಅಲ್ಲ. ಜಾನುವಾರುಗಳ ಆರೋಗ್ಯ ಸುಧಾರಣೆ ಕಾರ್ಯಕ್ರಮಗಳಿಂದ ಹಾಲು ಉತ್ಪಾದನೆ ಹೆಚ್ಚಿಸಬಹುದು’ ಎಂದು ಹೇಳಿದರು.

ರೈತರು ಹೈನುಗಾರಿಕೆ ಮತ್ತು ಪಶುಸಂಗೋಪನೆಯನ್ನು ಆದಾಯ ಗಳಿಕೆಗೆ ಪರ್ಯಾಯ ಮಾರ್ಗವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ರೈತರ ಆದಾಯದ ಜತೆಗೆ ದೇಶದ ಒಟ್ಟು ಆದಾಯದಲ್ಲಿ ಹೆಚ್ಚಳವಾಗುತ್ತದೆ ಎಂದರು.

ಶೌಚಾಲಯ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಿದ್ದ ಅವರು, ಅವುಗಳಿಗೆ ಇಝತ್‌ಘರ್‌ ಎಂದು ಹೆಸರಿಸಿರುವುದನ್ನು ಪ್ರಶಂಸಿದರು. ಇಂಥ ಇಝತ್‌ಘರ್‌ಗಳು ಇದ್ದಲ್ಲಿ ನಮ್ಮ ತಾಯಿ ಹಾಗೂ ಸಹೋದರಿಯರಿಗೆ ಗೌರವ ಕೊಟ್ಟಂತೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry