ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂದುಟಿಯ ಚೆಲುವಿಗಾಗಿ ಹೀಗೆ ಮಾಡಿ..

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ

*

ನೀರಿನ ಸೇವನೆ: ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ಇದರಿಂದ ತುಟಿಗಳಿಗೂ ಉತ್ತಮ ಆರೈಕೆ ದೊರೆಯುತ್ತದೆ. ತುಟಿ ಕಪ್ಪಾಗುವುದು ತಪ್ಪುತ್ತದೆ.

ಬೀಟ್‌ರೂಟ್‌: ನಿಮ್ಮ ತುಟಿಗಳ ಬಣ್ಣ ಕಪ್ಪಾಗಿದೆಯೇ? ಶೀಘ್ರ ಅದು ಕೆಂಪಾಗಬೇಕೆ? ಬೀಟ್‌ರೂಟ್‌ ರಸವನ್ನು ದಿನದಲ್ಲಿ 4-5 ಬಾರಿ ನಿಮ್ಮ ತುಟಿಗೆ ಹಚ್ಚುತ್ತಾ ಬನ್ನಿ. ಕ್ರಮೇಣ ತುಟಿಯ ಬಣ್ಣ ಬದಲಾಗುತ್ತದೆ.

ಜೇನು ಮತ್ತು ನಿಂಬೆರಸ ಮಿಶ್ರಣ: ನಿಂಬೆರಸಕ್ಕೆ ಅದೇ ಪ್ರಮಾಣದ ಜೇನುತುಪ್ಪ ಬೆರೆಸಿ ತುಟಿಗೆ ಹಚ್ಚಿ. ತುಟಿ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಕಪ್ಪು ಬಣ್ಣ ನಿವಾರಿಸಿದರೆ, ಜೇನು ತುಪ್ಪವು ತುಟಿಗೆ ಮೃದುತ್ವ ನೀಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ತುಟಿಗಳಿಗೆ ಸವರಿ, ಒಂದು ಗಂಟೆ ಬಿಟ್ಟು ತೊಳೆದರೆ ಉತ್ತಮ ಪರಿಣಾಮ ಕಾಣಬಹುದು.

ಗ್ಲಿಸರಿನ್‌: ರಾತ್ರಿ ನಿದ್ರೆ ಮಾಡುವ ಮೊದಲು ತುಟಿಗಳಿಗೆ ಗ್ಲಿಸರಿನ್‌ ಹಚ್ಚಿ. ಒಣ ತ್ವಚೆಯೂ ನಿಮ್ಮ ತುಟಿಗಳ ಕಪ್ಪು ಬಣ್ಣಕ್ಕೆ ಕಾರಣವಾಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT