‘ಧರ್ಮದಿಂದ ಎಲ್ಲ ಮನಸ್ಸುಗಳು ಬೆಸೆಯಲಿ’

ಸೋಮವಾರ, ಜೂನ್ 17, 2019
31 °C

‘ಧರ್ಮದಿಂದ ಎಲ್ಲ ಮನಸ್ಸುಗಳು ಬೆಸೆಯಲಿ’

Published:
Updated:

ವಿಜಯಪುರ: ಧರ್ಮ ಪ್ರಧಾನ ದೇಶವಾದ ಭಾರತದಲ್ಲಿ ಅನೇಕ ಧರ್ಮಗಳು ಇವೆ. ಎಲ್ಲರ ಮನಸ್ಸುಗಳನ್ನು ಬೆಸೆಯುವ ಕೆಲಸ ಧರ್ಮಗಳಿಂದ ನಡೆಯಬೇಕು ಎಂದು ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವಸ್ವಾಮಿಜೀ ಹೇಳಿದರು.

ಗ್ರಂಥಾಲಯದ ಮುಂಭಾಗದಲ್ಲಿ ನವ ದುರ್ಗಾ ಸೇನೆಯ ವಿಜಯಪುರ ಇವರ ವತಿಯಿಂದ ನಡೆಸಲಾಗುತ್ತಿರುವ ಗಣಪತಿ ಮತ್ತು ದುರ್ಗಾದೇವಿಯ ಉತ್ಸವದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಪ್ರತಿಯೊಬ್ಬ ನಾಗರಿಕರು ಧಾರ್ಮಿಕ ಕಾರ್ಯಗಳಿಗೆ ನಿರಂತರ ಪ್ರೋತ್ಸಾಹ ನೀಡಿ, ಧರ್ಮ ಜಾಗೃತಿಯಲ್ಲಿ ಭಾಗಿಯಾಗಬೇಕು. ಈ ದೇಶದಲ್ಲಿ ಹಲವಾರು ಧರ್ಮಗಳು ಪಂಥಗಳಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಮಾನವ ಕಲ್ಯಾಣವೇ ಆಗಿದೆ’ ಎಂದರು.

ಕುವೆಂಪು ಅವರು ಹೇಳಿದಂತೆ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವಲ್ಲಿ ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಂಡಾಗ ಎಲ್ಲ ರಂಗಗಳಲ್ಲಿ ಸೌಹಾರ್ದತೆ ಶಾಂತಿ ಸಾಮರಸ್ಯ ಕಾಣಲು ಸಾಧ್ಯವಾಗುತ್ತದೆ ಎಂದರು.

ಆದಿಶಕ್ತಿ ದ್ರೌಪದಾದೇವಿ ಮಹಾಸಂಸ್ಥಾನ ಬಳುಹಳ್ಳಿಯ ಸಾಯಿ ಮಂಜುನಾಥ್ ಮಹಾರಾಜ ಸ್ವಾಮಿಜಿ ಮಾತನಾಡಿ, ಭೂಮಿಯ ಮೇಲೆ ಧರ್ಮ ಕಡಿಮೆಯಾಗಿ ಕರ್ಮ ತಾಂಡವವಾಡುತ್ತಿದೆ. ಕರ್ಮ ಕಡಿಮೆಯಾಗಿ ಧರ್ಮ ಹೆಚ್ಚಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ನವ ದುರ್ಗಾ ಸೇನೆಯ ಸಂಚಾಲಕ ಎಸ್.ಎಂ.ಸುರೇಶ್ (ಅಣ್ಣಮ್ಮತಾಯಿ ಸುರೇಶ್) ಮಾತನಾಡಿ, ‘ಯುವಜನರು ಧಾರ್ಮಿಕ ಕಾರ್ಯಗಳಿಂದ ದೂರ ಉಳಿಯುತ್ತಿದ್ದಾರೆ. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಹಿರಿಯರು ಉಳಿಸಿಕೊಂಡು ಬಂದಿರುವ ಪರಂಪರೆಯನ್ನು ಉಳಿಸಿಕೊಳ್ಳಬೇಕಾದಂತಹ ಹೊಣೆಗಾರಿಕೆ ನಮ್ಮ ಮೇಲೆ ಇದೆ’ ಎಂದರು.

ದುರ್ಗಾದೇವಿ ಸಮೇತ ಗಣಪತಿ ಉತ್ಸವದ ಅಂಗವಾಗಿ ಗ್ರಂಥಾಲಯದ ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲಿಂದ ಪುರಸಭೆಯವರೆಗೂ ದೀಪಾಂಲಕಾರ ಎಲ್ಲರ ಗಮನ ಸೆಳೆಯಿತು. ನವದುರ್ಗಾ ಸೇನೆಯ ಪದಾಧಿಕಾರಿಗಳು, ನಾಗರಿಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry