5

ಅತ್ಯಾಚಾರ ಆರೋಪ: ಅಲವರ್‌ನ ಫಲಾಹಾರಿ ಬಾಬಾ ಬಂಧನ

Published:
Updated:
ಅತ್ಯಾಚಾರ ಆರೋಪ: ಅಲವರ್‌ನ ಫಲಾಹಾರಿ ಬಾಬಾ ಬಂಧನ

ಅಲವರ್‌: ಅತ್ಯಾಚಾರ ಆರೋಪದ ಮೇಲೆ ರಾಜಸ್ತಾನದ ಅಲವರ್‌ನ ದಿವ್ಯಧಾಮ ಆಶ್ರಮದ ಕೌಶಲೇಂದ್ರ ಪ್ರಪನ್ನಾಚಾರ್ಯ ಫಲಾಹಾರಿ ಮಹಾರಾಜ್‌ (60) (ಫಲಾಹಾರಿ ಬಾಬಾ) ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ರಕ್ಷಾ ಬಂಧನದ ದಿನವಾದ ಆಗಸ್ಟ್‌ 7ರಂದು ದಿವ್ಯಧಾಮ ಆಶ್ರಮಕ್ಕೆ ಬಾಬಾ ಭೇಟಿಗೆ ಹೋಗಿದ್ದ ವೇಳೆ ಬಾಬಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚತ್ತೀಸ್‌ಗಡ ಮೂಲದ ಯುವತಿಯೊಬ್ಬರು ಬಿಲ್ಸಾಪುರ ಪೊಲೀಸರಿಗೆ ದೂರು ನೀಡಿದ್ದರು. ಬಾಬಾ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದ ಬಿಲ್ಸಾಪುರ ಪೊಲೀಸರು ಮೂರು ದಿನಗಳ ಹಿಂದೆ ಅಲವರ್‌ಗೆ ಬಂದಿದ್ದರು.

‘ಬಾಬಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದಲೇ ಅವರನ್ನು ಬಂಧಿಸಿ ಅಲವರ್‌ನ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಅಲವರ್‌ನ ಅರವಳಿ ವಿಹಾರ್‌ ಠಾಣೆಗೆ ವರ್ಗಾಯಿಸಲಾಗಿದೆ.

ದೂರು ನೀಡಿರುವ ಯುವತಿಯ ಪೋಷಕರು ದಿವ್ಯಧಾಮ ಆಶ್ರಮದ ಭಕ್ತರಾಗಿದ್ದಾರೆ.

ಇವನ್ನೂ ಓದಿ...

ಅತ್ಯಾಚಾರ ಪ್ರಕರಣ: ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ

ಅಸಾರಾಂ ಬಾಪು ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry