ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣಿಗಳು ಮಕ್ಕಳನ್ನು ಸೇನೆಗೆ ಸೇರಿಸಲಿ’

Last Updated 1 ಅಕ್ಟೋಬರ್ 2017, 5:19 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ದೇಶಭಕ್ತಿಯ ಬಗ್ಗೆ ಮಾತನಾಡುವುದರ ಬದಲು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನಿಕರನ್ನಾಗಿ ಮಾಡಿದರೆ ಸಮಾಜಕ್ಕೆ ಮಾದರಿಯಾಗಿರುತ್ತದೆ’ ಎಂದು ನಿವೃತ್ತ ಯೋಧ ಚಂದ್ರಶೇಖರ್ ಹೇಳಿದರು. ಸರ್ದಾರ್ ಭಗತ್‌ಸಿಂಗ್ ಜನ್ಮ ದಿನಾಚರಣೆ ಅಂಗವಾಗಿ ಈಚೆಗೆ ಆಯೋಜಿಸಲಾಗಿದ್ದ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಶ್ರೀಗಂಗಾ ಭಗತ್‌ಸಿಂಗ್ ಚಂದ್ರಶೇಖರ್ ಆಜಾದ್ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಯುವ ಬ್ರಿಗೇಡ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ‘ಸೈನಿಕರಾದವರು ಗಡಿಯಲ್ಲಿ ಸಾಯುತ್ತಾರೆ ಎನ್ನುವ ಕಲ್ಪನೆ ಇಂದಿನ ಮಕ್ಕಳಲ್ಲಿ ನೆಲೆಯೂರಿದೆ. ಹಿರಿಯರಾದವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸೇನೆಯ
ಬಗೆಗಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ದೇಶಭಕ್ತಿ ಹಾಗೂ ಸೇನೆಯಲ್ಲಿನ ಉತ್ತಮ ಸಂಗತಿಗಳನ್ನು ತಿಳಿಸಬೇಕು’ ಎಂದರು.

ವ್ಯಕ್ತಿಗಳಿಗೆ ಸಮಾಜದಲ್ಲಿ ಗುರುತಿಸುವ ಮೂಲಕ ಸಮಾಜಕ್ಕೆ ಸೈನ್ಯದ ಬಗ್ಗೆ ತಿಳಿಸಿಕೊಡಬೇಕು. ಅ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಿಂದ ಹೆಚ್ಚಿನ ಸೈನಿಕರು ಸೈನ್ಯ ಸೇರುವಂತಾಗಲಿ ಎಂದರು.

ನಗರಸಭೆ ಸದಸ್ಯ ತ.ನ.ಪ್ರಭುದೇವ ಮಾತನಾಡಿದ, ಭಾರತೀಯ ಸೇನೆಯಲ್ಲಿ ಅನೇಕ ಸೈನಿಕರು ಪ್ರಾಣದ ಹಂಗನ್ನು ತೊರೆದು ಗಡಿಕಾಯುತ್ತಿದ್ದಾರೆ. ಇಂತಹ ಸೈನಿಕರನ್ನು ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ನೆನೆಯಬೇಕು ಎಂದರು.

ಜೊತೆಗೆ ಭಾರತದ ಸ್ವಾತಂತ್ರ್ಯ ಸ್ವಾತಂತ್ರ್ಯ ಸೇನಾನಿಗಳನ್ನು ಇಂದಿನ ಪೀಳಿಗೆಯ ಮಕ್ಕಳಿಗೆ ಪರಿಚಯಿಸುವುದರ ಮೂಲಕ ದೇಶಾಭಿಮಾನವನ್ನು ಮೂಡಿಸಬೇಕು ಎಂದರು.
ಶ್ರೀರಾಮ ಆಸ್ಪತ್ರೆ ವೈದ್ಯರಾದ ಡಾ.ವಿಜಯಕುಮಾರ್ ಮಾತನಾಡಿ, ‘ಸಮಾಜದಲ್ಲಿ ಸೈನಿಕರು ಹಾಗೂ ರೈತರನ್ನು ಅತ್ಯಂತ ಪ್ರಮುಖವಾಗಿ ನೆನಪಿಸಿಕೊಳ್ಳುತ್ತೇವೆ.

ಪ್ರಧಾನಿಯಾಗಿದ್ದ ಲಾಲ್‌ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈಕಿಸಾನ್ ಎಂಬ ಘೋಷವಾಕ್ಯವನ್ನೇ ನಮಗೆ ನೀಡಿದ್ದಾರೆ. ಇದರ ಜೊತೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವುದು ವೈದ್ಯಕೀಯ ವೃತ್ತಿ. ಜೀವ ರಕ್ಷಣೆಯ ಹೊಣೆ ಸದಾ ನಮ್ಮ ಮೇಲಿರುತ್ತದೆ’ ಎಂದರು.

‘ಡಾ.ರಮೇಶ್‌ಗೌಡ ಕೇವಲ ವೈದ್ಯಕೀಯ ವೃತ್ತಿಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳೊಂದಿಗೆ ದೇಶ ಸೇವೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ನಮಗೆಲ್ಲಾ ಮಾದರಿ’ ಎಂದರು.

ಕ್ರಾಂತಿಕಾರಿ ಹೆಸರು: ನಗರಪ್ರದೇಶಗಳ ಆಸ್ಪತ್ರೆಗಳ ಹೆಸರುಗಳು ವಿಭಿನ್ನವಾಗಿರುತ್ತದೆ. ಜನರನ್ನು ಸೆಳೆ ಯುವ ನಿಟ್ಟಿನಲ್ಲಿ ಸಾಕಷ್ಟು ಆಧುನಿಕ ಹೆಸರುಗಳನ್ನೇ ಆಸ್ಪತ್ರೆಗಳಿಗಿಡಲಾಗಿರುತ್ತದೆ. ಆದರೆ ಡಾ.ರಮೇಶ್‌ಗೌಡ ಅವರು ಆಸ್ಪತ್ರೆಗೆ ಭಗತ್‌ಸಿಂಗ್ ಹಾಗೂ ಚಂದ್ರಶೇಖರ್ ಆಜಾದ್‌ರಂತಹ ಅಪ್ರತಿಮ ಕ್ರಾಂತಿಪುರುಷರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆ ಕೇವಲ ಹೆಸರಿಗೆ ಮಾತ್ರವಲ್ಲದೇ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.

ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು. ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಕೆ. ಸೋಮಶೇಖರ್, ರುಮಾಲೆ ನಾಗರಾಜು ಮಾತನಾಡಿದರು.

ಭಗತ್‌ಸಿಂಗ್‌ ಜನ್ಮದಿನದ ಪ್ರಯುಕ್ತ ತಾಲ್ಲೂಕಿನಲ್ಲಿರುವ 17 ಯೋಧರನ್ನು ಈ ವೇಳೆ ಸನ್ಮಾನಿಸಲಾಯಿತು. ಜೊತೆಗೆ ಮಹಾತ್ಮ ಗಾಂಧಿ ಅವರ ಪುಸ್ತಕಗಳನ್ನು ನೀಡಲಾಯಿತು. ದೊಡ್ಡಬಳ್ಳಾಪುರದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಸಿರ್ಅಹಮದ್, ಕಾರ್ಯದರ್ಶಿ ರವಿಕುಮಾರ್, ಶ್ರೀಗಂಗಾ ಭಗತ್‌ಸಿಂಗ್‌್ ಚಂದ್ರಶೇಖರ್ ಆಜಾದ್ ಆಸ್ಪತ್ರೆಯ ವೈದ್ಯೆ ಡಾ.ವಿಜಯಲಕ್ಷ್ಮಿ, ದೊಡ್ಡಬಳ್ಳಾಪುರ ಸ್ಕ್ಯಾನಿಂಗ್ ಸೆಂಟರ್‌ನ ಜಯಚಂದ್ರ, ಯುವಬ್ರಿಗೇಡ್ ತಾಲ್ಲೂಕು ಸಂಚಾಲಕ ಚೇತನ್ ಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT